ಅಕ್ರಮ ಬಾಂಗ್ಲಾ ನುಸುಳುಕೋರರು ಭಾರತ ಪ್ರವೇಶಿಸುತ್ತಿರುವ ವಿಡಿಯೋ!

By Suvarna NewsFirst Published Dec 28, 2019, 5:57 PM IST
Highlights

ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾರತದೊಳಗೆ ನುಗ್ಗುತ್ತಿರುವ ವಿಡಿಯೋ| ವಿಡಿಯೋ ಟ್ವಿಟ್ ಮಾಡಿದ ತ್ರಿಪುರಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ| ಸಿಮ್ನಾ ಬಳಿಯ ಡಲ್ಡಾಲಿ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆಯ ವಿಡಿಯೋ| ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ವಿರೋಧ ವ್ಯಕ್ತಪಡಿಸಿದ ಪ್ರದ್ಯೋತ್|

ಅಗರ್ತಲಾ(ಡಿ.28): ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾರತದೊಳಗೆ ನುಗ್ಗುತ್ತಿರುವ ವಿಡಿಯೋವನ್ನು ತ್ರಿಪುರಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಟ್ವಿಟ್ ಮಾಡಿದ್ದಾರೆ. 

ನಮ್ಮ ಗಡಿಗಳು ಅಸುರಕ್ಷಿತವಾಗಿದ್ದು, ಸಿಮ್ನಾ ಬಳಿಯ ಡಲ್ಡಾಲಿ ಗಡಿಯಲ್ಲಿ ಬಾಂಗ್ಲಾದೇಶಿಗಳು ಅಕ್ರಮವಾಗಿ ಒಳ ನುಗ್ಗುತ್ತಿದ್ದಾರೆ ಎಂದು ಪ್ರದ್ಯೋತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?

ಈ ಅಕ್ರಮ ವಲಿಸಗರನ್ನು ಐಎಲ್‌ಪಿ ತಡೆಯಲಿದ ಎಂದು ನಿಮಗೆ ಅನಿಸುತ್ತದೆಯೇ ಎಂದು ಪ್ರದ್ಯೋತ್ ತ್ರಿಪುರಾದ ಜನತೆಯನ್ನು ಪ್ರಶ್ನಿಸಿದ್ದಾರೆ.

Hello India,this is how porous our borders are.These Bangladeshi's are crossing over. Location Tripura,Simna, India at Daldali village. Do you think your ILP will stop them?
26th Dec:5 p.m.
The lang,dress,features does not distinguish if they belong to 1 religion or another. pic.twitter.com/g8oUqASPR9

— Pradyot_Tripura (@PradyotManikya)

ಡಲ್ಡಾಲಿ ಬಳಿ ಭತ್ತದ ಗದ್ದೆಯ ಮೂಲಕ ಬಾಂಗ್ಲಾ ಅಕ್ರಮ ವಲಸಿಗರು ತ್ರಿಪುರಾ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ

ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಪ್ರದ್ಯೋತ್, ಇದರಿಂದ ತ್ರಿಪುರಾದ ಬುಡಕಟ್ಟು ಪ್ರದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

click me!