'ಉದಯನಿಧಿ ವಿರುದ್ಧ ದ್ವೇಷಭಾಷಣ ಕೇಸ್‌ ಯಾಕಿಲ್ಲ' ಸಿಜೆಐಗೆ ಪತ್ರ ಬರೆದ ಭಾರತದ 262 ಗಣ್ಯ ವ್ಯಕ್ತಿಗಳು!

Published : Sep 05, 2023, 01:17 PM ISTUpdated : Sep 05, 2023, 01:19 PM IST
'ಉದಯನಿಧಿ ವಿರುದ್ಧ ದ್ವೇಷಭಾಷಣ ಕೇಸ್‌ ಯಾಕಿಲ್ಲ' ಸಿಜೆಐಗೆ ಪತ್ರ ಬರೆದ ಭಾರತದ 262 ಗಣ್ಯ ವ್ಯಕ್ತಿಗಳು!

ಸಾರಾಂಶ

ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಹಾಗೂ ಸಿಎಂ ಎಂಕೆ ಸ್ಟ್ಯಾಲಿನ್‌ ಪುತ್ರ ಉದಯನಿಧಿ ಸ್ಟ್ಯಾಲಿನ್‌ ವಿರುದ್ಧ ಯಾಕೆ ಸುಮೋಟೋ ದ್ವೇಷ ಭಾಷಣದ ಕೇಸ್‌ ಹಾಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ದೇಶದ 262 ಗಣ್ಯರು ಪತ್ರ ಬರೆದಿದ್ದಾರೆ.  


ನವದೆಹಲಿ (ಸೆ.5): ಸನಾತನ ಧರ್ಮ ಡೆಂಘೆ, ಮಲೇರಿಯಾ ಇದ್ದ ರೀತಿ. ಇದನ್ನು ವಿರೋಧಿಸುವುದು ಮಾತ್ರವಲ್ಲ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ಗೆ ಈ ಹೇಳಿಕೆ ಇನ್ನಷ್ಟು ಉರುಳಾಗುವುದು ಖಚಿತವಾಗಿದೆ. ದ್ವೇಷ ಭಾಷಣ ಮಾಡಿದ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ವಿರುದ್ಧ ಈವರೆಗೂ ಯಾಕೆ ಸುಮೋಟೋ ದ್ವೇಷ ಭಾಷಣದ ಕೇಸ್‌ ಯಾಕಾಗಿ ದಾಖಲು ಮಾಡಲಾಗಿಲ್ಲ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರಿಗೆ ದೇಶದ 262 ಗಣ್ಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲಿಯೇ ಸ್ಟ್ಯಾಲಿನ್‌ ತಾನು ನೀಡಿರುವ ಹೇಳಿಕೆಯ ಬಗ್ಗೆ ಕ್ಷಮೆ ಕೇಳುವ ಮಾತೇ ಇಲ್ಲ ಎಂದಿದ್ದಾರೆ. ನ್ಯಾಯಮೂರ್ತಿ ಎಸ್‌ಎನ್ ಧಿಂಗ್ರಾ ಮತ್ತು ನಿವೃತ್ತ ಐಎಎಸ್ ಗೋಪಾಲ್ ಕೃಷ್ಣ ಸೇರಿದಂತೆ 260 ಗಣ್ಯ ವ್ಯಕ್ತಿಗಳು ಸಹಿ ಮಾಡಿದ್ದು ಇದರಲ್ಲಿ 14 ನ್ಯಾಯಾಧೀಶರು, 130 ನಿವೃತ್ತ ಐಎಎಸ್‌ ಅಧಿಕಾರಿಗಳು, 20 ರಾಯಭಾರಿಗಳು, 118 ನಿವೃತ್ತ ಸಶಸ್ತ್ರ ಪಡೆ ಅಧಿಕಾರಿಗಳು ಇದ್ದಾರೆ. ದ್ವೇಷದ ಭಾಷಣದ ಸುಮೋಟೋ ಅರಿಯಲು ಸಿಜೆಐಗೆ ಮನವಿ ಮಾಡಿದ್ದಾರೆ.

ಉದಯನಿಧಿ ಸ್ಟ್ಯಾಲಿನ್‌ ಟೀಕೆಯನ್ನು ಹಿಟ್ಲರ್‌ ಮಾತಿಗೆ ಹೋಲಿಸಿದ ಬಿಜೆಪಿ!

ಭಾನುವಾರ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಡಿಎಂಕೆ ನಾಯಕ ಸನಾತನ ಧರ್ಮವನ್ನು ಕಾಯಿಲೆಗೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಕುರಿತಾಗಿ ದೇಶದ 262 ಗಣ್ಯ ವ್ಯಕ್ತಿಗಳು ಸಿಜೆಐಗೆ ಪತ್ರ ಬರೆದಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ, ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು, "ಉದಯನಿಧಿ ಸ್ಟಾಲಿನ್ ಅವರು ಕೋಮು ಸೌಹಾರ್ದತೆ ಮತ್ತು ಮತೀಯ ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷದ ಭಾಷಣವನ್ನು ಸ್ವಯಂಪ್ರೇರಿತವಾಗಿ ಅರಿಯಬೇಕು" ಎಂದು ಒತ್ತಾಯ ಮಾಡಿದ್ದಾರೆ.

ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ; ಸನಾತನ ಧರ್ಮ ನಿರ್ಮೂಲನೆ ಆಗಬೇಕೆಂಬ ಹೇಳಿಕೆ ಬದಲಿಲ್ಲ: ಉದಯನಿಧಿ ಸಮರ್ಥನೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?