ಉದ್ಧವ್ ಬಹುಮತ ಸಾಬೀತುಪಡಿಸಿದರು: ದಂಡು ಕಟ್ಕೊಂಡು ಫಡ್ನವೀಸ್ ಹೊರ ನಡೆದರು!

By Web Desk  |  First Published Nov 30, 2019, 3:05 PM IST

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಸಿಎಂ ಉದ್ಧವ್ ಠಾಕ್ರೆ| ಠಾಕ್ರೆ ಸರ್ಕಾರದ ಪರ ಒಟ್ಟು 169 ಶಾಸಕರ ಬೆಂಬಲ| ಕಲಾಪ ಬಹಿಷ್ಕರಿಸಿ ಹೊರ ನಡೆದ ಪ್ರತಿಪಕ್ಷ ಬಿಜೆಪಿ| ಬಹುಮತ ಸಾಬೀತಿಗೂ ಮುನ್ನ ಹಂಗಾಮಿ ಸ್ಪೀಕರ್ ಬದಲಿಸಿದ ನಡೆ ವಿರೋಧಿಸಿದ ಬಿಜೆಪಿ| ಬಿಜೆಪಿಯ ಕಾಳಿದಾಸ್ ಕೊಳಂಬ್ಕರ್  ಬದಲಿಸಿ ಎನ್‌ಸಿಪಿ ದಿಲೀಪ್ ವಾಸ್ಲೆ  ಹಂಗಾಮಿ ಸ್ಪೀಕರ್ ಆಗಿ ಆಯ್ಕೆ| ಸ್ಪೀಕರ್ ದಿಢೀರ್ ಬದಲಾವಣೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ| ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಕಲಾಪ ಬಹಿಷ್ಕರಿಸಿ ಹೊರ ನಡೆದ ಬಿಜೆಪಿ|


ಮುಂಬೈ(ನ.30): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಬಹುಮತ ಸಾಬೀತುಪಡಿಸಿದ್ದು, ಬಿಜೆಪಿ ಕಲಾಪ ಬಹುಷ್ಕರಿಸಿ ಹೊರ ನಡೆದಿದೆ.

ವಿಧಾನಸಭೆಯಲ್ಲಿ ನಡೆದ ಬಹುಮತ ಸಾಬೀತು ಪ್ರಕ್ರಿಯೆಲ್ಲಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರದ ಪರ ಒಟ್ಟು 169 ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಮಹಾ ವಿಖಾಸ್ ಅಘಾಡಿ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

Tap to resize

Latest Videos

undefined

‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!

Total votes in favour of Government are 169. https://t.co/4COWoHgoq3

— ANI (@ANI)

ಬಹುಮತ ಸಾಬೀತಿಗೂ ಮುನ್ನ ಹಂಗಾಮಿ ಸ್ಪೀಕರ್ ಬದಲಿಸಿದ ನಡೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸದಸ್ಯರು, ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದರು.

ಬಹುಮತ ಸಾಬೀತಿಗೂ ಮುನ್ನ ಎನ್‌ಸಿಪಿಯ ದಿಲೀಪ್ ವಾಸ್ಲೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು. ಈ ಮೊದಲು ಫಡ್ನವೀಸ್ ಸರ್ಕಾರ ಬಿಜೆಪಿಯ ಕಾಳಿದಾಸ್ ಕೊಳಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿತ್ತು.

BJP leader Devendra Fadnavis: We are going to submit a letter to the Governor asking him to suspend the proceedings of the House, and that the House should follow the Constitution. https://t.co/OJgq74SnVW

— ANI (@ANI)

ಸ್ಪೀಕರ್ ದಿಢೀರ್ ಬದಲಾವಣೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಸರ್ಕಾರದ ನಡೆ ಅಸಂವಿಧಾನಿಕ ಎಂದು ಹರಿಹಾಯ್ದಿದೆ. ಅಲ್ಲದೇ ಈ ನಿರ್ಣಯದ ವಿರುದ್ಧ ಸುಪ್ರಿಂಕೋರ್ಟ್ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದಲ್ಲಿ ಇನ್ಮುಂದೆ ಠಾಕ್ರೆ ಸರ್ಕಾರ್‌

Floor test of Uddhav Thackeray Govt underway in assembly. pic.twitter.com/AdHKM7NxRG

— ANI (@ANI)

ಮಹಾರಾಷ್ಟ್ರದ ಇತಿಹಾಸದಲ್ಲೇ ಇದುವರೆಗೂ ಖಾಯಂ ಸ್ಪೀಕರ್ ಆಯ್ಕೆ ನಡೆಯದೇ ಬಹುಮತ ಸಾಬೀತು ಪ್ರಕ್ರಿತಯೆ ನಡೆದಿಲ್ಲ. ಸರ್ಕಾರಕ್ಕೆ ಪೂರ್ಣ ಬಹುಮತ ಇದೇ ಎಂದ ಮೇಲೆ ಉದ್ಧವ್ ಸರ್ಕಾರ ಏಕೆ ಹೆದರುತ್ತಿದೆ ಎಂದು ಫಡ್ನವೀಸ್ ಪ್ರಶ್ನಿಸಿದ್ದಾರೆ.

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!