ಪೆಹಲ್ಗಾಂ ಸಂತ್ರಸ್ತನ ಪುತ್ರಿ ಹಾಕಿದ ವಿಡಿಯೋಗೆ ಕೆಟ್ಟ ಕಮೆಂಟ್, UAPA ಅಡಿಯಲ್ಲಿ ಯುವಕನ ಬಂಧನ

Published : Jul 06, 2026, 06:41 PM IST
Pahalgam Attack

ಸಾರಾಂಶ

ಪೆಹಲ್ಗಾಂ ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಯೊಬ್ಬರ ಪುತ್ರಿ ಇತ್ತೀಚೆಗೆ ದುರಂತ ನೆನೆದು ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಉಗ್ರರ ದಾಳಿ ಸಮರ್ಥಿಸಿ ಕಮೆಂಟ್ ಮಾಡಿದ್ದ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ. 

ತಿರುವಂತನಪುರಂ (ಜು.04) ಪೆಹಲ್ಗಾಂ ಉಗ್ರ ದಾಳಿಯನ್ನು ಇಡೀ ಭಾರತ ಖಂಡಿಸಿದೆ. ಈ ದಾಳಿ ಬಳಿಕ ಪಾಕಿಸ್ತಾನ ವಿರುದ್ದ ಭಾರತೀಯ ಆಕ್ರೋಶ ತೀವ್ರಗೊಂಡಿದೆ. ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಧರ್ಮ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಕೇರಳದ 65 ವರ್ಷದ ಎನ್ ರಾಮಚಂದ್ರನ್ ಮೃತಪಟ್ಟಿದ್ದರು. ಇತ್ತೀಚೆಗೆ ರಾಮಚಂದ್ರನ ಪುತ್ರಿ ಪೆಹಲ್ಗಾಂ ದಾಳಿ ನೆನೆದು ವಿಡಿಯೋ ಒಂದು ಪೋಸ್ಟ್ ಮಾಡಿದ್ದರು. ಈ ವಿಡಿಯೋಗೆ ಕೇರಳದ 26ರ ಯುವಕ ಮೊಹಮ್ಮದ್ ಸನೂಫ್ ಉಗ್ರ ದಾಳಿ ಸಮರ್ಥಿಸಿ ಕಮೆಂಟ್ ಹಾಕಿದ್ದರು. ಇದೀಗ ಈ ಯುವಕನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲೇ ಬಂಧನ

ಶೇಕಡಾ 100ರಷ್ಟು ಸಾಕ್ಷರತೆಯ ಕೇರಳದ ಯುವಕ ಮೊಹಮ್ಮದ್ ಸನೂಫ್ ಅರಬ್ ರಾಷ್ಟ್ರದಲ್ಲಿದ್ದು ಕಮೆಂಟ್ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಕಮೆಂಟ್ ಮಾಡಿ ತನ್ನ ಶೂರತ್ವ ಮೆರೆದಿದ್ದ. ಆದರೆ ಈ ಕುರಿತು ಕೇರಳ ಬಿಜೆಪಿ ಯುವ ಮೋರ್ಚಾ ದೂರು ನೀಡಿತ್ತು. ಇತ್ತ ಯುವಕ ಸೌದಿಯಲ್ಲಿದ್ದ ಕಾರಣ ತನ್ನನ್ನ ಏನು ಮಾಡಲು ಸಾಧ್ಯವಿಲ್ಲ ಎಂದು ಹಿರಿ ಹಿರಿ ಹಿಗ್ಗಿದ್ದ. ಕೆಲ ದಿನಗಳ ಬಳಿಕ ಈ ಪ್ರಕರಣ ತಣ್ಣಗಾಗಿದೆ. ಇದರ ನಡುವೆ ದುಬೈನಿಂದ ಆಗಮಿಸಿದ ಯುವಕನನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ.

ಮೊಹಮ್ಮದ್ ಸನೂಫ್ ಬಂಧಿಸಿದ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಈತನ ಮೊಬೈಲ್‌ನಲ್ಲಿ ಉಗ್ರರ ಸಮರ್ಥಿಸಿರುವ ಹಲವು ಪೋಸ್ಟ್‌ಗಳು, ಬರಹಗಳು ಪತ್ತೆಯಾಗಿದೆ. ಹೀಗಾಗಿ ಪ್ರಕರಣದ ಗಂಭೀರತೆ ಅರಿತ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೇಶದ್ರೋಹಕ್ಕೆ ಸಂಚು, ದ್ವೇಷ ಬಿತ್ತನೆ, ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲೆ ಬಿದ್ದಿದೆ.

ಇದೀಗ ಪೊಲೀಸರು ಈತನಿಗೆ ಉಗ್ರರೊಂದಿಗೆ ಸಂಪರ್ಕವಿದೆಯಾ ಅನ್ನೋ ಕುರಿತು ತನಿಖೆ ನಡಸೆುತ್ತಿದ್ದಾರೆ. ಧಾರ್ಮಿಕ ಗುಂಪುಗಳು, ಸಂಘಟನೆಗಳ ನಡುವೆ ವಿಷ ಬೀಜ ಬಿತ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡಲು ತಯಾರಿ ನಡೆಸಿದ್ದ ಎನ್ನಾಲಗುತ್ತಿದೆ. ಹೀಗಾಗಿ ಈತನ ವಿಚಾರಣೆ ತೀವ್ರಗೊಳಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನ ರೀತಿಯ ಸೌಕರ್ಯ, 180ಕಿ.ಮೀ ಸ್ಪೀಡ್, ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ವಿಶೇಷತೆ
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!