ಸಾವಾಗಿ ಬಂದ ಮಾರ್ಜಾಲ... ಬೆಕ್ಕು ಕಡಿದು ಇಬ್ಬರು ಮಹಿಳೆಯರ ಸಾವು

Suvarna News   | Asianet News
Published : Mar 07, 2022, 03:52 PM ISTUpdated : Mar 07, 2022, 03:58 PM IST
ಸಾವಾಗಿ ಬಂದ ಮಾರ್ಜಾಲ... ಬೆಕ್ಕು ಕಡಿದು ಇಬ್ಬರು ಮಹಿಳೆಯರ ಸಾವು

ಸಾರಾಂಶ

ಆಂಧ್ರಪ್ರದೇಶದಲ್ಲಿ ಬೆಕ್ಕು ಕಡಿದು ಇಬ್ಬರು ಮಹಿಳೆಯರು ಸಾವು ಬೆಕ್ಕು ಕಡಿತದಿಂದಾಗಿ ರಾಬಿಸ್‌ ಸೋಂಕಿಗೊಳಗಾಗಿದ್ದ ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಸಾವು

ವಿಜಯವಾಡ(ಮಾ.7) ಬೆಕ್ಕಿನಿಂದ ಕಡಿತಕ್ಕೊಳಗಾದ ಎರಡು ತಿಂಗಳ ನಂತರ ಮಹಿಳೆಯರಿಬ್ಬರು ರಾಬಿಸ್‌ನಿಂದ ಸಾವಿಗೀಡಾದ ಘಟನೆ ಆಂಧ್ರಪ್ರದೇಶ ರಾಜ್ಯದ ವೇಮುಲವಾಡದಲ್ಲಿ (Vemulavada) ನಡೆದಿದೆ. ಇಲ್ಲಿನ ಮೊವ್ವಾ ಮಂಡಲಕ್ಕೆ (Movva mandal) ಸೇರುವ ವೇಮುಲವಾಡ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 

ಮೊವ್ವಾ ಪೊಲೀಸರ ಪ್ರಕಾರ ಮೃತಪಟ್ಟ ಮಹಿಳೆಯರನ್ನು 64 ವರ್ಷದ ಸಾಲಿ ಕಮಲಾ (Saali Kamala) ಹಾಗೂ 43 ವರ್ಷದ ಬೊಡ್ಡು ನಾಗಮಣಿ (Boddu Nagamani) ಎಂದು ಗುರುತಿಸಲಾಗಿದೆ. ಇವರಿಬ್ಬರು ವೇಮುಲವಾಡದ (Vemulavada) ಗ್ರಾಮದ ದಲಿತವಾಡ (Dalitawada) ಕಾಲೋನಿಯ ನಿವಾಸಿಗಳಾಗಿದ್ದಾರೆ. ಇವರಿಬ್ಬರಿಗೂ ಎರಡು ತಿಂಗಳ ಹಿಂದೆ ನಾಗಮಣಿ ಅವರ ಮನೆ ಮುಂದೆ ಕುಳಿತಿದ್ದಾಗ ಬೆಕ್ಕೊಂದು ಕಚ್ಚಿತ್ತು ಎಂದು ಈ ಮಹಿಳೆಯರ ಕುಟುಂಬ ಸದಸ್ಯರು ಪೊಲೀಸರಿಗೆ ಹೇಳಿದ್ದಾರೆ. 

ಕೇಟ್‌ ಅಲ್ಲ ಕ್ಯಾಟ್... ಟೈಟಾನಿಕ್‌ ಸಿನಿಮಾದಲ್ಲಿ ಹಿರೋಯಿನ್ ಬದಲು ಬೆಕ್ಕು... ಎಡಿಟರ್‌ ಕೈಚಳಕಕ್ಕೆ ಬೆರಗಾದ ಇಂಟರ್‌ನೆಟ್‌
 

ಬೆಕ್ಕು ಕಚ್ಚಿದ ಕೂಡಲೇ ಇವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ವೈದ್ಯರು ಟೆಟನಸ್‌ (ಟಿಟಿ) ಚುಚ್ಚುಮದ್ದನ್ನು ನೀಡಿದ್ದರು. ಜೊತೆಗೆ ವೈದ್ಯರು ಬೇರೆ ಔಷಧಿಯನ್ನು ಕೂಡ ನೀಡಿದ್ದರು. ಅಲ್ಲದೇ ವೈದ್ಯರು ಇವರ ಆರೋಗ್ಯವನ್ನು ನಿಯಮಿತವಾಗಿ ಗಮನಿಸುತ್ತಿದ್ದರು. 

ಕಳೆದ ಗುರುವಾರ ಈ ಮಹಿಳೆಯರಿಬ್ಬರು ಅನಾರೋಗ್ಯಕ್ಕೀಡಾಗಿದ್ದರು. ಹಾಗೂ ವಿಜಯವಾಡದ (Vijayawada) ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಅವರ ಆರೋಗ್ಯ ತೀವ್ರ ಹದ್ದಗೆಟ್ಟಿದ್ದು ಆಸ್ಪತ್ರೆಯಲ್ಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇವರಿಬ್ಬರೂ ಬೆಕ್ಕಿನಿಂದ ಕಡಿತಕ್ಕೊಳಗಾದ ನಂತರ ರಾಬಿಸ್‌ (rabies) ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಒಂದೇ ಪ್ರದೇಶದ ಇಬ್ಬರು ಮಹಿಳೆಯರ ದಿಢೀರ್ ಸಾವಿನಿಂದಾಗಿ ಗ್ರಾಮದಲ್ಲಿ ವಿಷಾದದ ವಾತಾವರಣವಿದೆ ಎಂದು ಪೊಲೀಸರು ಹೇಳಿದ್ದಾರೆ. 

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ 

ರಾಬಿಸ್ ಪ್ರಾಣಿಗಳಿಂದ ಮನುಷ್ಯರಿಗೆ ಬರುವಂತಹ ಕಾಯಿಲೆಯಾಗಿದೆ. ಪ್ರಾಣಿಗಳಲ್ಲಿ ತೀವ್ರವಾದ ಮಿದುಳಿನ ಉರಿಯೂತ ಉಂಟು ಮಾಡುವ ರೇಬೀಸ್, ಒಂದು ವೈರಸ್‍ಗಳಿಂದುಂಟಾಗುವ ರೋಗ. ಜ್ವರ ಮತ್ತು ಕಚ್ಚಲಾದ ಜಾಗದಲ್ಲಿ ಜುಮುಗುಟ್ಟುವಿಕೆ ರೋಗದ ಆರಂಭಿಕ ಲಕ್ಷಣವಾಗಿದೆ. ಇದಲ್ಲದೇ  ಅನಿಯಂತ್ರಿತ ಉದ್ವೇಗ, ನೀರಿನ ಭಯ, ದೇಹದ ಅಂಗಗಳ ಚಲನೆಗೆ ಆಗದೇ ಇರುವುದು, ಗೊಂದಲ, ಮತ್ತು ಪ್ರಜ್ಞೆ ಕಳೆದುಕೊಳ್ಳುವುದು. ಈ  
ರೋಗಲಕ್ಷಣಗಳು ಕಂಡುಬಂದ ನಂತರ ರೇಬೀಸ್ ಬಹುಮಟ್ಟಿಗೆ ಸಾವನ್ನುಂಟು ಮಾಡುತ್ತದೆ. ರೋಗ ತಗಲುವಿಕೆ ಮತ್ತು ರೋಗಲಕ್ಷಣಗಳ ಆರಂಭವಾಗುವಿಕೆಯ ನಡುವಿನ ಅವಧಿ ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳುಗಳಾಗಿರುತ್ತದೆ. ಕೆಲವೊಮ್ಮೆ, ಈ ಕಾಲಾವಧಿಯು ವಿಭಿನ್ನವಾಗಿ ಅಂದರೆ ಒಂದು ವಾರಕ್ಕಿಂತ ಕಡಿಮೆ ಸಮಯದಿಂದ ಹಿಡಿದು ಒಂದು ವರ್ಷಕ್ಕಿಂತ ಹೆಚ್ಚೂ ಇರಬಹುದು. ಕಾಲಾವಧಿಯು, ವೈರಸ್ ಕೇಂದ್ರ ನರಮಂಡಲವನ್ನು ತಲುಪಲು ಸಾಗಬೇಕಾದ ದೂರವನ್ನು ಆಧರಿಸಿರುತ್ತದೆ.

ಮಾನವರಿಗೆ ರೇಬೀಸ್ ಇತರ ಪ್ರಾಣಿಗಳ ಮೂಲಕ ವರ್ಗಾಂತರವಾಗುತ್ತದೆ. ಸೋಂಕು ತಗಲಿದ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಅಥವಾ ಮನುಷ್ಯರನ್ನು ಪರಚಿದಾಗ ಅಥವಾ ಕಚ್ಚಿದಾಗ ರೇಬೀಸ್ ಸೋಂಕು ತಗುಲಬಲ್ಲದು. ಸೋಂಕು ತಗಲಿದ ಪ್ರಾಣಿಯ ಜೊಲ್ಲು, ಮತ್ತೊಂದು ಪ್ರಾಣಿ ಅಥವಾ ಮನುಷ್ಯರ ಲೋಳೆ ಪೊರೆಯೊಡನೆ ಸಂಪರ್ಕಕ್ಕೆ ಬಂದರೆ, ಅಂತಹ ಜೊಲ್ಲು ಸಹ ರೇಬೀಸ್ ಅನ್ನು ವರ್ಗಾಂತರಿಸಬಲ್ಲದು. ಮನುಷ್ಯರಲ್ಲಿನ ರೇಬೀಸ್  ಪ್ರಕರಣ ಬಹಳಷ್ಟು ನಾಯಿಕಡಿತದಿಂದ ಉಂಟಾದುವು.  ಸಾಮಾನ್ಯವಾಗಿ ರೇಬೀಸ್ ಹೊಂದಿರುವ ದೇಶಗಳಲ್ಲಿ 99%ಕ್ಕಿಂತ ಹೆಚ್ಚು ರೇಬೀಸ್ ಪ್ರಕರಣಗಳು ನಾಯಿಕಡಿತದಿಂದ ಉಂಟಾದವುಗಳಾಗಿರುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ