
ಕೆಲವರಿಗೆ ಎಷ್ಟಿದ್ದರೂ ಸಾಲುವುದಿಲ್ಲ. ಇನ್ನೂ ಕೆಲವರು ಇರುವುದರಲ್ಲೇ ಸುಖ ಕಾಣುವಂತಹ ಜನರು ಯಾಕೆ ಈ ಮಾತು ಅಂತಿರಾ? ಅನೇಕರು 30*40 ಸೈಟ್ ನಲ್ಲಿ ಮನೆ ಕಟ್ಟಿದ್ದವರೇ ಜಾಗ ಸಾಕಾಗಲ್ಲ, ಮನೆ ಸಣ್ಣದಾಯ್ತು ಎಂದು ಗೋಳಾಡುತ್ತಾರೆ. ಹೀಗಿರುವಾಗ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಬರೀ ಮೂರು ಅಡಿ ಜಾಗದಲ್ಲಿ ಎರಡು ಮಹಡಿಯ ಮನೆ ಕಟ್ಟಿದ್ದು, ಈ ಮನೆಯ ವೀಡಿಯೋ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆದರೆ ಈ ಮನೆ ಎಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ವೀಡಿಯೋದಲ್ಲಿ ಇಲ್ಲ. ಆದರೆ ಮೂರು ಅಡಿಗೂ ಕಡಿಮೆ ಜಾಗದಲ್ಲಿ ನಿರ್ಮಿಸಿದ ಮನೆ ಎಂದು ಈ ವಿಡಿಯೋ ವೈರಲ್ ಆಗ್ತಿದ್ರೆ ಕೆಲವರು ಇದನ್ನು ಎಐ ವೀಡಿಯೋ ಎಂದು ಹೇಳುತ್ತಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಈ ಮನೆಯೂ ಎರಡು ಅಂತಸ್ಥಿನ ಮನೆಯಾಗಿದ್ದು, ಮನೆಯ ಕೆಳಭಾಗದಲ್ಲಿ ಅಂಗಡಿಗಳನ್ನು ನಿರ್ಮಿಸುವುದಕ್ಕೆ 5 ಶಟರ್‌ಗಳಿರುವ ಪ್ರತ್ಯೇಕ ಪ್ರತ್ಯೇಕವಾಗ ಶಾಪ್‌ಗಾಗಿ ಬಳಸುವಂತಹ ಜಾಗ ಮಾಡಲಾಗಿದೆ. ಹಾಗೆಯೆ ಮೊದಲ ಮಹಡಿಗೆ ನೆಲದಿಂದ ಮೆಟ್ಟಿಲನ್ನು ನಿರ್ಮಿಸಲಾಗಿದ್ದು, ಮೆಟ್ಟಿಲು ಹತ್ತುತ್ತಿದ್ದಂತೆ ಬಾಗಿಲು ಸಿಗುತ್ತದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಕತ್ರಾದಲ್ಲಿ ಈ ಮನೆ ಇದೆ ಎನ್ನಲಾಗುತ್ತಿದ್ದು, @renuy305 ಎಂಬುವವರು ಈ ಮನೆಯ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂರು ಅಡಿಗಿಂತ ಕಡಿಮೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಸಂಪೂರ್ಣ ಮನೆ ಈಗ ವಿಶಿಷ್ಟ ಮನೆ ಎಂದು ಎಲ್ಲರ ಗಮನ ಸೆಳೆಯುತ್ತಿದೆ. ಸರಿಸುಮಾರು 3 ಅಡಿ ಅಗಲದ ಜಾಗದಲ್ಲಿ ನಿರ್ಮಿಸಲಾದ ಈ ಮನೆ ಚಿಕ್ಕದಾಗಿ ಕಾಣಿಸಬಹುದು, ಆದರೆ ಅದನ್ನು ನಿರ್ಮಿಸಿದವರ ದೃಷ್ಟಿಕೋನ, ಕಠಿಣ ಪರಿಶ್ರಮ ಮತ್ತು ಧೈರ್ಯದಲ್ಲಿ ಇದು ವಿಶಾಲವಾಗಿದೆ. ಐದು ಅಂಗಡಿಗಳಿರುವ ಕತ್ರಾದ ಈ ಸ್ಥಳದಲ್ಲಿ ಮೆಟ್ಟಿಲುಗಳ ಬಳಿ ಉಳಿದಿರುವ ಸಣ್ಣ ಜಾಗದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಸಾಮಾನ್ಯ ಜನರು ಮನೆ ನಿರ್ಮಿಸುವುದನ್ನು ಊಹಿಸಲೂ ಸಾಧ್ಯವಾಗದಿರುವಾಗ ವ್ಯಕ್ತಿಯೊಬ್ಬರು ಬಲವಾದ ದೃಢಸಂಕಲ್ಪದಿಂದ ಸಣ್ಣ ಜಾಗದಲ್ಲಿಯೂ ಕನಸಿನ ಮನೆ ನಿರ್ಮಿಸಬಹುದು ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ದಿನ ತಾಳಿ ಮರೆತಂತೆ ಸಿಂದೂರವನ್ನೇ ಮರೆತೋದ ಕುಟುಂಬ: ಅನಾಹುತ ತಪ್ಪಿಸಿದ ಬ್ಲಿಂಕಿಟ್
ಆದರೆ ಈ ಪೋಸ್ಟ್‌ಗೆ ಸಖತ್ ಕಾಮೆಂಟ್ ಮಾಡಿದ್ದಾರೆ. ಈ ಕಟ್ಟಡದಲ್ಲಿರುವ ಅಂಗಡಿಯ ಬೆಲೆ ಎಷ್ಟು ಎಂದು ಒಬ್ಬರು ಕೇಳಿದ್ದಾರೆ. ಕೆಳಗೆ ಪಾನ್ ಅಂಗಡಿ ಮೇಲೆ ಮನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ