
ನವದೆಹಲಿ [ಜ.31]: 2019ರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ 8 ತಿಂಗಳು ಕಳೆದರೂ, ಉತ್ತರ ಪ್ರದೇಶದ ಘೋಸಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಬಿಎಸ್‌ಪಿ ಅಭ್ಯರ್ಥಿಯೊಬ್ಬರು ಇದುವರೆಗೂ ಪ್ರಮಾಣವಚನ ಸ್ವೀಕಾರವನ್ನೇ ಮಾಡಿಲ್ಲ!
ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಎಸ್‌ಪಿ ಸಂಸದ ಅತುಲ್ ರಾಯ್‌ಗೆ ಕಡೆಗೂ ಪ್ರಮಾಣವಚನ ಸ್ವೀಕರಿಸಲು ಸುಪ್ರೀಂಕೋರ್ಟ್ ಪರೋಲ್ ನೀಡಿ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಅವರು ಇಂದು ಶಪಥಗ್ರಹಣ ಮಾಡಿ ಜೈಲಿಗೆ ಮರಳಲಿದ್ದಾರೆ.
ಜೆಡಿಯು ಬಿಟ್ಟ ಪ್ರಶಾಂತ್ ಕಿಶೋರ್ ಜೆಡಿಎಸ್‌ಗೆ?: ದೊಡ್ಡ ಗೌಡರ ಪ್ಲ್ಯಾನ್ ಏನು?...
ಜನಪ್ರತಿನಿಧಿಯಾಗಿ ಆಯ್ಕೆಯಾದವರು ಸಂಸತ್ತಿನ ಒಟ್ಟು 60 ದಿನದ ಕಲಾಪದೊಳಗೆ ಪ್ರಮಾಣವಚನ ಸ್ವೀಕರಿಸಬೇಕು. ಇಲ್ಲದಿದ್ದರೆ ಅವರ ಸದಸ್ಯತ್ವ ಅನರ್ಹವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ 5 ಸಾವಿರ ರೂ. ಮಾಸಿಕ ವೇತನ: ಸರ್ಕಾರದ ಘೋಷಣೆ!
ಅತುಲ್ ವಿರುದ್ಧ ಕಳೆದ ವರ್ಷ ಮೇ 1ರಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅಂದಿನಿಂದ ಅವರು ತಲೆಮರೆಸಿಕೊಂಡಿದ್ದರು. ಅವರ ಅನುಪಸ್ಥಿತಿಯಲ್ಲೇ ಚುನಾವಣಾ ಪ್ರಚಾರ ನಡೆದು, ಅಖಿಲೇಶ್- ಮಾಯಾವತಿ ಜಂಟಿ ಪ್ರಚಾರ ನಡೆಸಿದ್ದರು. 1 ಲಕ್ಷಕ್ಕೂ ಅಧಿಕ ಮತಗಳ ಅಂತರದೊಂದಿಗೆ ಅತುಲ್ ಜಯಭೇರಿ ಬಾರಿಸಿದ್ದರು. ಆದರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನ್ಯಾಯಾಲಯಗಳು ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ಜೂನ್‌ನಿಂದ ಜೈಲಿನಲ್ಲಿದ್ದಾರೆ. ಅವರಿಗೆ ಕಾಯಂ ಜಾಮೀನೂ ಸಿಕ್ಕಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ