"ಮೊದಲು ನಾನು ಏನು ಹೇಳುತ್ತಿದ್ದೇನೆ ಅನ್ನೋದು ಕೇಳಿಸಿಕೊಳ್ಳಿ" ಸುದ್ದಿಗೋಷ್ಠಿಯಿಂದ ಹೊರ ನಡೆದ ರಾಹುಲ್ ಗಾಂಧಿ

By Mahmad Rafik  |  First Published Jul 9, 2024, 4:52 PM IST

ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುವಂತೆ ಸಿದ್ಧವಾಗಿರುವ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿ ಸುದ್ದಿಗೋಷ್ಠಿಯಿಂದ ಹೊರ ನಡೆದ್ರು ರಾಹುಲ್ ಗಾಂಧಿ.


ಇಂಫಾಲ್: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi, Leader Of Opposition) ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೇ ಹೊರ ನಡೆದಿದ್ದಾರೆ. ಮಣಿಪುರದಲ್ಲಿ (Manipur) ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಮೊದಲು ನಾನು ಏನು ಹೇಳುತ್ತಿದ್ದೇನೆ ಅದನ್ನು ಗೌರವಿಸಿ. ನಾನು ಇಲ್ಲಿಗೆ ಸ್ಪಷ್ಟವಾದ ಸಂದೇಶ ರವಾನಿಸಲು ಬಂದಿದ್ದೇನೆ. ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುವಂತೆ ಸಿದ್ಧವಾಗಿರುವ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ. ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸಿದ್ದೇನೆ. ಭಾರತದಲ್ಲಿರುವ ಸುಂದರ ರಾಜ್ಯಗಳ ಪೈಕಿ ಮಣಿಪುರ ಸಹ ಒಂದಾಗಿದೆ ಎಂದು ಹೇಳಿ ಸುದ್ದಿಗೋಷ್ಠಿ ಮೊಟಕುಗೊಳಿಸಿ ತೆರಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಗಳು ಮಣಿಪುರಕ್ಕೆ ಬಂದು ಇಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಬೇಕು ಅನ್ನೋದು ನನ್ನ ಅಭಿಪ್ರಾಯವಾಗಿದೆ. ಮಣಿಪುರ ಸಹ ಭಾರತದ ಒಂದು ರಾಜ್ಯವಾಗಿದೆ. ಇಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಳಮಟ್ಟದಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

Tap to resize

Latest Videos

ದೇವಸ್ಥಾನದ ಡೋರ್‌ ಮ್ಯಾಟ್ ಮೇಲೆ ರಾಹುಲ್ ಗಾಂಧಿ ಫೋಟೋ, ಹಿಂದೂಗಳನ್ನ ಹಿಂಸಾಚಾರಿ ಎನ್ನಲು ಎಷ್ಟು ಧೈರ್ಯ ಎಂದ ಭಕ್ತರು

ಪ್ರಧಾನಿಗಳು ಮಣಿಪುರಕ್ಕೆ ಬರಲಿ

ಮಣಿಪುರ ಹಿಂಸಾಚಾರದಿಂದ ತತ್ತರಿಸಿದ್ದು, ಪ್ರಧಾನಿಗಳು ಸಮಯ ಮಾಡಿಕೊಂಡು ಒಂದು ಅಥವಾ ಎರಡು ದಿನ ಮಣಿಪುರಕ್ಕೆ ಭೇಟಿ ನೀಡುವುದು ಅತ್ಯವಶ್ಯಕವಾಗಿದೆ. ಸದ್ಯದ ಪರಿಸ್ಥಿತಿಯ ಸುಧಾರಣೆಗಾಗಿ ಕೇಂದ್ರ ಸರ್ಕಾರದ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಸಹ ಬೆಂಬಲ ನೀಡುತ್ತದೆ. ಆದ್ರೆ ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರಧಾನಿಗಳು ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಮತ್ತೆ ತಮ್ಮ ಹೇಳಿಕೆಯನ್ನು ಪುನರುಚ್ಚಿಸಿದರು. 

ರಾಹುಲ್ ಗಾಂಧಿ ಮೊದಲು ಅಸ್ಸಾಂನ ಸಿಲ್ಚಾರ್-ಕಾಚಾರ್ ತಲುಪಿ ಅಲ್ಲಿಯ ಲೆರ್ಟಾಲ್‌ನಲ್ಲಿರುವ ತಲೈ ಇನ್ ಯೂತ್ ಕೇರ್ ಸೆಂಟರ್‌ನಲ್ಲಿರುವ ಶಿಬಿರಕ್ಕೆ ಭೇಟಿ ನೀಡಿದರು. ನಂತರ ಮಧ್ಯಾಹ್ನ 12 ಗಂಟೆ ವೇಳೆಗೆ ಜಿರಿಬಾಮ್ ತಲುಪಿದರು. ಜಿರಿಬಾಮ್ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿಯ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು. ಮಧ್ಯಾಹ್ನ 3 ಗಂಟೆಗೆ ಇಂಫಾಲ್‌ನ ಚುರಾಚಂದ್‌ಪುರದಲ್ಲಿರುವ ಮಂದಪ್ ತುಬಾಂಗ್ ಪರಿಹಾರ ಶಿಬಿರದಲ್ಲಿ ಮಣಿಪುರ ಹಿಂಸಾಚಾರದ ಸಂತ್ರಸ್ತರನ್ನು ಜೊತೆ ಸಂಭಾಷಣೆ ನಡೆಸಿದರು. ಅಲ್ಲಿಂದ ನೇರವಾಗಿ ಸಂಜೆ 5 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲೆ ಅನುಸೂಯಾ ಅವರನ್ನು ಭೇಟಿಯಾದರು. 

ಮಣಿಪುರದಲ್ಲಿ ಶಾಂತಿ ನೆಲೆಸಲು ಕಾಂಗ್ರೆಸ್ ಸಾಧ್ಯವಿರುವ ಎಲ್ಲವನ್ನು ಮಾಡಲಿದೆ: ರಾಹುಲ್ ಗಾಂಧಿ

| Imphal, Manipur: When asked questions by reporters after his press conference, Lok Sabha LoP and Congress MP Rahul Gandhi says, "...Please respect what I am saying. I have come here to give a clear message, I am not interested in answering questions that are designed to… pic.twitter.com/bmOxdbEohT

— ANI (@ANI)
click me!