ಏಕಾಏಕಿ ಕುಸಿದ ಕಟ್ಟಡ, ಇಬ್ಬರು ಸಾವು: ಸಂತಾಪ ಸೂಚಿಸಿದ ಪಿಎಂ ಮೋದಿ!

By Suvarna NewsFirst Published Jun 1, 2021, 1:43 PM IST
Highlights

* ವಾರಾಣಸಿಯಲ್ಲಿ ಕುಸಿದ ಕಟ್ಟಡ, ಇಬ್ಬರು ಸಾವು

* ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನ ಮಂತ್ರಿ ಮೋದಿ

* ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಒದಗಿಸಲು ಪಿಎಂ ಸೂಚನೆ

ವಾರಾಣಸಿ(ಜೂ.01): ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ಹಳೇ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಇನ್ನು ಈ ಹಳೇ ಕಟ್ಟಡ ಕಾಶಿ ವಿಶ್ವನಾಥ ಧಾಮದ ಸಮೀಪದಲ್ಲಿತ್ತು ಎಂಬುವುದು ಉಲ್ಲೇನೀಯ. ಘಟನೆ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ,ಮೋದಿ ಈ ಬಗ್ಗೆ ಮಾಹಿತಿ ಪಡೆದಿದ್ದು, ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಾರಾಣಸಿಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

'ಕಾಶಿ ಮಸೀದಿ ತೆರವು ಮಾಡುತ್ತೇವೆ'!

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕರೆ ಮಾಡಿ ವಾರಾಣಸಿಯಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿರುವ ಪಿಎಂ, ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಒದಗಿಸುವಂತೆ ಸೂಚಿಸಿದ್ದಾರೆ. ಈ ದುರಂತದಲ್ಲಿ ಗಾಯಗೊಂಡವರಿಗೂ ಸೂಕ್ತ ಚಿಕಿತ್ಸೆ ಒದಗಿಸುವಂತೆ ಪ್ರಧಾನ ಮಂತ್ರಿ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ಕಟ್ಟಡ ಕುಸಿತ ದುರಂತ ಸಂಬಂಧ ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ಒದಗಿಸುವುದಾಗಿಯೂ ಪ್ರಧಾನ ಮಂತ್ರಿ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರ ಮಾರ್ಗದರ್ಶನ ಹಾಗೂ ಬೆಂಬಲಕ್ಕೆ ನಾವು ಅಭಾರಿಯಾಗಿದ್ದೇವೆಂದೂ ವಾರಾಣಸಿಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PM called us this morning and enquired about the building collapse in Varanasi. He expressed condolences to the bereaved families and instructed us to provide all possible support to them. He also directed us to provide proper medical care to the injured.

— DM VARANASI (@dmvaranasi2016)

ಕಾಶಿ ವಿಶ್ವನಾಥ ಮಂದಿರದ ಭಾಗ ನೆಲಸಮ ಮಾಡಿ ಮಸೀದಿ ನಿರ್ಮಾಣ; ಸಮೀಕ್ಷೆಗೆ ಕೋರ್ಟ್ ಒಪ್ಪಿಗೆ!

ಶಿಥಿಲಗೊಂಡ ಕಟ್ಟಡದಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾದ ವಲಸೆ ಕಾರ್ಮಿಕರು ವಾಸಿಸುತ್ತಿದ್ದರೆನ್ನಲಾಗಿದೆ. ಸದ್ಯ NDRF ತಂಡ ರಕ್ಷಣಾ ಕಾರ್ಯ ಮುಂದುವರೆಸಿದೆ. ಇನ್ನು ವಾರಾಣಸಿ ಪ್ರಧಾನ ಮಂತ್ರಿ ಮೋದಿಯವರ ಲೋಕಸಭಾ ಕ್ಷೇತ್ರವೆಂಬುವುದು ಉಲ್ಲೇಖನೀಯ. 

click me!