
ನವದೆಹಲಿ(ಅ.20): ಬಾಂಗ್ಲಾದೇಶದಲ್ಲಿ(Bangladesh) ನಿರಂತರ ಹಿಂದೂಗಳ ಮೇಲೆ, ಹಿಂದೂ ದೇಗುಲ ಮೇಲೆ, ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಯುತ್ತಿದೆ. ಹಲವರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದೇಗುಲ, ಮೂರ್ತಿಗಳು ಧ್ವಂಸಗೊಳಿಸಲಾಗಿದೆ. ಇದರ ವಿರುದ್ಧ ಬಾಂಗ್ಲಾದೇಶದ ಹಿಂದೂಗಳು(Bangla Hindu) ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗೆ ಹಿಂದೂಗಳ ಮೇಲಿನ ದಾಳಿ ವಿರೋಧಿಸಿದ ಇಸ್ಕಾನ್(ISKCON) ಹಾಗೂ ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್ ಟ್ವಿಟರ್ ಖಾತೆಯನ್ನು ಟ್ವಿಟರ್ ರದ್ದು ಮಾಡಿದೆ. ಟ್ವಿಟರ್ ನಿರ್ಧಾರವನ್ನು ಸದ್ಗುರು ಜಗ್ಗಿ ವಾಸುದೇವ್ ಪ್ರಶ್ನಿಸಿದ್ದಾರೆ.
ಬಾಂಗ್ಲಾ 66 ಹಿಂದೂಗಳ ಮನೆ ಧ್ವಂಸ, 20 ಮನೆಗೆ ಬೆಂಕಿ!
ಅಪರಾಧಿಗಳನ್ನು ರಕ್ಷಿಸಿ, ದಾಳಿಗೊಳಗಾದ ಬಲಿಪಶುಗಳನ್ನು ಶಿಕ್ಷಿಸುತ್ತಿದೆ ಟ್ವಿಟರ್. ಇದು ಟ್ವಿಟರ್‌ನ ನ್ಯಾಯವೇ? ಇದು ಅತ್ಯಂತ ಕ್ರೂರ ಎಂದು ಸದ್ಗುರು ಜಗ್ಗಿವಾಸುದೇವ್(Sadguru) ಟ್ವೀಟ್ ಮೂಲಕ ಟ್ವಿಟರ್ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಸದ್ಗುರ ಪರ ಹಲವರು ಧನಿಗೂಡಿಸಿದ್ದಾರೆ. ವಿಕೃತಿ ಮೆರೆಯುತ್ತಿರುವ ಉಗ್ರರು, ತಾಲಿಬಾನ್‌ಗಳು, ದಾಳಿಕೋರರ ಟ್ವಿಟರ್ ಖಾತೆಗಳು ಈಗಲೂ ಸಕ್ರಿಯವಾಗಿದೆ. ಆದರೆ ದಾಳಿಗೊಳಗಾದ ವ್ಯಕ್ತಿಗಳು, ಸಂಸ್ಥೆಗಳ ಟ್ವಿಟರ್ ಖಾತೆ ರದ್ದಾಗಿದೆ. ಇದು ಹಿಂದೂಗಳನ್ನು ಮುಗಿಸಲು ಉಗ್ರರ ಜೊತೆ ಟ್ವಿಟರ್ ಕೂಡ ಸೇರಿಕೊಂಡಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿದ ಹಿಂದೂ ಇಸ್ಕಾನ್ ದೇಗುಲದ ಟ್ವಿಟರ್ ಖಾತೆ ಹಾಗೂ ಬಾಂಗ್ಲಾ ಹಿಂದೂ ಟ್ವಿಟರ್ ಖಾತೆಯನ್ನು ಯಾವ ಕಾರಣಕ್ಕೆ ಬ್ಯಾನ್ ಮಾಡಿದೆ? ದಾಳಿಯನ್ನು ವಿರೋಧಿಸಿದ್ದು ಯಾವ ತಪ್ಪು? ಈ ಕುರಿತು ಇಸ್ಕಾನ್ ಟ್ವಿಟರ್‌ನ್ನು ಪ್ರಶ್ನಿಸಿದೆ.
ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!
ಒಂದೆಡೆಯಿಂದ ದುಷ್ಕರ್ಮಿಗಳು ಬಾಂಗ್ಲಾದೇಶದ ಹಿಂದೂಗಳ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ. ಸತತ ದಾಳಿ ಮಾಡುತ್ತಿದ್ದಾರೆ. ಹಿಂದೂಗಳ ಹತ್ಯೆ ನಡೆಯುತ್ತಿದೆ. ಇದನ್ನು ವಿರೋಧಿಸಿ ಧ್ವನಿ ಎತ್ತಲೂ ಇದೀಗ ಟ್ವಿಟರ್ ಕೂಡ ನಿರ್ಬಂಧ ವಿಧಿಸಿರುವುದು ದುರಂತ ಎಂದು ಇಸ್ಕಾನ್ ವಕ್ತಾರ ಯುದಿಷ್ಠಿರ ಗೋವಿಂದ ದಾಸ್ ಹೇಳಿದ್ದಾರೆ.
ವಿಶ್ವ ಹಿಂದೂ ಫೆಡರೇಶನ್ ಬಾಂಗ್ಲಾದೇಶ ನೀಡಿದ ವರದಿ ಪ್ರಕಾರಣ ಅಕ್ಟೋಬರ್ 13 ರಿಂದ 17ರ ವರೆಗಿನ ನಾಲ್ಕು ದಿನಗಲ್ಲಿ ಬಾಂಗ್ಲಾದೇಶದ 335 ಹಿಂದೂ ದೇಗುಲ ಮೇಲೆ ದಾಳಿ ನಡೆದಿದೆ. 33 ಜಿಲ್ಲೆಗಳಲ್ಲಿ ಈ ದಾಳಿ ನಡೆಸಲಾಗಿದೆ. ದೇವಸ್ಥಾನದ ಮೇಲೆ ದಾಳಿ ಮಾಡಿ ಮೂರ್ತಿಗಳ ಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ. ಅಡ್ಡಿಪಡಿಸಿದವರನ್ನು ಹತ್ಯೆ ಮಾಡಲಾಗಿದೆ.
ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯಲ್ಲಿ 1,800 ಹಿಂದೂಗಳ ಮನೆ ಹಾಗೂ ಅಂಗಡಿಗಳನ್ನು ಬೆಂಕಿ ಹೆಚ್ಚಿ ಸುಡಲಾಗಿದೆ. 300 ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಿ ಹಣ, ನಗದು, ವಸ್ತುಗಳನ್ನು ದೋಚಲಾಗಿದೆ. ನಾಲ್ಕು ದಿನದ ದಾಳಿಯಲ್ಲಿ 20ಕ್ಕೂ ಹೆಚ್ಚು ಹಿಂದೂಗಳು ಸಾವನ್ನಪ್ಪಿದ್ದಾರೆ. 23 ಹಿಂದೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ವಿಶ್ವ ಹಿಂದೂ ಫೇಡರೇಶನ್ ದಾಖಲೆ ನೀಡಿದೆ.
ಬಾಂಗ್ಲಾ ಹಿಂದೂಗಳ ಮೇಲೆ ಹಿಂಸೆ: ಕಠಿಣ ಕ್ರಮಕ್ಕೆ ಹಸೀನಾ ಆದೇಶ!
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಭಾರತದ ಹಲವು ಹಿಂದೂ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪ ಸಂಖ್ಯಾತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿದೆ.
ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ, ಸೂಕ್ತ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಹೆಚ್ಚಿನ ಭದ್ರತಾ ಪಡೆ ನಿಯೋಜಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ