ಲಡಾಕ್ ಮ್ಯಾಪ್ ಎಡವಟ್ಟು, ಕೇಂದ್ರದ ತಪರಾಕಿ, ತಪ್ಪಿಗೆ ಲಿಖಿತ ಕ್ಷಮೆಯಾಚಿಸಿದ ಟ್ವಿಟರ್

By Suvarna NewsFirst Published Nov 18, 2020, 5:39 PM IST
Highlights

ಟ್ವಿಟರ್ ಗೆ ತಪರಾಕಿ/ ಲಿಖಿತ ಕ್ಷಮಾಪಣೆ ಕೇಳಿದ ಸಾಮಾಜಿಕ ತಾಣ/ ಲಡಾಕ್ ಮ್ಯಾಪ್ ನಲ್ಲಿ ಎಡವಟ್ಟು/ ಹಿಂದೊಮ್ಮೆ ಚೀನಾಕ್ಕೆ ಸೇರಿಸಿತ್ತು/ ನವೆಂಬರ್ ಅಂತ್ಯದ ವೇಳೆಗೆ ಎಲ್ಲವನ್ನು ಸರಿ ಮಾಡುತ್ತೇನೆ

ನವದೆಹಲಿ(ನ. 18) ಕೇಂದ್ರ ಸರ್ಕಾರ  ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.  ಆದರೆ ಟ್ವಿಟರ್ ಮಾತ್ರ ಹಳೆಯ ನಕಾಶೆಯನ್ನೇ ತೋರಿಸುತ್ತಿತ್ತು. ಲಡಾಕ್ ನಕಾಶೆಯಲ್ಲಿಯೂ ಎಡವಟ್ಟು ಮಾಡಿತ್ತು. 

ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲು ತಿಳಿಸಿತ್ತು. ಇದೀಗ ಟ್ವಿಟರ್ ಲಿಖಿತವಾಗಿ ಕ್ಷಮಾಪಣೆಯನ್ನು ಸಂಸದೀಯ ಮಂಡಳಿ ಮುಂದೆ ಕೇಳಿದೆ. ಕ್ಷಮಾಪಣೆ ಕೇಳಿದ್ದು ಅಲ್ಲದೆ ನವೆಂಬರ್  30 ರೊಳಗೆ ಎಲ್ಲ ತಪ್ಪುಗಳನ್ನು ಸರಿ ಮಾಡುತ್ತೇನೆ  ಎಂದು  ಸೋಶಿಯಲ್ ಮೀಡಿಯಾ ಸೈಟ್ ಹೇಳಿದೆ.

ಭಾರತದ ಮೇಲೆ ಚೀನಾ ದಾಳಿ ಎಂದು ಬೊಗಳೆ ಬಿಟ್ಟ ಮಾಧ್ಯಮ

ಲೇಹ್ ಲಡಾಕ್ ನ್ನು ಜಮ್ಮು ಕಾಶ್ಮೀರದ ಭಾಗ ಎಂದು ಟ್ವಿಟರ್ ತೋರಿಸುತ್ತಿತ್ತು. ತಿದ್ದುಪಡಿಯಾಗಿ ಒಂದು ವರ್ಷ ಕಳೆದಿದ್ದರೂ ಟ್ವಿಟರ್ ತಿದ್ದಿಕೊಂಡಿರಲಿಲ್ಲ.  ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಸಂಸದೀಯ ಮಂಡಳಿ ಟ್ವಿಟರ್ ಗೆ ಕೇಳಿತ್ತು.

ಇದಕ್ಕೂ ಮುನ್ನ ಟ್ವಿಟರ್ ಲೇಹ್ ಪ್ರದೇಶವನ್ನು ಚೀನಾಕ್ಕೆ ಸೇರಿಸಿತ್ತು.  ಕೇಂಧ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ವಿಚಾರವನ್ನು ಗಮನಕ್ಕೆ ತಂದಾಗ ಸರಿ ಮಾಡಿತ್ತಾದರೂ ಜಮ್ಮು ಕಾಶ್ಮೀರದ ಭಾಗ ಎಂದು ತೋರಿಸುತ್ತ ಇತ್ತು. ಇದೀಗ ಲಿಖಿತ ಕ್ಷಮಾಪಣೆ ಕೇಳಿದ್ದು ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. 

 

click me!