ಕರ್ನಾಟಕ, ತಮಿಳುನಾಡಲ್ಲಿ ಹುಲಿ ಸಂರಕ್ಷಣೆಗೆ ಟಿವಿಎಸ್‌ 2 ಕೋಟಿ ನೆರವು

Published : Jul 29, 2023, 01:00 PM IST
ಕರ್ನಾಟಕ, ತಮಿಳುನಾಡಲ್ಲಿ ಹುಲಿ ಸಂರಕ್ಷಣೆಗೆ ಟಿವಿಎಸ್‌ 2 ಕೋಟಿ ನೆರವು

ಸಾರಾಂಶ

ಹುಲಿ ಸಂರಕ್ಷಣೆಯ ಕುರಿತಾಗಿ ನಮಗಿರುವ ಬದ್ಧತೆ, ಕಾರ್ಪೋರೆಟ್‌ ಮೀರಿದ ಸಾಮಾಜಿಕ ಜವಾಬ್ದಾರಿಯ ಪ್ರತಿಬಿಂಬವಾಗಿದೆ. ಇತರ ಕಾರ್ಪೋರೆಟ್‌ ಕಂಪನಿಗಳು ಸಹ ಇದೇ ರೀತಿಯ ಪ್ರಾಕೃತಿಕ ಜವಾಬ್ದಾರಿ ತೆಗೆದುಕೊಳ್ಳಲು ನಾವು ಪ್ರಚೋದನೆ ನೀಡುತ್ತೇವೆ: ಸ್ವರನ್‌ ಸಿಂಗ್‌ 

ಚೆನ್ನೈ(ಜು.29):  ಕರ್ನಾಟಕ ಮತ್ತು ತಮಿಳುನಾಡು ಭಾಗದಲ್ಲಿ ಹುಲಿ ಸಂರಕ್ಷಣೆಗಾಗಿ 2 ಕೋಟಿ ರು. ನೆರವು ನೀಡುವುದಾಗಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮತ್ತು ಸುದಂರಂ ಕ್ಲೇಟಾನ್‌ ಲಿ., ನ ಸಾಮಾಜಿಕ ವಿಭಾಗವಾದ ಶ್ರೀನಿವಾಸನ್‌ ಸರ್ವೀಸ್‌ ಟ್ರಸ್‌ ಹೇಳಿದೆ.

ಈ ಸಂಸ್ಥೆ ಅರಣ್ಯ ಇಲಾಖೆಯ ಸಿಬ್ಬಂದಿಯ ಜೀವನ ಮಟ್ಟ ಸುಧಾರಿಸಲು, ಕಳ್ಳಬೇಟೆ ತಡೆಯಲು ಸೋಲಾರ್‌ ಬೇಲಿ ಅಳವಡಿಕೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಸಹಕಾರಿಯಾಗಲು ಈ ನೆರವು ನೀಡಲಾಗುತ್ತಿದೆ.

ಕರ್ನಾಟಕದ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆ: ಹುಲಿಗಣತಿ ವರದಿ ಬಿಚ್ಚಿಟ್ಟ ಸಚಿವ ಈಶ್ವರ ಖಂಡ್ರೆ

‘ಹುಲಿ ಸಂರಕ್ಷಣೆಯ ಕುರಿತಾಗಿ ನಮಗಿರುವ ಬದ್ಧತೆ, ಕಾರ್ಪೋರೆಟ್‌ ಮೀರಿದ ಸಾಮಾಜಿಕ ಜವಾಬ್ದಾರಿಯ ಪ್ರತಿಬಿಂಬವಾಗಿದೆ. ಇತರ ಕಾರ್ಪೋರೆಟ್‌ ಕಂಪನಿಗಳು ಸಹ ಇದೇ ರೀತಿಯ ಪ್ರಾಕೃತಿಕ ಜವಾಬ್ದಾರಿ ತೆಗೆದುಕೊಳ್ಳಲು ನಾವು ಪ್ರಚೋದನೆ ನೀಡುತ್ತೇವೆ’ ಎಂದು ಸಂಸ್ಥೆಯ ಮುಖ್ಯಸ್ಥ ಸ್ವರನ್‌ ಸಿಂಗ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ