ದುಬೈ ಲಕ್ಕಿ ಡ್ರಾ ಗೆದ್ದ ಭಾರತೀಯನಿಗೆ ಜಾಕ್‌ಪಾಟ್, 25 ವರ್ಷ ಪ್ರತಿ ತಿಂಗಳು ಸಿಗಲಿಗೆ 5.5 ಲಕ್ಷ ರೂ!

Published : Jul 29, 2023, 12:49 PM IST
ದುಬೈ ಲಕ್ಕಿ ಡ್ರಾ ಗೆದ್ದ ಭಾರತೀಯನಿಗೆ ಜಾಕ್‌ಪಾಟ್, 25 ವರ್ಷ ಪ್ರತಿ ತಿಂಗಳು ಸಿಗಲಿಗೆ 5.5 ಲಕ್ಷ ರೂ!

ಸಾರಾಂಶ

ದುಬೈನಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ. ಇಡೀ ಕುಟುಂಬಕ್ಕೆ ಈತನೇ ಆಧಾರ. ವಯಸ್ಸಾದ ತಂದೆ ತಾಯಿ, ಮಕ್ಕಳು, ಸಹೋದರ ಕುಟುಂಬ ಸೇರಿದಂತೆ ಎಲ್ಲವೂ ಈತನ ವೇತನದಲ್ಲೇ ಸಾಗಬೇಕಿತ್ತು. ಹೀಗಿರುವಾಗಿ ದುಬೈನ ಫಾಸ್ಟ್ 5 ಮೆಘಾ ಪ್ರೈಜ್ ವಿನ್ನರ್ ಲಕ್ಕಿ ಡ್ರಾ ಟಿಕೆಟ್ ತೆಗೆದಿದ್ದಾನೆ. ಇದೀಗ ಭಾರತೀಯನಿಗೆ ಜಾಕ್‌ಪಾಟ್ ಹೊಡೆದಿದೆ. ಕಾರಣ ಮುಂದಿನ 25 ವರ್ಷ ಪ್ರತಿ ತಿಂಗಳು 5.5 ಲಕ್ಷ ರೂಪಾಯಿ ಬಹುಮಾನವಾಗಿ ಪಡೆಯಲಿದ್ದಾನೆ.

ದುಬೈ(ಜು.29): ದುಬೈ ಲಾಟರಿ, ದುಬೈ ಲಕ್ಕಿ ಡ್ರಾ ಜಾಕ್‌ಪಾಟ್ ಮೂಲಕ ಹಲವು ಭಾರತೀಯರು ತಮ್ಮ ಬದುಕು ಬದಲಿಸಿಕೊಂಡಿದ್ದಾರೆ. ಇದೀಗ ಉತ್ತರ ಪ್ರದೇಶದ ಮೊಹಮ್ಮದ ಆದಿಲ್ ಖಾನ್‌ ದುಬೈನ ಫಾಸ್ಟ್ 5 ಮೆಘಾ ಪ್ರೈಜ್ ವಿನ್ನರ್ ಲಕ್ಕಿ ಡ್ರಾ ಜಾಕ್‌ಪಾಟ್ ಹೊಡೆದಿದೆ. ಈ ಟಿಕೆಟ್‌ನ ವಿಶೇಷತೆ ಎಂದರೆ ಒಂದೇ ಸಲ ಕೋಟಿ ಕೋಟಿ ರೂಪಾಯಿ ಬಹುಮಾನ ನೀಡುವುದಲ್ಲ. ಲಕ್ಕಿ ಡ್ರಾದಲ್ಲಿ ಮೊದಲ ಬಹುಮಾನ ಗೆದ್ದವರಿಗೆ ಪ್ರತಿ ತಿಂಗಳು ಹಣ. ಮುಂದಿನ 25 ವರ್ಷದ ವರೆಗೆ ಈ ಬಹುಮಾನ ಮೊತ್ತ ನೀಡಲಾಗುತ್ತದೆ. ಇದೀಗ ಮೊಹಮ್ಮದ್ ಆದಿಲ್ ಖಾನ್ ಪ್ರತಿ ತಿಂಗಳು 5.5 ಲಕ್ಷ ರೂಪಾಯಿಯಂತೆ ಪ್ರತಿ ತಿಂಗಳು ಪಡೆಯಲಿದ್ದಾರೆ. ಮುಂದಿನ 25 ವರ್ಷ ಪ್ರತಿ ತಿಂಗಳು ಮೊಹಮ್ಮದ್ ಆದಿಲ್ ಖಾನ್ ಬಹುಮಾನ ಮೊತ್ತ ಪಡೆಯಲಿದ್ದಾರೆ.

ದುಬೈನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಮೊಹಮ್ಮದ್ ಆದಿಲ್ ಖಾನ್ ಕೆಲಸ ಮಾಡುತ್ತಿದ್ದಾನೆ. ಉತ್ತಮ ವೇತನವೂ ಇದೆ. ಆದರೆ ಭಾರತದಲ್ಲಿರುವ ಮೊಹಮ್ಮದ್ ಕುಟುಂಬಕ್ಕೆ ಈ ವೇತನ ಸಕಾಗುತ್ತಿಲ್ಲ. ಕಾರಣ ಕೊರೋನಾ ವೇಳೆ ಈತನ ಸಹೋದರ ಮೃತಪಟ್ಟಿದ್ದಾನೆ. ಸಹೋದರ ಪತ್ನಿ ಹಾಗೂ ಮಕ್ಕಳ ಖರ್ಚು ವೆಚ್ಚ, ತನ್ನ ಪೋಷಕರು, ತನ್ನ ಕುಟುಂಬದ ಖರ್ಚು ವೆಚ್ಚ ಎಲ್ಲವೂ ಮೊಹಮ್ಮದ್ ಆದಿಲ್ ಖಾನ್ ವೇತನದಲ್ಲೇ ಸಾಗಬೇಕು. ಹೀಗಾಗಿ ವೇತನ ಸಾಲುತ್ತಿರಲಿಲ್ಲ. ಇದೇ ವೇಳೆ ಸಿಕ್ಕಿರುವ ಜಾಕ್‌ಪಾಟ್ ಮೊಹಮ್ಮದ್ ಆದಿಲ್ ಖಾನ್ ಕುಟುಂಬದ ಬದುಕನ್ನೇ ಬದಲಿಸಿದೆ.

ದುಬೈನಲ್ಲಿರುವ ಭಾರತೀಯರಿಗೆ ಬಂಪರ್, ಲಕ್ಕಿ ಡ್ರಾದಲ್ಲಿ 21 ಲಕ್ಷ ಮೊತ್ತ!

ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಇಂಟಿರೀಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಆದಿಲ್ ಖಾನ್, ಫಾಸ್ಟ್ 5 ಮೆಘಾ ಪ್ರೈಜ್ ವಿನ್ನರ್ ಲಕ್ಕಿ ಡ್ರಾ ಟಿಕೆಟ್ ಖರೀದಿಸಿದ್ದಾನೆ. ಈತನ ಜೊತೆಯಲ್ಲಿರುವ ಹಲವರು ಹಲವು ಬಾರಿ ಈ ಟಿಕೆಟ್ ಖರೀದಿಸಿ ನಿರಾಸೆ ಅನುಭವಿಸಿದ್ದರು. ಸಹದ್ಯೋಗಿಗಳು ಟಿಕೆಟ್ ಖರೀದಿಸುವ ವೇಳೆ ತನಗೂ ಇರಲಿ ಎಂದು ಒಂದು ಲಕ್ಕಿ ಡ್ರಾ ಟಿಕೆಟ್ ಖರೀದಿಸಿದ್ದಾನೆ. ಬಳಿಕ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

ಲಕ್ಕಿ ಡ್ರಾ ಘೋಷಣೆಯಾಗುತ್ತಿದ್ದಂತೆ ಈ ಸುದ್ದಿ ಮಿಂಚಿನಂತೆ ಹರಿದಾಡಿದೆ. ಈ ಸುದ್ದಿ ಕೇಳಿದ ತಕ್ಷಣ ಮೊಹಮ್ಮದ್ ಆದಿಲ್ ಖಾನ್‌ಗೆ ನಂಬಲು ಸಾಧ್ಯವಾಗಿಲ್ಲ. ಇದು ಸುಳ್ಳು ಸುದ್ದಿ ಇರಬಹುದು. ಅಥವಾ ತನ್ನ ಖಾತೆಯಿಂದ ಹಣ ದೋಚಲು ದಂಧೆಕೋರರು ಮಾಡಿದ ಷಡ್ಯಂತ್ರ ಎಂದು ಭಾವಿಸಿದ್ದಾನೆ. ಆದರೆ ಇದು ಸತ್ಯವಾಗಿತ್ತು. ಮೊಹಮ್ಮದ್ ಆದಿಲ್ ಖಾನ್ ಮುಂದಿನ 25 ವರ್ಷದ ವರೆಗೆ  ಪ್ರತಿ ತಿಂಗಳು 5,59,879 ರೂಪಾಯಿ ಬಹುಮಾನ ಮೊತ್ತ ಪಡೆಯಲಿದ್ದಾನೆ.

Viral News : ಇವ ಎಷ್ಟು ಅದೃಷ್ಟವಂತಾರೀ..! ಒಂದು ವರ್ಷ ಸಿಕ್ಕಿದೆ ರಜಾ

ಲಕ್ಕಿ ಡ್ರಾ ಗೆದ್ದ ಬೆನ್ನಲ್ಲೇ ಮೊಹಮ್ಮದ್ ಆದಿಲ್ ಖಾನ್ ಸಂತಸ ಡಬಲ್ ಆಗಿದೆ. ಈ ಮಾಹಿತಿಯನ್ನು ಕುಟುಂಬದ ಜೊತೆ ಹಂಚಿಕೊಂಡಿದ್ದಾನೆ. ಈ ವೇಳೆ ಕುಟುಂಬವೂ ಕೂಡ ಈತನ ಮಾತನ್ನು ನಂಬಲಿಲ್ಲ. ಇದು ಸುಳ್ಳಾಗಿರಬಹುದು ಎಂದುಕೊಂಡಿದ್ದಾರೆ. ಕೊನೆಗೆ ಸತ್ಯ ಅರಿವಾದಾಗ ಸಂತಸಕ್ಕೆ ಪಾರವೇ ಇರಲಿಲ್ಲ. ಈ ಕುರಿತು ಮೊಹಮ್ಮದ್ ಆದಿಲ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಸಮಸ್ಯೆಯಲ್ಲಿದ್ದ ನನಗೆ ಹಾಗೂ ಕುಟುಂಬಕ್ಕೆ ಇದು ಸಂಜೀವನಿಯಾಗಿದೆ. ಪ್ರತಿ ತಿಂಗಳು ಸರಿಸುಮಾರು 5.5 ಲಕ್ಷ ರೂಪಾಯಿ ಪಡೆಯಲಿದ್ದೇನೆ. ನನ್ನ ಹಾಗೂ ಕುಟುಂಬದ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗಲಿದೆ ಎಂದು ಮೊಹಮ್ಮದ್ ಆದಿಲ್ ಖಾನ್ ಹೇಳಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ