ಪವನ್ ಕಲ್ಯಾಣ್ ಡೈವೋರ್ಸ್ ಬೆನ್ನಲ್ಲೇ ಮುರಿದುಬಿತ್ತು ಮತ್ತೊಬ್ಬ ಸಚಿವನ 14 ವರ್ಷಗಳ ದಾಂಪತ್ಯ!

Published : Nov 17, 2026, 10:34 AM IST
Adhav Arjuna Divorce

ಸಾರಾಂಶ

ತಮಿಳುನಾಡಿನ ಪ್ರಮುಖ ನಾಯಕ ಮತ್ತು ಸಚಿವ ಆಧವ್ ಅರ್ಜುನ್ ಹಾಗೂ ಅವರ ಪತ್ನಿ ಡೈಸಿ ಮಾರ್ಟಿನ್ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿರುವ ಇವರು, ಮಗುವಿನ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Adhav Arjuna Divorce: ಇತ್ತೀಚೆಗೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್, ಅನ್ನಾ ಜೊತೆಗಿನ ಹನ್ನೊಂದು ವರ್ಷಗಳ ದಾಂಪತ್ಯ ಮುರಿದುಬಿದ್ದು ವಿಚ್ಛೇದನ ಪಡೆದಿದ್ದು ಭಾರೀ ಸುದ್ದಿಯಾಯ್ತು. ಇದೀಗ ತಮಿಳು ರಾಜಕಾರಣದ ಪ್ರಮುಖ ನಾಯಕರೊಬ್ಬರು ಕೂಡ ತಮ್ಮ ಹದಿನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೌದು. ತಮಿಳುನಾಡು ರಾಜಕೀಯದ ಪ್ರಮುಖ ನಾಯಕ ಹಾಗೂ ಹಾಲಿ ರಾಜ್ಯ ಸಚಿವರಾಗಿರುವ ಆಧವ್ ಅರ್ಜುನ್ ಮತ್ತು ಅವರ ಪತ್ನಿ ಡೈಸಿ ಮಾರ್ಟಿನ್ ವಿಚ್ಛೇದನ ಘೋಷಿಸಿದ್ದಾರೆ ಆ ಮೂಲಕ ತಮ್ಮ ಹದಿನಾಲ್ಕು ವರ್ಷಗಳ ದಾಂಪತ್ಯ ಕೊನೆಗೊಳಿಸಿದ್ದಾರೆ.

ವಿಚ್ಛೇದನ ಕುರಿತಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಆಧವ್ ಅರ್ಜುನ್ ಹಾಗೂ ಪತ್ನಿ ಡೈಸಿ ಮಾರ್ಟಿನ್ ತಾವಿಬ್ಬರೂ ಪರಸ್ಪರ ಒಪ್ಪಿಗೆ ಮೂಲಕವೇ ದಾಂಪತ್ಯ ಕೊನೆಗೊಳಿಸುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾಲಿವಡ್ ಮತ್ತು ತಮಿಳನಾಡು ರಾಜಕಾರಣದ ಈ ಇಬ್ಬರು ಸೆಲೆಬ್ರಿಟಿಗಳು ದಿಢೀರ್ ಡೈವೋರ್ಸ್ ಘೋಷಣೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಆಧವ್ ಅರ್ಜುನ್ ಹಾಗೂ ಡೈಸಿ ಮಾರ್ಟಿನ್ ಮದುವೆಗೆ ಮೊದಲು ಹಲವು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು. ಬಳಿಕ ಇಬ್ಬರು 2012ರಲ್ಲಿ ಮದುವೆಯಾಗಿದ್ದರು. ಅಲ್ಲಿಂದೀಚೆ ಸುಮಾರು ಹದಿನಾಲ್ಕು ವರ್ಷಗಳವರೆಗೆ ದಾಂಪತ್ಯ ನಡೆಸಿದ್ದಾರೆ. ಆದರೆ ಇದೀಗ ಏಕಾಏಕಿ ವಿಚ್ಛೇದನ ಘೋಷಿಸಿರುವುದು ತಮಿಳನಾಡು ರಾಜಕೀಯ ಹಾಗೂ ಕಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಡೈವೋರ್ಸ್ ಆದ್ರೂ ಮಗುವನ್ನು ನೋಡಿಕೊಳ್ಳೂತ್ತೇವೆ:

ಆಧವ್ ಅರ್ಜುನ್ ಹಾಗೂ ಡೈಸಿ ಮಾರ್ಟಿನ್ ಪರಸ್ಪರ ಒಪ್ಪಿಗೆ ಮೂಲಕ ಡೈವೋರ್ಸ್ ನೀಡಿದ್ದು ಈ ಬಗ್ಗೆ ಜಂಟಿ ಹೇಳಿಕೆ ನೀಡಿದ್ದಾರೆ. 'ನಾವು ಕಳೆದ 14 ವರ್ಷಗಳಿಂದ ದಾಂಪತ್ಯ ನಡೆಸಿದವು. ಈ ವೇಳೆ ನಾವು ಪರಸ್ಪರ ಪ್ರೀತಿ, ತಿಳಿವಳಿಕೆ, ಬದಲಾವಣೆಯ ಹಲವು ಹಂತಗಳನ್ನು ನಾವು ದಾಟಿದ್ದೇವೆ. ನಾವಿಬ್ಬರು ಗಂಡ-ಹೆಂಡತಿ ಅಷ್ಟೇ ಅಲ್ಲ, ಸ್ನೇಹಿತರಂತೆ ಇದ್ದೆವು, ಪೋಷಕರು, ಸ್ನೇಹಿತರಾಗಿ ಸುಮಾರು ಒಂದೂವರೆ ದಶಕಗಳಿಂದ ಒಟ್ಟಿಗೆ ಸಂಸಾರ ನಡೆಸಿದವು. ನಮ್ಮ ನಡುವೆ ಯಾವುದೇ ವೈಮನಸು ಉಂಟಾಗಿರಲಿಲ್ಲ. ಇಂದು, ಆಧವ್ ಅರ್ಜುನ ಮತ್ತು ನಾನು ನಮ್ಮ ದಾಂಪತ್ಯದಿಂದ ಬೇರ್ಪಡುವ ಮೂಲಕ ನಮ್ಮದೇ ಹಾದಿಯಲ್ಲಿ ಮುನ್ನಡೆಯಲು ಇಚ್ಛಿಸಿದ್ದೇವೆ. ನಾವು ಹೊಸ ಜೀವನವನ್ನು ಪ್ರಾರಂಭಿಸಿದರೂ ಸಹ, ನಮ್ಮ ಮಗುವನ್ನು ಅತ್ಯಂತ ಕಾಳಜಿಯಿಂದ ಬೆಳೆಸಲು ಮತ್ತು ಆರೈಕೆ ಮಾಡಲು ನಾವು ಯಾವಾಗಲೂ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ' ಎಂದು ಹೇಳಿದ್ದಾರೆ.

ಡೈಸಿ ಮಾರ್ಟಿನ್ ಯಾರು? ಹಿನ್ನೆಲೆ ಏನು?

ಅಧವ್ ಅರ್ಜುನ ಅವರ ಪತ್ನಿ ಡೈಸಿ ಮಾರ್ಟಿನ್ ಬೇರೆ ಯಾರೂ ಅಲ್ಲ, ಲಾಟರಿ ಕಿಂಗ್ ಎಂದೇ ಕರೆಯಲ್ಪಡುವ ಪ್ರಸಿದ್ಧ ಕೈಗಾರಿಕೋದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಲಾಲ್ಗುಡಿ ಶಾಸಕಿ ಲಿಮಾ ರೋಸ್ ಅವರ ಮಗಳು. ಡೈಸಿ ಮಾರ್ಟಿನ್ ಮಾರ್ಟಿನ್ ಗ್ರೂಪ್ ಆಫ್ ಕಂಪನಿಗಳ ಪ್ರಮುಖ ಉತ್ತರಾಧಿಕಾರಿ. ಕೊಯಮತ್ತೂರಿನಲ್ಲಿ ಜನಿಸಿದ ಅವರು ದೆಹಲಿ ಮತ್ತು ಚೆನ್ನೈನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಅವರು ಕೊಯಮತ್ತೂರಿನ ಪಿಎಸ್‌ಜಿ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ Business Administration ನಲ್ಲಿ ಬಿಬಿಎ ಪದವಿ ಪಡೆದರು. ಅವರು 2016 ರಿಂದ ಏರಿಸ್ ಇನ್ವೆಸ್ಟ್‌ಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಹಲವಾರು ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಕುಚ್ ಕುಚ್ ಹೋತಾ ಹೈ' ಸ್ಟೈಲ್‌ನಲ್ಲಿ ಗರ್ಲ್‌ಫ್ರೆಂಡ್ ಬಗ್ಗೆ ಉತ್ತರಿಸಿದ ರಾಹುಲ್ ಗಾಂಧಿ, ಅಭಿ ಭಿ ದೋಸ್ತ್ ಹೈ!
India Latest News Live: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ; ಎರಡು ದಿನದಲ್ಲಿ ಕಡಿಮೆಯಾಯ್ತು 14 ಸಾವಿರ ರೂಪಾಯಿ