'ಕುಚ್ ಕುಚ್ ಹೋತಾ ಹೈ' ಸ್ಟೈಲ್‌ನಲ್ಲಿ ಗರ್ಲ್‌ಫ್ರೆಂಡ್ ಬಗ್ಗೆ ಉತ್ತರಿಸಿದ ರಾಹುಲ್ ಗಾಂಧಿ, ಅಭಿ ಭಿ ದೋಸ್ತ್ ಹೈ!

Published : Nov 17, 2026, 09:30 AM IST
Rahul Gandhi Girlfriend

ಸಾರಾಂಶ

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ತಾಯಿಯ ಸ್ವಭಾವ ಮತ್ತು ತಂದೆ-ತಾಯಿಯ ಲವ್‌ ಸ್ಟೋರಿ ಹಂಚಿಕೊಂಡರು. ಇದೇ ವೇಳೆ ತಮ್ಮ ಗೆಳತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು 'ಕುಚ್ ಕುಚ್ ಹೋತಾ ಹೈ' ಶೈಲಿಯಲ್ಲಿ ಉತ್ತರಿಸಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಹೇಳಿಕೆೊಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ತಮ್ಮ ಗೆಳತಿ ಸುತ್ತಲಿನ ವಿಷಯವು ಮುನ್ನೆಲೆಗೆ ಬಂದಿದೆ. ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ, ಅವರು ತಮ್ಮ ಗೆಳತಿಯ ಸ್ಟೋರಿಯನ್ನು ವಿವರಿಸಿದ್ದಾರೆ. ಆದರೆ ವರದಿಗಾರರೊಬ್ಬರು ರಾಹುಲ್ ಗಾಂಧಿಯನ್ನು ನಿಮ್ಮ ಗೆಳತಿ ಈಗ ಎಲ್ಲಿದ್ದಾಳೆ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಮಾತ್ರ ಥೇಟ್‌ ಶಾರುಖ್‌ ಹಾಗೂ ಕಾಜಲ್‌ ಅಭಿನಯದ ಕುಚ್‌ ಕುಚ್‌ ಹೋತಾ ಹೈ ಚಿತ್ರದ ಡೈಲಾಗ್‌ನನಂತೆ ಇತ್ತು. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

ವರದಿಗಾರರ ಪ್ರಶ್ನೆಗೆ, ರಾಹುಲ್ ಗಾಂಧಿ ಮುಗುಳ್ನಗುತ್ತಾ ಸ್ಪಷ್ಟ ಉತ್ತರ ನೀಡಿದ್ದಾರೆ. ರಾಹುಲ್ ಗಾಂಧಿ, ಅವಳು ಈಗ ತನ್ನ ಸ್ನೇಹಿತೆ ಎಂದು ಹೇಳಿದರು. ಅಂದ್ರೆ ಅಭೀ ಭಿ ಮೇರಿ ದೋಸ್ತ ಹೈ ಎಂದು ಕುಚ್‌ ಕುಚ್‌ ಹೋತಾ ಹೈ ಚಿತ್ರದ ಶೈಲಿಯಲ್ಲಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ಇತರರು ನಕ್ಕಿದ್ದಾರೆ. ಅವರ ತಾಯಿ ಸೋನಿಯಾ ಕೂಡ ಮುಗುಳ್ನಕ್ಕಿದ್ದಾರೆ. ನಂತರ ಕಾಂಗ್ರೆಸ್ ಮುಖಂಡರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿ ನಗುತ್ತಾ ನಿರ್ಗಮಿಸಿದರು.

ರಾಹುಲ್‌ ತಾಯಿ ಬಗ್ಗೆ ಹೇಳಿದ್ದೇನು?

ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ರಾಜಕೀಯದ ಮಾತುಗಳನ್ನು ಬದಿಗಿಟ್ಟು, ಒಬ್ಬ ಮಗನಾಗಿ ತಮ್ಮ ತಾಯಿಯ ನಿಜವಾದ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಕೇಂಬ್ರಿಡ್ಜ್‌ನಲ್ಲಿ ತೆಗೆದ ಫೋಟೋವೊಂದರಲ್ಲಿ ಸೋನಿಯಾ ಉಯ್ಯಾಲೆಯಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದರು ಎಂದು ನೆನಪಿಸಿಕೊಂಡ ರಾಹುಲ್, ಅಂದಿನಿಂದಲೂ ಅಮ್ಮ ತುಂಬಾ ಲವಲವಿಕೆಯಿಂದ ಇದ್ದರು ಎಂದು ವಿವರಿಸಿದರು. ಮುಂದುವರಿದು, ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಭೇಟಿಯಾದ ಕೇಂಬ್ರಿಡ್ಜ್‌ನ 'ವರ್ಸಿಟಿ' ರೆಸ್ಟೋರೆಂಟ್‌ಗೆ ಹಲವು ವರ್ಷಗಳ ನಂತರ ತಾವು ಗೆಳತಿಯೊಂದಿಗೆ ಹೋದ ಘಟನೆಯನ್ನು ಹಂಚಿಕೊಂಡರು. ರೆಸ್ಟೋರೆಂಟ್ ಒಳಗೆ ಹೋದಾಗ ಅಲ್ಲಿದ್ದ ವ್ಯಕ್ತಿಗೆ, "ನನ್ನ ತಂದೆ-ತಾಯಿ ಇದೇ ಜಾಗದಲ್ಲಿ ಭೇಟಿಯಾಗಿದ್ದರು" ಎಂದು ರಾಹುಲ್ ಹೇಳಿದರು. ರಾಜೀವ್ ಮತ್ತು ಸೋನಿಯಾ ಗಾಂಧಿ ಆ ರೆಸ್ಟೋರೆಂಟ್‌ಗೆ ಚಿರಪರಿಚಿತರಾಗಿದ್ದರಿಂದ, ಆ ವ್ಯಕ್ತಿ ತಕ್ಷಣವೇ ಅವರನ್ನು ಗುರುತಿಸಿ, "ಓಹ್, ಅವರಿಬ್ಬರಾ. ನನಗೆ ಅವರು ಚೆನ್ನಾಗಿ ಗೊತ್ತು" ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು. ಒಟ್ಟಾರೆಯಾಗಿ, ಈ ಭಾಷಣದಲ್ಲಿ ರಾಹುಲ್ ತಮ್ಮ ತಂದೆ-ತಾಯಿಯ ಸುಂದರ ಪ್ರೇಮಕಥೆ ಹಾಗೂ ತಾಯಿಯ ಸರಳ ಸ್ವಭಾವವನ್ನು ಜನರ ಮುಂದಿಟ್ಟಿದ್ದಾರೆ.

ವಿವಾದದ ಕೇಂದ್ರದ ಬಿಂದುವಾದ ಸೋನಿಯಾ ಆತ್ಮಚರಿತ್ರೆ!

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯು ಕೇವಲ ಒಂದು ವೈಯಕ್ತಿಕ ಜೀವನಚರಿತ್ರೆಯಾಗಿ ಉಳಿಯದೆ, ಭಾರತೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿದೆ. ತಮ್ಮ ಕುಟುಂಬದ ಬಗ್ಗೆ ಹಬ್ಬಿರುವ ಸುಳ್ಳು ಕಥೆಗಳಿಗೆ ತೆರೆ ಎಳೆದು ವಾಸ್ತವವನ್ನು ಜನರ ಮುಂದಿಡಲು ಈ ಪುಸ್ತಕ ಬರೆದಿದ್ದಾಗಿ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರಕಾಶನ ಸಂಸ್ಥೆಯೊಂದಿಗಿನ ಆರಂಭಿಕ ಭಿನ್ನಾಭಿಪ್ರಾಯ, ಪುಸ್ತಕದಲ್ಲಿನ ಕೆಲವು ಐತಿಹಾಸಿಕ ಸಂಗತಿಗಳ ಬಗೆಗಿನ ತಕರಾರುಗಳು ಮತ್ತು ಹಳೆಯ ರಾಜಕೀಯ ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನವಿದು ಎಂಬ ಆಡಳಿತಾರೂಢ ಬಿಜೆಪಿಯ ಟೀಕೆಗಳು ಈ ಕೃತಿಯನ್ನು ವಿವಾದದ ಕೇಂದ್ರಬಿಂದುವನ್ನಾಗಿಸಿವೆ. ಹೀಗಾಗಿ, ಈ ಪುಸ್ತಕವು ಒಂದೆಡೆ ಗಾಂಧಿ ಕುಟುಂಬದ ಆಪ್ತ ನೆನಪುಗಳ ದಾಖಲೆಯಾಗಿ ಕಂಡರೆ, ಮತ್ತೊಂದೆಡೆ ಪರ-ವಿರೋಧದ ರಾಜಕೀಯ ವಾಗ್ವಾದಗಳಿಗೆ ಹೊಸ ವೇದಿಕೆಯನ್ನು ಕಲ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಹೆಲ್ಮೆಟ್‌ಗೂ ಇದೆ ಎಕ್ಸ್‌ಪೈರಿ ಡೇಟ್, ನೀವು ಒಂದನ್ನು ಎಷ್ಟು ವರ್ಷ ಬಳಸಬಹುದು?
ಸೋನಿಯಾ ಆತ್ಮಕತೆ ಕೇವಲ 6 ದಿನದಲ್ಲಿ 2 ಲಕ್ಷ ಪ್ರತಿಗಳು ಸೇಲ್‌, ₹20 ಕೋಟಿ ಆದಾಯ!