ಟಿವಿಯ ರಾಮ ಬಾಲಿವುಡ್‌ನ ಶತ್ರುಘ್ನ ಇಬ್ಬರ ಕೊರಳೇರಿದ ಜಯದ ಹಾರ

By Suvarna News  |  First Published Jun 5, 2024, 7:45 AM IST

ಉತ್ತರ ಪ್ರದೇಶ ಮೀರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಟಿವಿ ರಾಮ ಎಂದೇ ಫೇಮಸ್ ಆಗಿರುವ ಹಿಂದಿ ಕಿರುತೆರೆ ನಟ ಅರುಣ್ ಗೋವಿಲ್ ಅವರು ಗೆಲುವು ಸಾಧಿಸಿದ್ದಾರೆ.  


ನವದೆಹಲಿ: ಉತ್ತರ ಪ್ರದೇಶ ಮೀರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಟಿವಿ ರಾಮ ಎಂದೇ ಫೇಮಸ್ ಆಗಿರುವ ಹಿಂದಿ ಕಿರುತೆರೆ ನಟ ಅರುಣ್ ಗೋವಿಲ್ ಅವರು ಗೆಲುವು ಸಾಧಿಸಿದ್ದಾರೆ.  ರಾಮಾಯಣದ ರಾಮನ ಪಾತ್ರದಿಂದಲೇ ಫೇಮಸ್ ಆಗಿದ್ದ ಅರುಣ್ ಗೋವಿಲ್ ಅವರು 9679 ಮತಗಳ ಅಂತರದಿಂದ ಸಮಾಜವಾದಿಪಕ್ಷದ ಸುನೀತಾ ವರ್ಮಾ ಅವರನ್ನು ಸೋಲಿಸಿದ್ದಾರೆ. ಅರುಣ್ ಗೋವಿಲ್ ಅವರು 5,42,075 ಮತಗಳನ್ನು ಗಳಿಸಿದ್ದರೆ ಸುನೀತಾ ವರ್ಮಾ ಅವರು 5,32, 396 ಮತಗಳನ್ನು ಗಳಿಸಿದ್ದಾರೆ. 

ಉತ್ತರ ಪ್ರದೇಶ ಮೀರತ್ ಅರುಣ್ ಗೋವಿಲ್ ಅವರು ಹುಟ್ಟೂರು ಆಗಿದ್ದು, ಅನೇಕರ ಕಣ್ಣುಗಳು ಮೀರತ್ ಕ್ಷೇತ್ರದ ಮೇಲಿದ್ದು, ಬಿಜೆಪಿಗೆ ಈ ಗೆಲುವು ಮಹತ್ವದ್ದಾಗಿತ್ತು. ಆದರೆ ರಾಮ ಪಾತ್ರಧಾರಿಯೆನೋ ಗೆಲುವು ಸಾಧಿಸಿದ್ದಾರೆ. ಆದರೆ ಅಯೋಧ್ಯೆ ಒಳಪಡುವ ಲೋಕಸಭಾ ಕ್ಷೇತ್ರವಾದ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ.  ಪೈಜಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಲ್ಲು ಸಿಂಗ್ ಅವರು ಇಂಡಿಯಾ ಕೂಟದ ಅಭ್ಯರ್ಥಿ ಅವಧೇಶ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದಾರೆ. 

Tap to resize

Latest Videos

ಶ್ರೀರಾಮನ ಪಾತ್ರಧಾರಿ ಸೋಲಿಸೋಕೆ ಪಣ ತೊಟ್ಟರಾ ಅಖಿಲೇಶ್ ಯಾದವ್?
     
ಶತ್ರುಘ್ನಗೂ ಗೆಲುವಿನ ಹೂಮಳೆ
ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಕೂಡ ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೆಲುವಿನ ನಗೆ ಬೀರಿದ್ದಾರೆ.  ಟಿಎಂಸಿಯಿಂದ ಕಣಕ್ಕಿಳಿದಿರುವ ಶತ್ರುಘ್ನ ಸಿನ್ಹಾ ಅವರು ಭಾರತೀಯ ಜನತಾ ಪಾರ್ಟಿಯ ಸುರೇಂದ್ರಜಿತ್ ಸಿಂಗ್ ಅಹ್ಲುವಾಲಿಯಾ ವಿರುದ್ಧ 59,564 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.  ಶತ್ರುಘ್ನ ಸಿನ್ಹಾ 6,05645 ಮತ ಗಳಿಸಿದ್ದರೆ ಬಿಜೆಪಿ ಸುರೇಂದ್ರ ಜಿತ್ ಸಿಂಗ್ ಅವರು 5,46, 081 ಮತ ಗಳಿಸಿದ್ದಾರೆ. ಈ ಕ್ಷೇತ್ರದಿಂದ ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದರು. 

ಅಸನ್ಸೋಲ್‌ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ : ನಟ ಶತ್ರುಘ್ನ ಸಿಂಹ ಘರ್ಜನೆಗೆ ಅಹ್ಲುವಾಲಿಯಾ ಸವಾಲ್‌

click me!