ಕೆಲವರಿಗೆ ಇಂಥ ಖಾತೆಗಳು ಸಿಗಲಿವೆ, ಇಂಥವರೇ ಸಚಿವರಾಗತ್ತಾರೆ ಎಂಬ ಸುದ್ದಿಗಳು ಇತ್ತೀಚೆಗೆ ಬರುತ್ತಿವೆ. ಇವುಗಳಿಗೆ ಯಾವ ಎನ್‌ಡಿಎ ಸಂಸದರೂ ಬಲಿಯಾಗಬಾರದು. ಏಕೆಂದರೆ ಇವು ಇಂಡಿಯಾ ಕೂಟದ ಸುಳ್ಳು ಸುದ್ದಿ ಹರಡುವ ಸಂಚು ಇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ನವದೆಹಲಿ (ಜೂ.8): ಕೆಲವರಿಗೆ ಇಂಥ ಖಾತೆಗಳು ಸಿಗಲಿವೆ, ಇಂಥವರೇ ಸಚಿವರಾಗತ್ತಾರೆ ಎಂಬ ಸುದ್ದಿಗಳು ಇತ್ತೀಚೆಗೆ ಬರುತ್ತಿವೆ. ಇವುಗಳಿಗೆ ಯಾವ ಎನ್‌ಡಿಎ ಸಂಸದರೂ ಬಲಿಯಾಗಬಾರದು. ಏಕೆಂದರೆ ಇವು ಇಂಡಿಯಾ ಕೂಟದ ಸುಳ್ಳು ಸುದ್ದಿ ಹರಡುವ ಸಂಚು ಇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸರ್ಕಾರ ರಚನೆ ಬಗ್ಗೆ ಕಳೆದೆರಡು ದಿನಗಳಿಂದ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಲ್ಲಿ ಹೆಚ್ಚಿನ ಸತ್ಯ ಕಂಡುಬಂದಿಲ್ಲ. ನನಗೆ ಚಾಲನೆಯಲ್ಲಿ ಯಾವುದೇ ಸತ್ಯ ಕಂಡುಬಂದಿಲ್ಲ, ಅಂತಹ ಮಾಹಿತಿಯು ಎಲ್ಲಿಂದ ಪಡೆಯುತ್ತದೆ ಎಂದು ಅವರನ್ನೇ ಕೇಳಬೇಕು’ ಎಂದು ಚಾಟಿ ಬೀಸಿದರು.
ಅಯೋಧ್ಯೆಯಲ್ಲೇ ಬಿಜೆಪಿಗೆ ಹೀನಾಯ ಸೋಲು; ಕಾರಣ ಬಿಚ್ಚಿಟ್ಟ ಪೇಜಾವರಶ್ರೀ!
‘ಕಳೆದ 10 ವರ್ಷಗಳಲ್ಲಿ ಇಂಥ ಸಂದರ್ಭ ಬಂದಿರಲಿಲ್ಲ. ಆದರೆ ಈಗ ಕೆಲವರು ಏಕಾಏಕಿ ಉತ್ಸಾಹಿತರಾಗಿದ್ದಾರೆ. ನನಗೆ ಪ್ರಭಾವಿಗಳು ಗೊತ್ತು. ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ನಿಮ್ಮ ಬಳಿ ಬರಬಹುದು. ಇಂಥವರು ತಾವೇ ಸಚಿವರ ಪಟ್ಟಿ ಸಿದ್ಧಪಡಿಸಿ ಖಾತೆ ಹಂಚಿಬಿಡಬಹುದು ಇದು. ಆ ಪಟ್ಟಿ ಹಿಡಿದು ನಿಮ್ಮ ಬಳಿ ಬಂದು ನಿಲ್ಲಬಹುದು.ಥ ಇಂಥವರ ಬಗ್ಗೆ ಹುಷಾರಿಂದ ಇರಿ’ ಎಂದರು.