ಪ್ರಧಾನಿ ಕಾಲಿಗೆ ಬೀಳಲು ಮುಂದಾದ ನಿತೀಶ್‌ ಕುಮಾರ್: ತಕ್ಷಣ ತಡೆದ ನರೇಂದ್ರ ಮೋದಿ: ವೀಡಿಯೋ ವೈರಲ್

By Anusha Kb  |  First Published Jun 7, 2024, 3:51 PM IST

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್‌ಡಿಯ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಿ ನರೇಂದ್ರಮೋಡಿಯವರ ಕಾಲಿಗೆರಗಲು ಮುಂದಾದ ಘಟನೆ ನಡೆದಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಗೆ ಬೀಳುವುದನ್ನು ತಕ್ಷಣವೇ ತಡೆದು ಹಸ್ತಲಾಘವ ಮಾಡಿದ್ದಾರೆ.


ನವದೆಹಲಿ:  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್‌ಡಿಯ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಿ ನರೇಂದ್ರಮೋಡಿಯವರ ಕಾಲಿಗೆರಗಲು ಮುಂದಾದ ಘಟನೆ ನಡೆದಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಗೆ ಬೀಳುವುದನ್ನು ತಕ್ಷಣವೇ ತಡೆದು ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ಕೈಮುಗಿದು ಬಳಿಕ ತಲೆ ಬಾಗಿ ಅವರ ಕಾಲಿಗೆ ಬೀಳಲು ಮುಂದಾಗುತ್ತಾರೆ.  ತಕ್ಷಣವೇ ಪ್ರಧಾನಿ ಮೋದಿ ಅವರನ್ನು ತಡೆದು ಕೈ ಹಿಡಿದು ಪರಸ್ಪರ ಹಸ್ತಲಾಘವ ಮಾಡುತ್ತಾರೆ. ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗಿಂತ ಸುಮಾರು ಆರು ತಿಂಗಳು ಪ್ರಾಯದಲ್ಲಿ ದೊಡ್ಡವರಾಗಿದ್ದಾರೆ.

Tap to resize

Latest Videos

ಏರ್‌ಪೋರ್ಟ್‌ನಲ್ಲಿ ಬಿಜೆಪಿ ನೂತನ ಸಂಸದೆ ನಟಿ ಕಂಗನಾ ಕೆನ್ನೆಗೆ ಬಾರಿಸಿದ ಸಿಐಎಸ್ಎಫ್ ಕಾನ್ಸ್‌ಟೇಬಲ್ ಅರೆಸ್ಟ್‌

ಇದಕ್ಕೂ ಮೊದಲು ಮೇ ತಿಂಗಳಲ್ಲಿ ಚುನಾವಣಾ ಸಮಾವೇಶದ ವೇಳೆಯೂ ಕೂಡ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರ ಪಾದಸ್ಪರ್ಶ ಮಾಡಿ ಸುದ್ದಿಯಾಗಿದ್ದರು. ಬಿಹಾರದ ನೆವಾಡದಲ್ಲಿ ನಡೆದ 2ನೇ ಹಂತದ ಚುನಾವಣಾ ಪ್ರಚಾರದ ವೇಳೆ ಆಗಮಿಸಿದ್ದ ಪ್ರಧಾನಿ ಮೋದಿ ಹಾಗೂ ನಿತೀಶ್ ವೇದಿಕೆ ಮೇಲೆ ಅಕ್ಕ ಪಕ್ಕ ಕುಳಿತಿದ್ದು, ಈ ವೇಳೆ ಬಿಹಾರ ಸಿಎಂ ಪ್ರಧಾನಿ ನರೇಂದ್ರ ಮೋದಿಯವರ ಪಾದ ಮುಟ್ಟಿದ್ದರು. ಈ ವೀಡಿಯೋವೂ ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಅನೇಕರ ಕಣ್ಣು ಅರಳುವಂತೆ ಮಾಡಿತ್ತು. ವಿರೋಧ ಪಕ್ಷದ ನಾಯಕರು ನಿತೀಶ್ ಅವರನ್ನು ಈ ವಿಚಾರಕ್ಕಾಗಿ ಟೀಕೆ ಮಾಡಿದ್ದರು. ಆದರೆ ಬಿಜೆಪಿ ನಾಯಕರು ಇದು ಗೌರವ ತೋರಿಸುವ ರೀತಿ ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದರು.

ಇನ್ನು ಇಂದು ನಡೆದ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಕಾಲೆಳೆದಿದ್ದಾರೆ.  ಮುಂದಿನ ಸಲ ನೀವು (ಪ್ರಧಾನಿ ನರೇಂದ್ರ ಮೋದಿ) ಅಧಿಕಾರಕ್ಕೆ ಬಂದಾಗ ಈಗ ಅಲ್ಲೊಂದು ಇಲ್ಲೊಂದು ಸೀಟು ಗೆದ್ದವರಿಗೆ ಅದೂ ಸಿಗುವುದಿಲ್ಲ ಎಂಬ ಸಂಪೂರ್ಣ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. 

This is unusual. Nitish Kumar trying to touch PM Modi's feet.. 😳😳
pic.twitter.com/MQxi4mZjRS

— Mr Sinha (Modi's family) (@MrSinha_)

 

ಸರಿಯಾದ ಸಮಯದಲ್ಲಿ ಭಾರತಕ್ಕೆ ಸರಿಯಾದ ನಾಯಕ: ನಾಯ್ಡು

ಮತ್ತೊಂದೆಡೆ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮತ್ತೊರ್ವ ಕಿಂಗ್ ಮೇಕರ್ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಾಯ್ಡು, ಭಾರತಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ನಾಯಕ ಸಿಕ್ಕಿದ್ದಾರೆ ಎಂದು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ. 

ಖಾತೆ ಹಂಚಿಕೆಗೆ ಲಕ್ಷ್ಮಣ ರೇಖೆ ಎಳೆದ ಬಿಜೆಪಿ; ಯಾರಿಗೆ, ಯಾವ ಮಂತ್ರಿಗಿರಿ?

ಅದ್ಭುತ ಬಹುಮತ ಗಳಿಸಿದ್ದಕ್ಕಾಗಿ ನಾವು ನಮ್ಮೆಲ್ಲರನ್ನು ಅಭಿನಂದಿಸುತ್ತಿದ್ದೇವೆ. ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ನೋಡಿದ್ದೇನೆ, 3 ತಿಂಗಳವರೆಗೆ ಪ್ರಧಾನಿ ಮೋದಿ ಯಾವುದೇ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಹಗಲು ರಾತ್ರಿ ಎನ್ನದೇ ಅವರು ಪ್ರಚಾರ ಮಾಡಿದ್ದಾರೆ. ಯಾವ ಶಕ್ತಿಯೊಂದಿಗೆ ಅವರು ಪ್ರಚಾರ ಮಾಡಿದರೋ ಅದೇ ಶಕ್ತಿಯೊಂದಿಗೆ ಅವರು ಮುಕ್ತಾಯಗೊಳಿಸಿದರು. ಆಂಧ್ರಪ್ರದೇಶದಲ್ಲಿ ಅವರೊಂದಿಗೆ ನಾವು 3 ಸಾರ್ವಜನಿಕ ಸಭೆ ಹಾಗೂ 1 ದೊಡ್ಡ ಸಮಾವೇಶವನ್ನು ಆಯೋಜಿಸಿದ್ದೆವು. ಆಂಧ್ರಪ್ರದೇಶ ಚುನಾವಣೆಯನ್ನು ಗೆಲ್ಲುವಲ್ಲಿ ಈ ಸಮಾವೇಶಗಳು ದೊಡ್ಡ ಪರಿಣಾಮ ಬೀರಿವೆ ಎಂದು ನಾಯ್ಡು ಹೇಳಿದರು.

| At the NDA Parliamentary Party meeting, TDP chief Chandrababu Naidu says "We are congratulating all of us as we have won a wonderful majority. I have seen during the election campaign, for 3 months PM Modi never took any rest. Day and night he has campaigned. He started… pic.twitter.com/opUZJj7mWS

— ANI (@ANI)

 

click me!