
ಅಮರಾವತಿ(ಡಿ.30): ಸ್ವರ್ಗದಲ್ಲಿ ನಿಶ್ಚಯವಾಗುವ ಮದುವೆಗಳು ಭೂಮಿಯಲ್ಲಿ ನಡೆಯುತ್ತವೆ ಎಂಬ ಮಾತಿದೆ. ಹಾಗೆಯೇ ಟರ್ಕಿಯಲ್ಲಿ ಹುಟ್ಟಿ ಬೆಳೆದ ಮಹಿಳೆಯೊಬ್ಬರು ಭಾರತದ ಯುವಕನನ್ನು ಮದುವೆಯಾಗಿದ್ದಾರೆ. ಆಂಧ್ರಪ್ರದೇಶ (Andhra Pradesh)ದ ಗುಂಟೂರಿ (Guntur)ನಲ್ಲಿ ಈ ಫಾರಿನ್ - ಇಂಡೋ ವಿವಾಹ ನಡೆದಿದೆ.
ಆಂಧ್ರಪ್ರದೇಶದ ಹಿಂದೂ ಸಂಪ್ರದಾಯಿಕ ಶೈಲಿಯಲ್ಲಿ ಈ ವಿವಾಹ ನಡೆದಿದ್ದು, ಬಂಧುಗಳು ಹಾಗೂ ಕುಟುಂಬ ವರ್ಗದವರು ನೂತನ ವಧುವರರಿಗೆ ನವ ಜೀವನಕ್ಕೆ ಶುಭ ಹಾರೈಸಿದ್ದಾರೆ. ಗುಂಟೂರಿನ ನಿವಾಸಿಯಾಗಿರುವ ಮಧು ಸಂಕೀರ್ತ್ (Madhu Sankeerth) ಟರ್ಕಿಯ ವಧು ಗಿಜಿಮ್ ಅವರನ್ನು 2016 ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಪ್ರಾಜೆಕ್ಟ್ ಸಂಬಂಧ ಭೇಟಿಯಾಗಿದ್ದ ಗಿಜೆಮ್ (Gijem) ಹಾಗೂ ಮಧು ನಂತರದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಮಧು ಹಲವು ಅನುಕೂಲಕರ ತಿರುವಿನಿಂದಾಗಿ ಟರ್ಕಿಗೆ ಹೋಗಬೇಕಾಯಿತು.
Karwar: ವೀಸಾ ವಿಸ್ತರಣೆಗಾಗಿ ಗೋಕರ್ಣದಲ್ಲಿರುವ ವಿದೇಶಿಗರ ಹರಸಾಹಸ
ವಿದೇಶಿ ಯುವತಿಯರು ಭಾರತೀಯ ಯುವಕರನ್ನು ಮದುವೆಯಾಗುವುದು ಇತ್ತೀಚೆಗೆ ಸಾಮಾನ್ಯ ಎಂದೆನಿಸಿ ಬಿಟ್ಟಿದೆ. ಈಗಾಗಲೇ ಇಂತಹ ಅನೇಕ ಮದುವೆಗಳು ನಡೆದಿವೆ. ಜೀವನದ ಮಹತ್ವದ ಘಟ್ಟಗಳಲ್ಲಿ ಮದುವೆಯೂ (Marriage) ಒಂದು. ವಿವಾಹ ತುಂಬಾ ಸುಂದರ (beautiful)ವಾದ ಬಂಧ. ಅದು ಪರಸ್ಪರರ ಜೀವನದಲ್ಲಿ ಪ್ರೀತಿಯ ನದಿ ಹರಿಸುತ್ತದೆ. ನೂರಾರು ವರ್ಷ ನಿನ್ನ ಜೊತೆಗಿರುತ್ತೇನೆಂದು ಕೈ ಹಿಡಿದು ಒಂದಾಗುವ ಜೋಡಿಯ ಆರಂಭ ಚೆನ್ನಾಗಿರುತ್ತದೆ. ಮದುವೆ ನಂತರ ಬಹಳ ವಿಷಯಗಳು ಬದಲಾಗುತ್ತವೆ. ನಾನು ಎಂಬಲ್ಲಿ ನಾವು ಎಂಬುದು ಸೇರುತ್ತದೆ. ಹೊಸ ಸಂಬಂಧ, ಹೊಸ ಜನ, ಹೊಸ ಮನೆ, ಹೊಸ ವಾತಾವರಣ ಮಹಿಳೆಯ ಜೀವನದಲ್ಲಿ ಮಹತ್ವದ ಬದಲಾವಣೆ ತರುತ್ತದೆ. ಇದೆಲ್ಲವೂ ಕೆಲವೊಮ್ಮೆ ಮಹಿಳೆಗೆ ಉಸಿರುಗಟ್ಟಿಸಿದ ಅನುಭವವನ್ನುಂಟು ಮಾಡುತ್ತದೆ. ಮದುವೆಯಾದ ಹೊಸದರಲ್ಲಿಯೇ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಖಂಡಿತವಾಗಿಯೂ ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ದಾಂಪತ್ಯ ಸುಖವನ್ನು ಯಾವುದೇ ಚಿಂತೆಯಿಲ್ಲದೆ, ಸಂತೋಷದಿಂದ ಕಳೆಯಬಹುದು.
ಪರಿಪೂರ್ಣವಾಗಬೇಕಾಗಿಲ್ಲ (perfect) : ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪರಿಪೂರ್ಣತೆ ಅಸಾಧ್ಯ. ಮದುವೆ ನಂತ್ರ ಪರಿಪೂರ್ಣತೆ ಎಂಬ ಮಾತನ್ನು ಮನಸ್ಸಿನಿಂದ ತೆಗೆಯುವುದು ಉಳಿತು. ನನ್ನ ಪತಿ ನನ್ನನ್ನು ಪ್ರೀತಿಸುತ್ತಾನೆ ಎಂಬ ಸತ್ಯವನ್ನು ನೀವು ಅರಿತಿರಿ. ನಿಮ್ಮ ಫರ್ಪೆಕ್ಟ್ ಅವರಿಗೆ ಬೇಕಾಗಿಲ್ಲ. ಸದಾ ಸಂತೋಷದಿಂದಿರಬೇಕೆಂದು ಪ್ರತಿಯೊಬ್ಬ ಪತಿ ಬಯಸುತ್ತಾನೆ. ಪತ್ನಿ ಸಂತೋಷದಲ್ಲಿ ತನ್ನ ಸಂತೋಷ ಕಾಣುವ ಪುರುಷರಿದ್ದಾರೆ. ಹಾಗಿರುವಾಗ ಪರಿಪೂರ್ಣತೆಯನ್ನು ಬದಿಗಿಟ್ಟು,ಸಂತೋಷಕ್ಕೆ ಮಹತ್ವ ನೀಡಿ.
ತಮ್ಮ ಮಧ್ಯೆ ಇರುವ ಸ್ನೇಹ ಪ್ರೀತಿಯಾಗಿ ತಿರುವು ಪಡೆದು ಅರಳುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಇಬ್ಬರಿಗೂ ಹೆಚ್ಚು ಸಮಯ ಬೇಕಿರಲಿಲ್ಲ. ನಂತರ ಇಬ್ಬರು ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದರು. ಆರಂಭದಲ್ಲಿ, ಜಿಜೆಮ್ ಮತ್ತು ಮಧು ಇಬ್ಬರ ಕುಟುಂಬಗಳು ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಅಂತಿಮವಾಗಿ, ಇಬ್ಬರೂ ತಮ್ಮ ಪೋಷಕರ ಒಪ್ಪಿಗೆಯನ್ನು ಪಡೆದರು. ನಂತರ 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಅವರು 2020 ರಲ್ಲಿ ಮದುವೆಯಾಗಲು ಬಯಸಿದ್ದರು ಆದರೆ ಕೋವಿಡ್ 19 ನಿರ್ಬಂಧಗಳಿಂದಾಗಿ ಅದನ್ನು ತಡೆ ಹಿಡಿಯಲಾಯಿತು. ಈ ವರ್ಷ, ಜುಲೈನಲ್ಲಿ, ಇಬ್ಬರೂ ಮೊದಲು ಟರ್ಕಿ (Turkey)ಯಲ್ಲಿ ವಿವಾಹವಾಗಿದ್ದರು. ಈಗ, ಅವರು ಮತ್ತೆ ಭಾರತೀಯ ಸಾಂಪ್ರದಾಯಿಕ ತೆಲುಗು ಮದುವೆ ಆಚರಣೆಯಲ್ಲಿ ಮತ್ತೆ ವಿವಾಹವಾಗಿದ್ದಾರೆ. ಪ್ರೀತಿಗೆ ಯಾವ ಜಾತಿ, ಭಾಷೆ, ದೇಶದ ಗಡಿಗಳಿಲ್ಲ ಎಂಬುದನ್ನು ಇವರು ಸಾಬೀತು ಪಡಿಸಿದ್ದಾರೆ.
Wedding Insurance : ಮದುವೆ ರದ್ದಾದ್ರೆ ಟೆನ್ಷನ್ ಬೇಡ,ಇಲ್ಲಿ ಸಿಗುತ್ತೆ 10 ಲಕ್ಷ ರೂ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ