ಜಗತ್ತಿನ ಶ್ರೀಮಂತ ದೇವರಿಗೆ ಹಣಕಾಸಿನ ಮುಗ್ಗಟ್ಟು, ಸಿಬ್ಬಂದಿ ವೇತನಕ್ಕೆ ಕತ್ತರಿ?

By Suvarna NewsFirst Published May 11, 2020, 10:51 PM IST
Highlights

ಜಗತ್ತಿನ ಶ್ರೀಮಂತ ದೇವರಿಗೆ ಹಣಕಾಸಿನ ಮುಗ್ಗಟ್ಟು/ ಇದಕ್ಕೆಲ್ಲ ಕಾರಣ ಲಾಕ್ ಡೌನ್/ ತಿರುಪತಿ ತಿರುಮಲಕ್ಕೂ ತಾಗಿದ ಕೊರೋನಾ ಬಿಸಿ/ ಸಿಬ್ಬಂದಿಗೆ ವೇತನ ನೀಡುವುದು ಒಂದು ಸವಾಲು

ತಿರುಪತಿ(ಮೇ 11) ಜಗತ್ತಿನಲ್ಲಿಯೇ ಶ್ರೀಮಂತ ದೇವರು ಎಂಬ ಖ್ಯಾತಿ ಪಡೆದುಕೊಂಡಿರುವ ತಿರುಪತಿ ತಿರುಮಲ ದೇವಾಲಯವೇ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆಲ್ಲ ಕಾರಣ ಲಾಕ್ ಡೌನ್. ಲಾಕ್ ಡೌನ್ ಪರಿಣಾಮ ಟಿಟಿಡಿ 400 ಕೋಟಿ  ಆದಾಯ ಕಳೆದುಕೊಂಡಿದೆ. ಈಗ ಸಿಬ್ಬಂದಿಗೆ ವೇತನ ನೀಡಲು ನಗದು ಕೊರತೆಯಾಗಿದೆ.

ಈಗಾಗಲೇ ಸಿಬ್ಬಂದಿ ವೇತನಕ್ಕಾಗಿ 300 ಕೋಟಿ ಖರ್ಚು ಮಾಡಲಾಗಿದೆ.  ತಿರುಪತಿ ತಿರುಮಲ ವರ್ಷಕ್ಕೆ 2500 ಕೋಟಿ ರೂ. ವಿವಿಧ ಕಡೆ ವೆಚ್ಚ ಮಾಡುತ್ತದೆ ಆದರೆ ಈ ಲಾಕ್ ಡೌನ್ ಹಲವಾರು ಸಮಸ್ಯೆ ತಂದಿಟ್ಟಿದೆ ಎಂದು ಟಿಟಿಡಿ ಚೇರ್ ಮನ್ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ.

ಕೊರೋನಾ ಹೊಡೆತಕ್ಕೆ ನಲುಗಿದ ಉದ್ಯಮಿಗಳಿಗೆ ರತನ್ ಟಾಟಾ ಪತ್ರ

ತಿರುಮಲದ ತಿಂಗಳ ಆದಾಯ 200 ರಿಂದ 220 ಕೋಟಿ ರೂ. ಇದೆ. ಆದರೆ ಲಾಕ್ ಡೌನ್ ಆದ ಮೇಲೆ ದೇವಾಲಯಕ್ಕೆ ಯಾರೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ದೇವಾಲಯಲ್ಲೆ ಪ್ರತಿದಿನ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ 80 ಸಾವಿರದಿಂದ 1 ಲಕ್ಷ ಇತ್ತು . ಹಬ್ಬದ ಸಮಯದಲ್ಲಿ ಇದು ಇನ್ನೂ ಜಾಸ್ತಿಯಾಗುತ್ತಿತ್ತು.

2020-21ಕ್ಕೆ ಸಂಬಂಧಿಸಿ ಟಿಟಿಡಿ 3,309.89 ಕೋಟಿ ರೂ ವಾರ್ಷಿಕ ಬಜೆಟ್ ನಿಗದಿ ಮಾಡಿಕೊಂಡಿತ್ತು.  ಆದರೆ ಲಾಕ್ ಡೌಮ್ ಎಲ್ಲ ವಿಚಾರಗಳನ್ನು ತಲೆಕೆಳಗೂ ಮಾಡಿದೆ."ಆರ್ಥಿಕ ಅಡಚಣೆಗಳಿದ್ದರೂ ಟಿಟಿಡಿ ತನ್ನ ಸಿಬ್ಬಂದಿಗೆ ಮುಂದಿನ 2-3 ತಿಂಗಳು ಪೂರ್ಣ ವೇತನ ನೀಡುವ ಸಾಮರ್ಥ್ಯ‌  ಇಟ್ಟುಕೊಂಡಿದೆ ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.

ತಿರುಪತಿ ದೇವಾಲಯದಲ್ಲಿ 8,000 ಕಾಯಂ ಉದ್ಯೋಗಿಗಳೂ, 15,000 ಹೊರಗುತ್ತಿಗೆಯ ಉದ್ಯೋಗಿಗಳೂ ಇದ್ದಾರೆ. ಲಾಕ್‌ಡೌನ್‌ ಪರಿಣಾಮ ತಿಂಗಳಿಗೆ 200 ಕೋಟಿ ರೂ. ನಷ್ಟವಾಗುತ್ತಿದ್ದು, ಇದುವರೆಗೆ 400 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

 

 

click me!