
ನವದೆಹಲಿ(ಮೇ.11): ಕೊರೋನಾ ವೈರಸ್ ಕಾರಣ ಮಾರ್ಚ್ 25 ರಿಂದ ಲಾಕ್‌ಡೌನ್ ಹೇರಲಾಗಿತ್ತು. ಬಳಿಕ 2 ಬಾರಿ ವಿಸ್ತರಿಸಲಾಗಿದೆ. ಮಾರ್ಚ್ 25 ರಿಂದಲೇ ರೈಲು ಸೇವೆಗಳು ಬಂದ್ ಆಗಿತ್ತು. ಸುದೀರ್ಘ ದಿನಗಳ ಬಳಿಕ ಇದೀಗ ರೈಲು ಸೇವೆ ಆರಂಭಗೊಂಡಿದೆ. ನಿಯಮಿತ ರೈಲು ಓಡಾಟಕ್ಕೆ ಕೇಂದ್ರ ರೈಲ್ವೇ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಚುಕುಬುಕು ರೈಲು ಸಂಚಾರಕ್ಕೆ ಲಾಕ್ ಓಪನ್:ಆನ್‌ಲೈನ್ ಬುಕ್ಕಿಂಗ್ ಸೇವೆಯೂ ಆರಂಭ
3ನೇ ಲಾಕ್‌ಡೌನ್ ಪೂರ್ಣಗೊಳ್ಳುವ 5 ದಿನದ ಮೊದಲೇ 15 ವಿಶೇಷ ರೈಲು ಸೇವೆ ಆರಂಭಿಸುತ್ತಿದೆ. ಒಟ್ಟು 30 ಪ್ರಯಾಣ ನೀಡಲಿರುವ ಈ ರೈಲು ಸೇವೆ ದೆಹಲಿಯಿಂದ ಹೊರಡಲಿದ್ದು, ಅಸ್ಸಾಂ, ಬೆಂಗಾಲ್, ಬಿಹಾರ್, ಚತ್ತೀಸ್‌ಘಡ, ಗುಜರಾತ್, ಜಮ್ಮು, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತೆಲಂಗಾಣ ಹಾಗೂ ತ್ರಿಪುರಾ ಮೂಲಕ ಹಾದು ಹೋಗಲಿದೆ.
ವಲಸೆ ಕಾರ್ಮಿಕರಿಗೆ ನೆರವಾಗಲು ರೈಲು ಸೇವೆ ಆರಂಭಗೊಂಡಿದೆ. ಇಂದಿನಿಂದ(ಮೇ.11) ಆನ್‌ಲೈಟ್ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ರೈಲು ಸೇವೆಯ ವೇಳಾಪಟ್ಟಿ ವಿವರ ಈ ಕೆಳಗೆ ನೀಡಲಾಗಿದೆ.
ಗೋವಾ ಹಾಗೂ ನವದೆಹಲಿಯಿಂದ ಹೊರಡಿಲಿರುವ ರೈಲು ವೇಳಾಪಟ್ಟಿ ಈ ಕೆಳಗೆ ನೀಡಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ