
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತಮ್ಮ ಆಪ್ತ ಮಿತ್ರ ಎಂದು ಪರಿಗಣಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಟ್ರಂಪ್ ಅವರ ಹೇಳಿಕೆಗಳು ಎರಡೂ ದೇಶಗಳ ನಡುವೆ ಮತ್ತೆ ಕತ್ತಿ ಮಸೆಯುವಂತೆ ತೋರುತ್ತಿದೆ. ಟ್ರಂಪ್ ಅವರ 'ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆ' ಎಂಬ ಹೇಳಿಕೆಯಿಂದ ರಷ್ಯಾ ಕೆರಳಿದೆ. ರಷ್ಯಾದ ಉಪ NSA (ಮತ್ತು ಮಾಜಿ ಪ್ರಧಾನಿ) ಡಿಮಿಟ್ರಿ ಮೆಡ್ವೆಡೆವ್ ಮೂರನೇ ಮಹಾಯುದ್ಧದ ಬೆದರಿಕೆ ಹಾಕುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ, ಅದರ ನಂತರ ಎರಡು ಮಹಾಶಕ್ತಿಗಳ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.
ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ, 'ನಾನು ಇಲ್ಲದಿದ್ದರೆ ರಷ್ಯಾದಲ್ಲಿ ಕೆಟ್ಟ ಘಟನೆಗಳು ಸಂಭವಿಸುತ್ತಿದ್ದವು. ಪುಟಿನ್ ಬೆಂಕಿಯ ಜೊತೆ ಆಟವಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ರಷ್ಯಾದ ಉಕ್ರೇನ್ ದಾಳಿಯನ್ನು ಖಂಡಿಸಿ, 'ಅವರು ಯಾವುದೇ ಕಾರಣವಿಲ್ಲದೆ ಜನರನ್ನು ಕೊಲ್ಲುತ್ತಿದ್ದಾರೆ, ಇಡೀ ಉಕ್ರೇನ್ ಅನ್ನು ಬಯಸುತ್ತಾರೆ, ಆದರೆ ಇದು ರಷ್ಯಾದ ಪತನಕ್ಕೆ ಕಾರಣವಾಗಲಿದೆ' ಎಂದು ಟ್ರಂಪ್ ಆರೋಪಿಸಿದ್ದಾರೆ.
ರಷ್ಯಾ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಉಕ್ರೇನ್‌ಗೆ ಒಪ್ಪಂದವಾದಾಗ ಮಾತ್ರ ಕದನ ವಿರಾಮ ಸಾಧ್ಯ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, 'ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದರಿಂದ ಪ್ರಾದೇಶಿಕ ಸ್ಥಿರತೆಗೆ ಅಪಾಯ ಉಂಟಾಗಿದೆ. ರಷ್ಯಾ ತನ್ನ ಭದ್ರತೆ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಯಾವುದೇ ಕ್ರಮಕ್ಕೆ ಹಿಂಜರಿಯುವುದಿಲ್ಲ ರಷ್ಯಾ ಇನ್ನು ಮುಂದೆ ಕದನ ವಿರಾಮದಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಹಳೆಯ ಹಾದಿಗಳಿಗೆ ಮರಳುವುದಿಲ್ಲ. 'ನಾವು ಈ ಪರಿಸ್ಥಿತಿಯನ್ನು ಮೊದಲು ಎದುರಿಸಿದ್ದೇವೆ' ಎಂದು ಲಾವ್ರೊವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಅವರ ಪ್ರಯತ್ನಗಳು ವಿಫಲವಾಗಿದ್ದು, ಎರಡೂ ಮಹಾಶಕ್ತಿಗಳ ನಡುವಿನ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಬಿಕ್ಕಟ್ಟಿನಿಂದ ಜಾಗತಿಕ ಶಾಂತಿಗೆ ಗಂಭೀರ ಬೆದರಿಕೆ ಒಡ್ಡಿದಂತೆ ಕಾಣುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ