ಹನಿಮೂನ್‌ನಲ್ಲಿ ಗಂಡ ಕೊಟ್ಟ ಸರ್ಪೈಸ್‌ಗೆ ಯುವತಿ ಫುಲ್ ಖುಷ್!

Published : Jun 01, 2025, 05:28 PM IST
Husband Surprise

ಸಾರಾಂಶ

ಮನಾಲಿಯಲ್ಲಿ ಹನಿಮೂನ್‌ಗೆ ತೆರಳಿದ್ದ ಯುವತಿಗೆ ಗಂಡ  ಬಿಗ್ ಸರ್ಪೈಸ್ ನೀಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿನ ಯುವ ಸಮುದಾಯ ತಮ್ಮ ಇಡೀ ಜೀವನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಗಂಡ-ಹೆಂಡತಿ ಮಧ್ಯೆ ಖಾಸಗಿಯಾಗಿರುವಂತಹ ವಿಷಯಗಳು ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಫಸ್ಟ್‌ ನೈಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮೊದಲ ರಾತ್ರಿಯ ಕೋಣೆ ಅಲಂಕರಿಸುವ ಆರಂಭದಿಂದ ಗಂಡು-ಹೆಣ್ಣನ್ನು ಒಳಗೆ ಕಳುಹಿಸುವರೆಗಿನ ದೃಶ್ಯಗಳು ಎಲ್ಲರ ಮೊಬೈಲ್‌ ತಲುಪುವಂತೆ ಮಾಡುತ್ತಾರೆ. ಇದೀಗ ಯುವತಿಯೊಬ್ಬಳು ಹನಿಮೂನ್‌ನಲ್ಲಿ ಗಂಡ ನೀಡಿದ ಸರ್ಪೈಸ್ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ಈ ವಿಡಿಯೋ ನೋಡಿದ ಮಹಿಳೆಯುರು, ಆಕೆಯ ಗಂಡನನ್ನು ತುಂಬಾ ಹೊಗಳುತ್ತಿದ್ದಾರೆ. ಕೆಲ ಯುವತಿಯರು ತಮಗೂ ಇಂತಹವುದೇ ಗಿಫ್ಟ್ ಬೇಕೆಂದು ಕಮೆಂಟ್ ಮೂಲಕ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ. ಕೆಲವರು ಇಂತಹ ವ್ಯಕ್ತಿಯೇ ತಮ್ಮ ಗಂಡನಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ವೀಡಿಯೊವನ್ನು @anjali.sahu3 ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿರುವ ಇಬ್ಬರೂ ನವವಿವಾಹಿತರು, ಅವರು ತಮ್ಮ ಹನಿಮೂನ್‌ಗಾಗಿ ಮನಾಲಿಗೆ ಬಂದಿದ್ದಾರೆ. ಮನಾಲಿಯ ಐಷಾರಾಮಿ ಹೋಟೆಲ್‌ನಲ್ಲಿ ಜೋಡಿ ವಾಸ್ತವ್ಯ ಮಾಡಿದೆ. ಹೋಟೆಲ್ ಸಿಬ್ಬಂದಿ, ಆಗಮಿಸಿರುವ ನವವಿವಾಹಿತ ಜೋಡಿಗಾಗ ಕೋಣೆಯನ್ನು ಹೂಗಳಿಂದ ಅಲಂಕರಿಸಿದ್ದಾರೆ. ಬೆಡ್ ಮೇಲೆ ಬಿಳಿ ಹೊದಿಕೆ ಹಾಕಿದ್ದಾರೆ. ನಂತರ ಕೇಕ್ ಇರಿಸಿ, ಹಾಸಿಗೆಯನ್ನು ಹೂವಿನ ದಳಗಳಿಂದ ಅಲಂಕರಿಸಿದ್ದಾರೆ.

ಹೂಗಳಿಂದ ಅಲಂಕೃತವಾದ ಕೋಣೆಯ ಮೆತ್ತನೆಯ ಹಾಸಿಗೆ ಮೇಲೆ ಕೆಂಪು ಬಣ್ಣದ ಬಟ್ಟೆ ಧರಿಸಿ ಯುವತಿ ಗಂಧರ್ವ ಕನ್ಯೆಯಂತೆ ಕುಳಿತಿದ್ದಾಳೆ. ಪತ್ನಿ ಬಳಿ ನಿಧಾನಕ್ಕೆ ಬರುವ ಆಕೆಯ ಗಂಡ, ಮೊಬೈಲ್ ಬಾಕ್ಸ್ ನೀಡುತ್ತಾನೆ. ಬಾಕ್ಸ್ ಓಪನ್ ಮಾಡಿದ ಪತ್ನಿ, ಹೊಸ ಮೊಬೈಲ್ ಕಂಡು ಸಂತೋಷ ವ್ಯಕ್ತಪಡಿಸುತ್ತಾಳೆ. ಈ ಎಲ್ಲಾ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಹೊಸ ಮೊಬೈಲ್ ಗಿಫ್ಟ್ ಆಗಿ ನೀಡಿದ ಗಂಡನಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾಳೆ. ಇದೀಗ ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೆ ಆ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದಿದೆ. ಇದರೊಂದಿಗೆ, ಅನೇಕ ವೀಕ್ಷಕರು ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಒಬ್ಬ ಹೇಳಿದ, 'ನೀವು ತುಂಬಾ ಅದೃಷ್ಟವಂತರು'. ಆದರೆ ಇನ್ನೊಬ್ಬ, ಆಕೆಯೂ ಮತ್ತು ಅವನು ಸಹ ಅದೃಷ್ಟವಂತ. ಇಂದಿನ ಪೀಳಿಗೆ ಜನರು ಪ್ರೀತಿ ತೋರಿಸೋದು ಹೀಗೆ ಎಂದಿದ್ದಾರೆ. ಒಂದಿಷ್ಟು ಜನರು ಗಂಡ ಮೊಬೈಲ್ ಕೊಡಿಸಿದ್ದರೆ, ಒಂದು ಫೋಟೋ ಹಾಕಿ ಥ್ಯಾಂಕ್‌ ಯು ಹೇಳಬಹುದಿತ್ತು. ಇಷ್ಟೆಲ್ಲಾ ವಿಡಿಯೋ ಮಾಡಿ ವೈರಲ್ ಮಾಡಿಕೊಳ್ಳೋದು ಬೇಕಿರಲಿಲ್ಲ ಎಂದಿದ್ದಾರೆ.

ಫಸ್ಟ್ ನೈಟ್ ವಿಡಿಯೋ

ಇತ್ತೀಚೆಗೆ ಜೋಡಿಗಳು ಫಸ್ಟ್‌ನೈಟ್ ಕೋಣೆಗೆ ಹೋಗುತ್ತಿದ್ದಂತೆ ಲೈವ್ ವ್ಲಾಗ್ ಮಾಡುತ್ತಾರೆ. ಈ ರೀತಿಯಾಗಿ ಮಾಡಿದ್ದು ಏಕೆ ಎಂಬುದರ ಬಗ್ಗೆ ಜೋಡಿಗಳು ತಮ್ಮದೇ ಆದ ಸ್ಪಷ್ಟನೆ ನೀಡುತ್ತವೆ. ಜನರು ಸಹ ಇಂತಹ ವಿಡಿಯೋಗಳಿಗೆ ಛೀಮಾರಿ ಹಾಕುತ್ತಿರುತ್ತಾರೆ.

ಇದನ್ನೂ ಓದಿ: ಬೇಡ ಅಂತ ಕೈ ಮುಗಿದ್ರು ಕೇಳಲಿಲ್ಲ: ತನ್ನ ಪಾಡಿಗೆ ರಸ್ತೆ ವ್ಯಾಪಾರ ಮಾಡ್ಕೋಂಡಿದ್ದ ಅಜ್ಜಿಯ ಅಂಗಡಿ ಕಿತ್ತಾಕಿದ ಯುವಕ: ವಿಡಿಯೋ ವೈರಲ್ 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು