ತ್ರಿಪುರ ಸಿಎಂ ಬಿಪ್ಲಬ್‌ ಹತ್ಯೆಗೆ ಯತ್ನ: ಆರೋಪಿಗಳ ಬಂಧನ!

Published : Aug 08, 2021, 07:14 AM IST
ತ್ರಿಪುರ ಸಿಎಂ ಬಿಪ್ಲಬ್‌ ಹತ್ಯೆಗೆ ಯತ್ನ: ಆರೋಪಿಗಳ ಬಂಧನ!

ಸಾರಾಂಶ

* ಸಿಎಂ ಮೇಲೆ ಕಾರು ಹರಿಸಲು ಮೂವರ ಪ್ರಯತ್ನ * ತ್ರಿಪುರ ಸಿಎಂ ಬಿಪ್ಲಬ್‌ ಹತ್ಯೆಗೆ ವಿಫಲ ಯತ್ನ * ಆಗ ರಸ್ತೆ ಬದಿ ಜಿಗಿದು ಪಾರಾದ ಬಿಪ್ಲಬ್‌ * ಮೂವರೂ ಆರೋಪಿಗಳ ಬಂಧನ

ಅಗರ್ತಲಾ(ಆ.08): ತ್ರಿಪುರ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಿಪ್ಲಬ್‌ ದೇವ್‌ ಅವರ ಹತ್ಯೆಗೆ ವಿಫಲ ಯತ್ನ ನಡೆಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ನಡೆದು ಹೋಗುತ್ತಿದ್ದ ಬಿಪ್ಲಬ್‌ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಅಗರ್ತಲಾ ಪೊಲೀಸರು ಮೂವರನ್ನು ಗುರುವಾರ ತಡರಾತ್ರಿ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಗುರುವಾರ ಅಗರ್ತಲಾದ ಶ್ಯಾಮಪ್ರಸಾದ ಮುಖರ್ಜಿ ಮಾರ್ಗದ ತಮ್ಮ ಸರ್ಕಾರಿ ನಿವಾಸದ ಸನಿಹ ಅಂಗರಕ್ಷಕರೊಂದಿಗೆ ಬಿಪ್ಲಬ್‌ ವಾಕಿಂಗ್‌ ಮಾಡುತ್ತಿದ್ದರು. ಆಗ ಕಾರಿನಲ್ಲಿ ಬಂದ ಮೂವರು ಬಿಪ್ಲಬ್‌ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಆಗ ಅಪಾಯ ಅರಿತ ಬಿಪ್ಲಬ್‌ ಚಂಗನೆ ರಸ್ತೆ ಬದಿಗೆ ಹಾರಿ ಬಚಾವಾಗಿದ್ದಾರೆ. ಆದರೆ ಅವರ ಅಂಗರಕ್ಷಕನಿಗೆ ಕಾರು ಬಡಿದಿದ್ದು, ಸಣ್ಣಪುಟ್ಟಗಾಯಗಳಾಗಿವೆ.

ಬಂಧಿತ ಮೂವರನ್ನೂ ಈಗ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಲ್ಲರೂ 20ರ ಪ್ರಾಯದವರು. ನ್ಯಾಯಾಂಗ ವಶಕ್ಕೆ ಅವರನ್ನು ಒಪ್ಪಿಸಿರುವ ಕಾರಣ ಜೈಲಿಗೇ ಹೋಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಬಿಪ್ಲಬ್‌ ದೇಬ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!