ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಗೆ ಡೆಲಿವರಿ ಮಾಡಿಸಿದ ಪೊಲೀಸರು!

By Suvarna NewsFirst Published Aug 7, 2021, 4:10 PM IST
Highlights

* ಪ್ರವಾಹದಲ್ಲಿ ಸಿಕ್ಕಾಕೊಂಡ ಗರ್ಭಿಣಿ ಮಹಿಳೆ

* ದಾರಿ ಮಧ್ಯೆ ಮಹಿಳೆಗೆ ಹೆರಿಗೆ ನೋವು

* ಸ್ಥಳಕ್ಕೆ ಧಾವಿಸಿದ ಪೊಲೀಸರಿಂದ ಡೆಲಿವರಿ

ಭೋಪಾಲ್(ಆ.07): ಪೊಲೀಸರ ಹೆಸರು ಕೇಳಿದ್ರೆ ಸ್ವಲ್ಪ ವಿಚಿತ್ರವೆನಿಸುತ್ತದೆ. ಅವರ ಬಗ್ಗೆ ಅನೇಕರು ದೂರು ನೀಡುತ್ತಿರುತ್ತಾರೆ. ಆದರೀಗ ಸದ್ಯ ವಿಭಿನ್ನ ಘಟನೆಯೊಂದು ವರದಿಯಾಗಿದ್ದು, ಈ ಪೊಲೀಸರು ಮಾಡಿದ ಸೇವೆಗೆ ಸೆಲ್ಯೂಟ್ ಎನ್ನುತ್ತೀರಿ. 

ಹೌದು ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದ ಘನೆ ಇದಾಗಿದೆ. ಸಸದ್ಯ ಇಲ್ಲಿ ಮಳೆಯಬ್ಬರಕ್ಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಸಾಮಾನ್ಯರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಗರ್ಭಿಣಿ ಮಹಿಳೆಯೊಬ್ಬರು ಸುಥೈಲಾ ರೋಡ್‌ನಲ್ಲಿ ಸಿಕ್ಕಾಕೊಂಡಿದ್ದರು. ಇದೇ ವೇಳೆಡ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಸಬ್ ಇನ್ಸ್‌ಪೆಕ್ಟರ್ ಅರುಂಧತಿ ರಜಾವತ್ ಮತ್ತು ಕಾನ್ಸ್‌ಟೇಬಲ್ ಇತಿಶ್ರೀ ರಜಾವತ್ ಅವರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಸಮಯ ವ್ಯಯಿಸದ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತಲುಪಿದ್ದಾರೆ. ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಡೆಲಿವರಿ ಮಾಡಿಸಿದ್ದಾರೆ.

ಸದ್ಯ ಈ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳ ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಬಂದ್ ಆಗಿತ್ತು. ಹೀಗಾಗಿ ಅವರು ನರ್ಸ್‌ ಕರೆಸಿ ಡೆಲಿವರಿ ಮಾಡಿಸಿದ್ದಾರೆ. ಮಹಿಳೆ ಹಾಗೂ ಮಗು ಆರೋಗ್ಯದಿಂದಿದ್ದಾರೆ ಎಂದು ತಿಳಿದು ಬಂದಿದೆ. ಮಳೆ ನಿಂತ ನಂತರ ಮಹಿಳೆಯನ್ನು ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

click me!