
ನವದೆಹಲಿ(ಆ.07): ಪ್ರತಿಯೊಬ್ಬ ಮಗುವಿಗೂ ತನ್ನ ತಾಯಿಯ ಸರ್‌ನೇಮ್ ಬಳಸುವ ಹಕ್ಕಿದೆ, ಈ ವಿಚಾರದಲ್ಲಿ ತಂದೆ ಮಕ್ಕಳನ್ನು ತಡೆಯಲು ಸಾಧ್ಯವಿಲ್ಲ. ಅಲ್ಲದೇ ತನ್ನ ಹೆಸರು ಬಳಸಲು ಒತ್ತಾಯಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ತನ್ನ ಅಪ್ರಾಪ್ತ ಮಗಳು ತನ್ನ ಸರ್‌ನೇಮ್ ಬಳಸದೇ, ತಾಯಿಯ ಸರ್‌ನೇಮ್ ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಂದೆಯೊಬ್ಬರು, ಮಗಳು ಐಡಿಯಲ್ಲಿ ತನ್ನ ಸರ್‌ನೇಮ್ ಬಳಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ "ಒಬ್ಬ ಮಗಳು ತನ್ನ ಸರ್‌ನೇಮ್ ಮಾತ್ರ ಬಳಸಬೇಕೆಂದು ಒತ್ತಾಯಿಸುವ ಹಕ್ಕು ತಂದೆಗಿಲ್ಲ. ಅಪ್ರಾಪ್ತ ಮಗಳು ತನಗಿಷ್ಟದ ಸರ್‌ನೇಮ್ ಬಳಸಿ ಸಂತೋಷವಾಗಿದ್ದರೆ, ನಿಮ್ಮ ಸಮಸ್ಯೆ ಏನು? ಎಂದು ಪ್ರಶ್ನಿಸಿದೆ.
ಎಲ್ಲಾ ಮಕ್ಕಳು ತಾಯಿ ಹೆಸರನ್ನು ಬಳಸಬಹುದು
ಬಾಲಕಿ ಹೆಸರು ಬದಲಾಯಿಸಬೇಕೆಂಬ ಕೋರಿಕೆಗೆ ಅಚ್ಚರಿ ವ್ಯಕ್ತಪಡಿಸಿದ ಜಸ್ಟೀಸ್ ರೇಖಾ, ಇಂತಹುದ್ದೊಂದು ಆದೇಶ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬ ಮಗುವಿಗೂ ತನ್ನ ತಾಯಿಯ ಹೆಸರು ಬಳಸುವ ಹಕ್ಕಿದೆ. ಈ ವಿಚಾರವಾಗಿ ಕೋರ್ಟ್ ಮಧ್ಯ ಪ್ರವೇಶಿಸಿ, ತಂದೆ ಹೆಸರು ಬಳಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಇನ್ನು ಹೆಸರು ಬದಲಾಯಿಸಲು ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ಮಗಳು ಅಪ್ರಾಪ್ತಳು, ಆಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧಳು ಅಲ್ಲ ಎಂದೂ ಉಲ್ಲೇಖಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ