
ನವದೆಹಲಿ(ನ.28): ಇತರ ರಾಜ್ಯಗಳಲ್ಲೂ ಪಕ್ಷ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರನ್ನು (Congress Leaders) ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ತೃಣಮೂಲ ಕಾಂಗ್ರೆಸ್ (Trinamool Congress), ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ಉಳಿಯುವ ಭರವಸೆ ನೀಡಿದೆ. ಕಾಂಗ್ರೆಸ್ ಜೊತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಟಿಎಂಸಿಯು (TMC) ಸಂಯುಕ್ತ ವಿರೋಧ ಪಕ್ಷದ ಭಾಗವಾಗಿ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಎರಡು ಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡಿಲ್ಲವಾದ್ದರಿಂದ ಕಾಂಗ್ರೆಸ್‌ನೊಂದಿಗಿನ ಅದರ ಸಮೀಕರಣವು ಇತರ ಪಕ್ಷಗಳಂತೆಯೇ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ (Derek O' Brien ) ಸ್ಪಷ್ಟಪಡಿಸಿದ್ದಾರೆ.
ಎರಡು ಪಕ್ಷಗಳ ನಡುವೆ ಅಂತರವಿದೆ ಎಂದು ಡೆರೆಕ್ ಒ'ಬ್ರಿಯಾನ್ ಹೇಳಿದ್ದೇಕೆ?
ರಾಜ್ಯಸಭೆಯಲ್ಲಿ ತೃಣಮೂಲದ ಸಂಸದೀಯ ಪಕ್ಷದ ನಾಯಕ ಡೆರೆಕ್ ಓ ಬ್ರಿಯಾನ್, ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಾಮಾನ್ಯ ವಿಷಯಗಳನ್ನು ಎತ್ತಿಹಿಡಿಯುವ ಕುರಿತು ಮಾತನಾಡಿದರು. ಆರ್‌ಜೆಡಿ, ಡಿಎಂಕೆ, ಆರ್‌ಜೆಡಿ ಮತ್ತು ಸಿಪಿಎಂ ನಡುವೆ ವ್ಯತ್ಯಾಸವಿದೆ ಎಂಬುದನ್ನು ನಾನು ಗಮನಿಸಬೇಕು ಎಂದು ಅವರು ಹೇಳಿದರು. ಅವರೆಲ್ಲರೂ ಕಾಂಗ್ರೆಸ್‌ನ ಚುನಾವಣಾ ಮಿತ್ರರು. ಎನ್‌ಸಿಪಿ-ಶಿವಸೇನೆ ಮತ್ತು ಜೆಎಂಎಂ ಕಾಂಗ್ರೆಸ್ ಜೊತೆ (Congress) ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿವೆ. ಕಾಂಗ್ರೆಸ್ ನಮ್ಮ ಚುನಾವಣಾ ಮಿತ್ರ ಪಕ್ಷವಲ್ಲ ಮತ್ತು ನಾವು ಅವರೊಂದಿಗೆ ಸರ್ಕಾರ ನಡೆಸುತ್ತಿಲ್ಲ ಅಷ್ಟೇ ವ್ಯತ್ಯಾಸ ಎಂದು ಅವರು ತಿಳಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಬೇರ್ಪಟ್ಟ ಟಿಎಂಸಿ
ಒಂದು ಕಾಲದಲ್ಲಿ ಯುಪಿಎಯ ಮಿತ್ರ ಪಕ್ಷವಾಗಿದ್ದ ಟಿಎಂಸಿ 2012 ರಲ್ಲಿ ಡೀಸೆಲ್ ಬೆಲೆಗಳ ಹೆಚ್ಚಳ ಮತ್ತು ಇನ್ನಿತರ ಸುಧಾರಣೆಗಳ ಬಗ್ಗೆ ಒಕ್ಕೂಟದಿಂದ ಹೊರನಡೆದರು, ಹೀಗಾಗಿ ಸರ್ಕಾರವು ಅಲ್ಪಸಂಖ್ಯಾತಕ್ಕಿಳಿದಿತ್ತು. 2014 ರವರೆಗೆ, ಯುಪಿಎ ಸರ್ಕಾರವು ಸಮಾಜವಾದಿ ಪಕ್ಷ ಮತ್ತು ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಹೊರಗಿನ ಬೆಂಬಲದ ಮೇಲೆ ನಿಂತಿತ್ತು.
ಕಳೆದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್‌ನಿಂದ ಹಲವು ಭಿನ್ನಮತೀಯರು ಟಿಎಂಸಿಗೆ
ಕಳೆದ ಕೆಲವು ತಿಂಗಳುಗಳಲ್ಲಿ, ತೃಣಮೂಲ ಕಾಂಗ್ರೆಸ್ ಹಲವಾರು ರಾಜ್ಯಗಳಲ್ಲಿ ತನ್ನ ವಿಸ್ತರಣಾ ಯೋಜನೆಗಳನ್ನು ತೀವ್ರಗೊಳಿಸಿದೆ. ಟಿಎಂಸಿಯ ಈ ನಡೆಯ ನಂತರ ಹಲವು ಅತೃಪ್ತ ಕಾಂಗ್ರೆಸ್ ನಾಯಕರು ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ವಾರ, ಮುಕುಲ್ ಸಂಗ್ಮಾ ನೇತೃತ್ವದಲ್ಲಿ 12 ಕಾಂಗ್ರೆಸ್ ಶಾಸಕರು (Congress MLA's) ಸೇರ್ಪಡೆಗೊಂಡಿದ್ದರಿಂದ ಮೇಘಾಲಯದಲ್ಲಿ (Meghalaya) ಅದು ಪ್ರಮುಖ ವಿರೋಧ ಪಕ್ಷವಾಯಿತು. ತ್ರಿಪುರಾ ನಾಗರಿಕ ಚುನಾವಣೆಯಲ್ಲಿ ಟಿಎಂಸಿ ಪ್ರಮುಖ ವಿರೋಧ ಪಕ್ಷವಾಗಿದೆ. ಈ ಹಿಂದೆ ರಾಜ್ಯವನ್ನು ಆಳಿದ ಸಿಪಿಎಂಗಿಂತ ಹೆಚ್ಚಿನ ಮತಗಳನ್ನು ಗಳಿಸಿತು. ಗೋವಾದಲ್ಲಿ ಕಾಂಗ್ರೆಸ್ ಮಾಜಿ ಸಿಎಂ ಸೇರಿದಂತೆ ಹಲವು ದೊಡ್ಡ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸಹಾಯದಿಂದ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಗೋವಾ ಮತ್ತು ತ್ರಿಪುರಾದಲ್ಲಿ 2023 ರ ಚುನಾವಣೆಗೆ ಗಟ್ಟಿಯಾದ ಅಡಿಪಾಯವನ್ನು ಹಾಕುತ್ತಿದ್ದಾರೆ.
ಸೋನಿಯಾಗಾಗಿ ಪಿಎಂ ವಾಜಪೇಯಿಯನ್ನೇ ಎದುರಾಕ್ಕೊಂಡಿದ್ದ ದೀದಿ!
ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ (Mamata banerjee And Sonia Gandhi) ನಡುವಿನ ಮಧುರ ಸಂಬಂಧದ ಕಥೆಯು ರಾಜೀವ್ ಗಾಂಧಿ (Rajeev Gandhi) ಅವರು ಮಮತಾ ಅವರನ್ನು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದಾಗಿನಿಂದ ಪ್ರಾರಂಭವಾಗುತ್ತದೆ. ರಾಜೀವ್ ಅವರ ಸಾಮೀಪ್ಯದಿಂದಾಗಿ ಮಮತಾ ಸೋನಿಯಾ ಗಾಂಧಿಯವರಿಗೂ ಹತ್ತಿರವಾಗಿದ್ದರು. ಇಬ್ಬರ ನಡುವೆ ಭಾವಪೂರ್ಣ ಸಂಬಂಧವಿತ್ತು. 1999 ರಲ್ಲಿ, ಅವರು ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು NDA ಗೆ ಸೇರಿದಾಗ, ಇಬ್ಬರೂ ನಾಯಕರು ರಾಷ್ಟ್ರಪತಿ ಭವನದಲ್ಲಿ ಆಲಂಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದಿದ್ದವು. ನಂತರ ಮಮತಾ ಅವರನ್ನು ಅಭಿನಂದಿಸಿದ್ದ ಸೋನಿಯಾ ಗಾಂಧಿ ಮರಳಿ ಯಾವಾಗ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವಿರಿ ಎಂದು ಕೇಳಿದ್ದರು. ಆಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
Mamata In Delhi: ಪ್ರತಿ ಬಾರಿ ಸೋನಿಯಾ ಭೇಟಿಯಾಗೋ ಅಗತ್ಯವೇನಿದೆ? ದೀದೀ ಮಾತಿನ ಮರ್ಮವೇನು?
ಅದೇ ವರ್ಷದಲ್ಲಿ, ಅಟಲ್ ಬಿಹಾರಿ ವಾಜಪೇಯಿ (Vajpayee) ಅವರ ಸರ್ಕಾರವು ಕಾಂಗ್ರೆಸ್ ಮುಖ್ಯಸ್ಥರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಯತ್ನಿಸಿದಾಗ ಮತ್ತು ವಿದೇಶಿ ಮೂಲದ ಜನರು ಸಾಂವಿಧಾನಿಕ ಹುದ್ದೆಗಳಿಗೆ, ವಿಶೇಷವಾಗಿ ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ತಲುಪುವುದನ್ನು ತಡೆಯಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಪ್ರಯತ್ನಿಸಿದಾಗ, ಅದೇ ಸರ್ಕಾರದಲ್ಲಿ ರೈಲ್ವೆ ಸಚಿವೆ ಹಾಗೂ ಮೈತ್ರಿಕೂಟದ ಪಾಲುದಾರ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ಈ ಪ್ರಚಾರವನ್ನು ವಿರೊಧಿಸಿದ್ದರು. ಸೋನಿಯಾ ಗಾಂಧಿಯನ್ನು ಪ್ರತ್ಯೇಕಿಸುವ ಪ್ರಯತ್ನಗಳು ಆಡಳಿತಾರೂಢ ಸಮ್ಮಿಶ್ರಕ್ಕೆ ಭಾರೀ ಹೊಡೆತ ನೀಡಬಹುದು ಎಂದು ಮಮತಾ ಸ್ಪಷ್ಟವಾಗಿ ಹೇಳಿದ್ದರು.
1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರ ವಿದೇಶಿ ಮೂಲದ ವಿಷಯವನ್ನು ಬಿಜೆಪಿ ಗಂಭೀರವಾಗಿ ಬಿಂಬಿಸಿತ್ತು. ಆದ್ದರಿಂದ ಸರಕಾರ ರಚನೆಯಾದಾಗ ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಕಾನೂನೊಂದನ್ನು ಜಾರಿಗೆ ತರಬೇಕು ಎಂಬ ನೈತಿಕ ಒತ್ತಡ ಅದರ ಮೇಲೆ ಇತ್ತು. ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಬಿಜೆಪಿ ಮೇಲೆ ಒತ್ತಡ ಹೇರುತ್ತಿತ್ತು. ಇದೆಲ್ಲದರ ನಡುವೆ ಅಂದಿನ ಕಾನೂನು ಸಚಿವ ರಾಮ್ ಜೇಠ್ಮಲಾನಿ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಅವರಿಗೆ ಈ ವಿವಾದಾತ್ಮಕ ಮಸೂದೆಯ ಕರಡು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿತ್ತು.
Meghalaya Politics: ಕಾಂಗ್ರೆಸ್‌ಗೆ ಟಿಎಂಸಿ ಗುದ್ದು: ಪಿಕೆ ಆಟಕ್ಕೆ ಎಲ್ಲರೂ ಸೈಲೆಂಟ್!
ಆಗ ಈ ನಾಯಕರು ಮಸೂದೆಯನ್ನು ರೂಪಿಸಲು ಸ್ವಲ್ಪ ಸಮಯ ಹಿಡಿಯಬಹುದು ಎಂದು ಹೇಳಿದ್ದರು. ವಿಧೇಯಕದ ಸಿದ್ಧತೆಗಳ ನಡುವೆಯೇ ಮಮತಾ ಬ್ಯಾನರ್ಜಿ ಅವರು ಸಂಸತ್ ಭವನದಲ್ಲಿಯೇ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ತಮ್ಮ ವಿರೋಧವನ್ನು ಸೂಚಿಸಿದ್ದರು. ವಿದೇಶಿ ಮೂಲದ ಭಾರತೀಯರು (ಗಾಂಧಿ ಅವರಂತಹ) ರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಉನ್ನತ ಹುದ್ದೆಗಳಿಗೆ ಸ್ಪರ್ಧಿಸುವುದನ್ನು ತಡೆಯಲು ಯಾವುದೇ ಕಾನೂನು ತರುವ ಮೊದಲು ಸರ್ಕಾರವು ಸಾಧಕ-ಬಾಧಕಗಳನ್ನು ನಿರ್ಣಯಿಸಬೇಕು ಎಂದು ಮಮತಾ ನೇರವಾಗಿ ಹೇಳಿದರು. ಈ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವುದಾಗಿ ಪ್ರಧಾನಿ ವಾಜಪೇಯಿ ಭರವಸೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ