ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಟ!

By Suvarna News  |  First Published Dec 23, 2023, 5:03 PM IST

ಶ್ರೀ ರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದಕ್ಕೂ ಮುನ್ನ ಆಯೋಧ್ಯಾ ಧಾಮ ರೈಲು ನಿಲ್ದಾಣ ಹಾಗೂ ಮರ್ಯಾದ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ತಯಾರಾಗಿದೆ. ಇಂದು ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗಿದೆ.
 


ಆಯೋಧ್ಯೆ(ಡಿ.23) ಆಯೋಧ್ಯೆ ಭವ್ಯ ಶ್ರೀ ರಾಮ ಮಂದಿರ ಜನವರಿ 22ರಂದು ಉದ್ಘಾಟನೆಗೊಳ್ಳುತ್ತಿದೆ. ಇದೇ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಯ ಮರ್ಯಾದ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ವಿಮಾನ ನೇರವಾಗಿ ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಅಗುವ ಮೂಲಕ ಮೋದಿ ವಿಮಾನ ನಿಲ್ದಾಣದ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗಿದೆ.

ನಾಗರೀಕ ವಿಮಾನಯಾನ ಸಚಿವಾಲಯ ಅಧಿಕಾರಿಗಳು, ಆಯೋಧ್ಯಾ ಆಡಳಿತ ಮಂಡಳಿ ಸೇರಿದಂತೆ ಹಲವರು ತಜ್ಞರ ಸಮ್ಮುಖದಲ್ಲಿ ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಆಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣದ ಮುಖ್ಯಸ್ಥ ರಾಜೀವ್ ಕುಲಶ್ರೇಷ್ಠ ಹೇಳಿದ್ದಾರೆ. 

Latest Videos

 

ಆಯೋಧ್ಯೆ ರಾಮ ಮಂದಿರ ಆಹ್ವಾನ ಕುರಿತು ಅಚ್ಚರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ!

ಮರ್ಯಾದ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಮೊದಲ ಹಂತ)
ರನ್‌ವೇ: 2200 ಚದರ ಮೀಟರ್
ಟರ್ಮಿನಲ್ ಬಿಲ್ಡಿಂಗ್:  65,000 ಚದರ ಅಡಿ
ಏರ್‌ಕ್ರಾಫ್ಟ್:  ಬೋಯಿಂಗ್ 737, ಏರ್‌ಬಸ್ 319, 320 ಹಾಗೂ ಇತರ ಸಣ್ಣ ವಿಮಾನ ಸೇರಿದಂತೆ ಗಂಟೆಗೆ 2 ರಿಂದ 3 ವಿಮಾನ  

ಮರ್ಯಾದ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಎರಡನೇ ಹಂತ)
ರನ್‌ವೇ: 3700 ಮೀಟರ್
ಟರ್ಮಿನಲ್ ಬಿಲ್ಡಿಂಗ್:  5 ಲಕ್ಷ ಚದರ ಅಡಿ
ಏರ್‌ಕ್ರಾಫ್ಟ್:  ಬೋಯಿಂಗ್ 787, 777 ಹಾಗೂ ಅಂತಾರಾಷ್ಟ್ರೀಯ ವಿಮಾನಗಳು) 

ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್ ನಾಯಕರಿಗೆ ಆಹ್ವಾನ!

ರಾಮ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಜನವರಿಯಲ್ಲಿ ಭಾರಿ ಪ್ರಮಾಣದ ಭಕ್ತರು ಅಯೋಧ್ಯೆಗೆ ಹರಿದುಬರುವ ನಿರೀಕ್ಷೆ ಇದೆ. ಹೀಗಾಗಿ ತೀರ್ಥದಲ್ಲಿ ಮೊಬೈಲ್ ನೆಟ್‌ವರ್ಕ್‌ ಎಲ್ಲರಿಗೂ ಸುಗಮಗಾಗಿ ಲಭಿಸಲಿ ಎಂದು 4 ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುವುದು ಮಂದಿರದ ಟ್ರಸ್ಟ್‌ ಹೇಳಿದೆ. ಭಾರಿ ಸಂಖ್ಯೆಯ ಜನರು ಒಂದೆಡೆ ಸೇರಿದರೆ ನೆಟವ್‌ವರ್ಕ್‌ ಜಾಮ್‌ ಆಗುತ್ತಿರುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಈ ಕ್ರಮ ಜರುಗಿಸಲಾಗಿದೆ. ಜ.22ರ ಪ್ರಾಣಪ್ರತಿಷ್ಠಾಪನೆ ವೇಳೆ ವಿವಿಧ ಸ್ಥಳಗಳಲ್ಲಿ ಟೀ ಸ್ಟಾಲ್‌ಗಳು, ಭೋಜನ ಶಾಲೆಗಳು, ಆಂಬ್ಯುಲೆನ್ಸ್ ಮತ್ತು ಇ-ರಿಕ್ಷಾದ ವ್ಯವಸ್ಥೆಯೂ ಇರುತ್ತವೆ.

ರಾಮಮಂದಿರದ ಹೊರಗೆ ಸೌಲಭ್ಯ ಕೇಂದ್ರ ಸ್ಥಾಪಿಸಲಾಗುತ್ತದೆ. ಭಗವಾನ್ ರಾಮನ ಮೂರು ದೈನಂದಿನ ಆರತಿ ಅವಧಿಗಳಿಗೆ ಪಾಸ್‌ಗಳ ಬಗ್ಗೆ ಮಾಹಿತಿ ನೀಡಲಿದೆ. ಇದು ದೇಣಿಗೆ ಕೌಂಟರ್ ಮತ್ತು ಹೋಮಿಯೋಪತಿ ಚಿಕಿತ್ಸಾ ಕೇಂದ್ರವನ್ನು ಸಹ ಹೊಂದಿದೆ, ಅಲ್ಲಿ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಇಲ್ಲಿ ವೈದ್ಯರನ್ನು ಸಂಪರ್ಕಿಸಬಹುದು. ಅಂಗವಿಕಲರಿಗೆ ಗಾಲಿ ಕುರ್ಚಿ ಸೌಲಭ್ಯ ಇರಲಿದೆ.

click me!