Breaking: ಇಸ್ರೇಲ್‌ ಮೂಲದ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ಡ್ರೋನ್‌ ದಾಳಿ, ಸಹಾಯಕ್ಕೆ ಧಾವಿಸಿದ ಭಾರತ!

By Santosh Naik  |  First Published Dec 23, 2023, 4:39 PM IST

ಲೈಬೀರಿಯನ್ ಧ್ವಜ ಹೊಂದಿದ್ದ ರಾಸಾಯನಿಕ ಉತ್ಪನ್ನಗಳ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆಸಲಾಗಿದ್ದು ಯಾವುದೇ ಸಿಬ್ಬಂದಿಗೆ ತೊಂದರೆಯಾಗಿಲ್ಲ ಗುಜರಾತ್‌ನ ವೆರಾವಲ್‌ನಿಂದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.
 


ನವದೆಹಲಿ (ಡಿ.23): ಅರಬ್ಬಿ ಸಮುದ್ರದಲ್ಲಿ ಡ್ರೋನ್‌ ದಾಳಿ ನಡೆದಿದ್ದು, ರಾಸಾಯನಿಕ ಉತ್ಪನ್ನವಿದ್ದ ವ್ಯಾಪಾರಿ ಹಡಗಿಗೆ ಭಾರೀ ಹಾನಿಯಾಗಿದೆ. ಆದರೆ, ಯಾವುದೇ ಸಾವು ನೋವು ಉಂಟಾಗಿಲ್ಲ ಎಂದು ಎರಡು ಕಡಲ ಏಜೆನ್ಸಿಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ಒಂದು ಹಡಗು ಇಸ್ರೇಲ್‌ ಸಂಯೋಜಿತ ವ್ಯಾಪಾರಿ ಹಡಗು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಭಾರತೀಯ ಕರಾವಳಿ ಕಾವಲು ಪಡೆ ಸಹಾಯಕ್ಕೆ ಧಾವಿಸಿದೆ. 'ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ ಡ್ರೋನ್ ದಾಳಿಯಿಂದ ಉಂಟಾದ ಬೆಂಕಿಯ ಕುರಿತು ವರದಿ ಬಂದ ಬೆನ್ನಲ್ಲಿಯೇ ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲು ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಎಂವಿ ಕೆಮ್ ಪ್ಲುಟೊ ಎಂಬ ವ್ಯಾಪಾರಿ ಹಡಗು ಕಡೆಗೆ ಪ್ರಯಾಣ ಮಾಡುತ್ತಿದೆ. ಹಡಗಿನಲ್ಲಿ ಕಚ್ಚಾ ತೈಲವಿದ್ದು, ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು. ಸಿಕ್ಕಿರುವ ಮಾಹಿತಿಯ ಪ್ರಕಾರ, ಬೆಂಕಿಯನ್ನು ಈಗಾಗಲೇ ನಂದಿಸಲಾಗಿದೆ ಆದರೆ ಅದು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತಿಗೆ ನಿಯೋಜಿಸಲಾಗಿತ್ತು. ಈಗ ಅದು ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ತನ್ನ ಪ್ರಯಾಣ ನಡೆಸಿದೆ. ಸುಮಾರು 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಐಸಿಜಿಎಸ್ ವಿಕ್ರಮ್ ಪ್ರದೇಶದಲ್ಲಿರುವ ಎಲ್ಲಾ ಹಡಗುಗಳಿಗೆ ನೆರವು ನೀಡಲು  ಸೂಚನೆ ನೀಡಲಾಗಿದೆ' ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್‌ ಮೂಲದ ವ್ಯಾಪಾರಿ ಹಡಗಿನ ಮೇಲೆ ಮಾನವರಹಿತ ವೈಮಾನಿಕ ವಾಹನದಿಂದ ದಾಳಿ ಮಾಡಲಾಗಿದ್ದು, ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಅಂಬ್ರೆ ಶನಿವಾರ ಹೇಳಿದೆ. ಲೈಬೀರಿಯಾದ ಧ್ವಜ ಹೊಂದಿದ್ದ ಈ ಹಡಗು ರಾಸಾಯನಿಕ ಉತ್ಪನ್ನಗಳನ್ನು ತನ್ನಲ್ಲಿ ಇರಿಸಿಕೊಂಡಿತ್ತು. ತಕ್ಷಣವೇ ಬೆಂಕಿಯನ್ನು ನಂದಿಸಲಾಗಿದೆ. ಯಾವುದೇ ಸಿಬ್ಬದಿಗೆ ಹಾನಿಯಾಗಿಲ್ಲ. ಗುಜರಾತ್‌ನ ವೆರಾವಲ್‌ನಿಂದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.

Tap to resize

Latest Videos

ಜವಾಹಿರಿ ಹತ್ಯೆ ಖಂಡಿಸಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ ತಾಲಿಬಾನ್‌..!

ಹಡಗಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಹಡಗಿನ ಒಳಗೆ ನೀರೂ ಸಹ ನುಗ್ಗಿದೆ. ಈ ಹಡಗು, ಇಸ್ರೇಲಿ ಮೂಲದ್ದಾಗಿದೆ. ಸೌದಿ ಅರೇಬಿಯಾದಿಂದ ಹೊರಟಿದ್ದ ಈ ಹಡಗು, ಭಾರತದ ಮಂಗಳೂರಿಗೆ ತಲುಪುವ ಹಾದಿಯಲ್ಲಿತ್ತು ಎಂದು ಅಂಬ್ರೆ ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.

 

Iraq ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ!

click me!