
ಇಡೀ ವಿಶ್ವದ ಪ್ರಮುಖ ಪ್ರವಾಸಿ ತಾಣಗಳೆಲ್ಲವೂ ಭಾರತದಲ್ಲಿವೆ. ಹಿಮಾಲಯದಿಂದ ಮರಭೂಮಿ, ಅತ್ಯಧಿಕ ಮಳೆ ಮತ್ತು ಬರಪೀಡಿತ ಪ್ರದೇಶಗಳು, ಐತಿಹಾಸಿಕ ತಾಣ ಸೇರಿದಂತೆ ಭಾರತ ಭೌಗೋಳಿಕವಾಗಿ ಶ್ರೀಮಂತವಾಗಿದೆ. ಆದ್ರೆ ಭಾರತದ ಕೆಲವು ಸ್ಥಳಗಳಿಗೆ ತೆರಳದಂತೆ ನಿಷೇಧವಿದೆ. ಈ ಪ್ರದೇಶಗಳಿಗೆ ತೆರಳಬೇಕಾದ್ರೆ ಪ್ರವಾಸಿಗರು ವಿಶೇಷ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ದೇಶದ ವಾಣಿಜ್ಯ ನಗರಿ ಮುಂಬೈನ ಟ್ರೋಂಬೆ ಪ್ರದೇಶದಲ್ಲಿರುವ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಂದ ಇಲ್ಲಿ ನಿಷೇಧ ವಿಧಿಸಿದ್ದು, ಇದು ಪ್ರವಾಸಿ ಕೇಂದ್ರವಲ್ಲ ಎಂದು ಘೋಷಿಸಲಾಗಿದೆ. ಅಧಿಕೃತ ಸಿಬ್ಬಂದಿಗೆ ಮಾತ್ರ ಇಲ್ಲಿ ಅನುಮತಿ ನೀಡಲಾಗುತ್ತದೆ.
ಸಿಯಾಚಿನ್ ಹಿಮನದಿಯನ್ನು ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದು ಪರಿಗಣಿಸಲಾಗುತ್ತದೆ. ಇದೊಂದು ಮಿಲಿಟರಿ ಪ್ರದೇಶವಾಗಿರುವ ಕಾರಣ ಸಾಮಾನ್ಯ ಪ್ರವಾಸಿಗರಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿ ಪ್ರಯಾಣಿಸಲು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮತ್ತು ಆಡಳಿತದಿಂದ ಅನುಮತಿ ಪಡೆಯುವುದು ಅಗತ್ಯವಾಗಿರುತ್ತದೆ.
ಬ್ಯಾರೆನ್ ದ್ವೀಪ, ಅಂಡೋಮಾನ್ ಮತ್ತು ನಿಕೋಬಾರ್
ಈ ಬ್ಯಾರೆನ್ ದ್ವೀಪವು ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯನ್ನು ಹೊಂದಿದೆ. ಈ ಸಕ್ರಿಯ ಜ್ವಾಲಾಮುಖಿಯನ್ನು ಪ್ರವಾಸಿಗರು ದೂರದಿಂದಲೇ ವೀಕ್ಷಣೆ ಮಾಡಬಹುದಾಗಿದೆ. ಈ ದ್ವೀಪದೊಳಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ಈ ದ್ವೀಪದ ಸಮೀಪಕ್ಕೆ ಹಡಗು ಅಥವಾ ಸಣ್ಣ ದೋಣಿಗಳ ಮೂಲಕ ಹೋಗಬಹುದು. ದೋಣಿಯಿಂದಲೇ ಜ್ವಾಲಾಮುಖಿ ವೀಕ್ಷಿಸಬಹುದು.
ನಿಕೋಬಾರ್ ಬುಡಕಟ್ಟು ಮೀಸಲು ಪ್ರದೇಶ
ನಿಕೋಬಾರ ದ್ವೀಪದಲ್ಲಿ ಹಲವು ಸೂಕ್ಷ್ಮ ಸ್ಥಳಗಳ ಮೇಲೆ ಸಾರ್ವಜನಿಕರಿಗೆ ನಿರ್ಬಂಧವಿದೆ. ಈ ದ್ವೀಪದ ಸ್ಥಳೀಯ ಬುಡಕಟ್ಟು ಸಮುದಾಯಗಳ ರಕ್ಷಣೆಗೋಸ್ಕರ ಸಾಮಾನ್ಯ ಪ್ರವಾಸಿಗರಿಗೆ ಅನುಮತಿ ಇಲ್ಲದೇ ಪ್ರವೇಶವನ್ನು ನಿಷೇಧಿಸಲಾಗಿದೆ. ನಿಕೋಬಾರ್ ದ್ವೀಪಗಳಿಗೆ ಪ್ರಯಾಣಿಸುವವರು ಬುಡಕಟ್ಟು ಪಾಸ್ ಅಥವಾ ಆಡಳಿತದಿಂದ ಅಗತ್ಯವಾದ ಸರ್ಕಾರಿ ಅನುಮತಿಯನ್ನು ಪಡೆಯಬೇಕು. ಪ್ರಯಾಣ ನಿರ್ಬಂಧಗಳು ವಿದೇಶಿ ಪ್ರಜೆಗಳಿಗೂ ಅನ್ವಯಿಸುತ್ತವೆ.
ಉತ್ತರ ಸೆಂಟಿನೆಲ್ ದ್ವೀಪ
ಈ ದ್ವೀಪದಲ್ಲಿ ಸೆಂಟಿನೆಲೀಸ್ ಎಂಬ ಬುಡಕಟ್ಟು ಸಮುದಾಯ ವಾಸವಾಗಿದೆ. ಈ ಸಮುದಾಯದ ಜನರು ಹೊರಗಿನ ಪ್ರಪಂಚದೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿಲ್ಲ. ಈ ಸಮುದಾಯುದ ಜೀಬನಶೈಲಿ, ಸಾಂಸ್ಕ್ರತಿಕ, ಆಚರಣೆ ರಕ್ಷಿಸಲು ಈ ನಿರ್ಬಂಧವಿದೆ. ಉತ್ತರ ಸೆಂಟಿನೆಲ್ ದ್ವೀಪ ಮತ್ತು ಅದರ ಸುತ್ತಲಿನ 5 ಕಿಲೋಮೀಟರ್ ಸಮುದ್ರ ಪ್ರದೇಶವನ್ನು ಬುಡಕಟ್ಟು ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ