Washing Powder Nirma: ನಿರ್ಮಾ ಹುಡುಗಿಗೆ ವಿರೂಪಾಕ್ಷಪ್ಪ, ಈಶ್ವರಪ್ಪ ಮುಖ ಅಂಟಿಸಿ ಅಮಿತ್‌ ಶಾಗೆ ಸ್ವಾಗತ!

Published : Mar 13, 2023, 10:48 AM IST
Washing Powder Nirma: ನಿರ್ಮಾ ಹುಡುಗಿಗೆ ವಿರೂಪಾಕ್ಷಪ್ಪ, ಈಶ್ವರಪ್ಪ ಮುಖ ಅಂಟಿಸಿ ಅಮಿತ್‌ ಶಾಗೆ ಸ್ವಾಗತ!

ಸಾರಾಂಶ

ನಿರ್ಮಾ ಹುಡುಗಿಗೆ ವಿರೂಪಾಕ್ಷಪ್ಪ, ಈಶ್ವರಪ್ಪ ಮುಖ ಅಂಟಿಸಿ ಅಮಿತ್‌ ಶಾಗೆ ಸ್ವಾಗತ ಕೋರಲಾಗಿದೆ. ತೆಲಂಗಾಣ ಸಿಎಂ ನೇತೃತ್ವದ ಬಿಆರ್‌ಎಸ್‌ ಪಕ್ಷ ಈ ಫ್ಲೆಕ್ಸ್‌ ಅಳವಡಿಸಿದ್ದು, ದಿಲ್ಲಿ ಮದ್ಯ ಹಗರಣದಲ್ಲಿ ಕವಿತಾ ವಿಚಾರಣೆಗೆ ಪಕ್ಷ ಕಿಡಿ ಕಾರಿದೆ. 

ಹೈದರಾಬಾದ್‌ (ಮಾರ್ಚ್‌ 13, 2023): ವಾಷಿಂಗ್ ಪೌಡರ್‌ ನಿರ್ಮಾ ಜಾಹೀರಾತಿನಲ್ಲಿ ಬರುವ ಹುಡುಗಿ ಹಾಗೂ ಆ ಜಾಹೀರಾತು ನಿಮಗೆಲ್ಲ ಗೊತ್ತಿರಲೇಬೇಕಲ್ವ.. ಬಹುತೇಕರು, ಈ ಜಾಹೀರಾತನ್ನು ಇನ್ನೂ ಮರೆತಿರುವುದಿಲ್ಲ. ಈಗ್ಯಾಕೆ ಆ ಜಾಹೀರಾತಿನ ವಿಚಾರ ಅಂತೀರಾ.. ತೆಲಂಗಾಣಕ್ಕೆ ಭಾನುವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮುಜುಗರ ಉಂಟುಮಾಡಬೇಕೆಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಬಿಆರ್‌ಎಸ್‌ ಪಕ್ಷ ಕರ್ನಾಟಕದ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಹಾಗೂ ಇತ್ತೀಚೆಗೆ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮುಖ ಬಳಸಿ ಫ್ಲೆಕ್ಸ್‌ ಅಳವಡಿಕೆ ಮಾಡಿದೆ.

ಪ್ರಸಿದ್ಧ ವಾಷಿಂಗ್‌ ಪೌಡರ್‌ ನಿರ್ಮಾ (Washing Powder Nirma) ಜಾಹೀರಾತಿನ (Advertisement) ಹುಡುಗಿಯ ಮುಖದ ಜಾಗದಲ್ಲಿ ಬಿಜೆಪಿಯ (BJP) ಕೆಲ ಪಕ್ಷಾಂತರಿ ಹಾಗೂ ಭ್ರಷ್ಟಾಚಾರ ಆರೋಪಿ ನಾಯಕರಾದ ಹಿಮಂತ ಬಿಸ್ವಾ ಶರ್ಮಾ (Himanta Biswa Sarma), ಜ್ಯೋತಿರಾದಿತ್ಯ ಸಿಂಧಿಯಾ, ನಾರಾಯಣ ರಾಣೆ, ಮಾಡಾಳು ವಿರೂಪಾಕ್ಷಪ್ಪ (Madal Virupakshappa), ಈಶ್ವರಪ್ಪ (Eshwarappa), ಸುವೇಂದು ಅಧಿಕಾರಿ, ಸುಜನಾ ಚೌಧರಿ ಮುಂತಾದವರ ಮುಖಗಳನ್ನು ಅಳವಡಿಸಿ ಬಿಆರ್‌ಎಸ್‌ ಪಕ್ಷ ಫ್ಲೆಕ್ಸ್‌ ಹಾಕಿದೆ. ಈ ಕುರಿತು ಟ್ವೀಟ್‌ ಮಾಡಿರುವ ಬಿಆರ್‌ಎಸ್‌ ನಾಯಕರೊಬ್ಬರು, ‘ವಾಷಿಂಗ್‌ ಪೌಡರ್‌ ನಿರ್ಮಾ! ದಿಸ್‌ ಈಸ್‌ ಕಾಲ್ಡ್‌ ಕರ್ಮಾ ಅಮಿತ್ ಶಾ (Amit Shah) ಜೀ.. ವೆಲ್ಕಮ್‌ ಟು ಹೈದರಾಬಾದ್‌ (Hyderabad)’ ಎಂದು ಬರೆದಿದ್ದಾರೆ.

ಇದನ್ನು ಓದಿ: ತೆಲಂಗಾಣ ಸಿಎಂ ಪುತ್ರಿ ಕವಿತಾ ಇಡಿ ವಿಚಾರಣೆಗೆ ವಿರೋಧ: ಮೋದಿ ‘ರಾವಣ’ ಪೋಸ್ಟರ್ ಅಂಟಿಸಿ ಪ್ರತಿಭಟನೆ

ದೆಹಲಿಯ ಮದ್ಯ ಹಗರಣದಲ್ಲಿ (Delhi Liquor Scam) ಬಿಆರ್‌ಎಸ್‌ (BRS) ಶಾಸಕಿ  ಹಾಗೂ ಸಿಎಂ ಕೆಸಿಆರ್‌ (KCR) ಅವರ ಪುತ್ರಿ ಕವಿತಾ (Kavitha) ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದಕ್ಕೆ ಪಕ್ಷ ಅಮಿತ್‌ ಶಾ ಎದುರು ಹೀಗೆ ಪ್ರತಿಭಟನೆ ವ್ಯಕ್ತಪಡಿಸಿದೆ. ಇದೇ ಮೊದಲ ಬಾರಿ ದೆಹಲಿಯಿಂದ ಹೊರಗೆ ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆಗಳ (ಸಿಐಎಸ್‌ಎಫ್‌) 54ನೇ ಸಂಸ್ಥಾಪನಾ ದಿನವನ್ನು ಭಾನುವಾರ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಅದಕ್ಕೆ ಅಮಿತ್‌ ಶಾ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ತಿರುಚಿದ ಫ್ಲೆಕ್ಸ್‌ ಅಳವಡಿಸಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಮೋದಿ ಏಕೆ ಇಷ್ಟು ಸುತ್ತಬೇಕು: ಖರ್ಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು