
ಮುಂಬೈ(ಜ.30): ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ರದ್ದಾಗಿದ್ದ ಮುಂಬೈ ಉಪನಗರ ರೈಲುಗಳ ಸಂಚಾರ ಫೆ.1ರಿಂದ ಪುನಾರಂಭವಾಗಲಿದೆ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
ಹೆಚ್ಚು ಜನದಟ್ಟಣೆ ವೇಳೆಯಾದ ಬೆಳಿಗ್ಗೆ 7 ಗಂಟೆಯವರೆಗೆ ಹಾಗೂ ಮಧ್ಯಾಹ್ನ 12ರಿಂದ 4 ಗಂಟೆಯ ವರೆಗೆ ಜನಸಾಮಾನ್ಯರು ಈ ಸ್ಥಳೀಯ ರೈಲುಗಳ ಮೂಲಕ ಸಂಚರಿಸಬಹುದಾಗಿದೆ. ರಾತ್ರಿ 9 ಗಂಟೆ ನಂತರ ರೈಲು ಸೇವೆ ರದ್ದಾಗಲಿದೆ. ಉಳಿದ ವೇಳೆಯಲ್ಲಿ ಅತ್ಯಗತ್ಯ ಸೇವೆಗಳಿಗೆ ಅಂದರೆ ಮುಂಚೂಣಿ ಕಾರ‍್ಯಕರ್ತರು, ಆರೋಗ್ಯ ಸಿಬ್ಬಂದಿ, ಮಹಿಳೆಯರು ಮಾತ್ರ ಈ ರೈಲುಗಳಲ್ಲಿ ಸಂಚರಿಸಬಹುದಾಗಿದೆ.
ಒಟ್ಟು 3141 ಸಬರ್ಬನ್ ರೈಲುಗಳ ಪೈಕಿ 2985 ರೈಲುಗಳು ಈಗಾಗಲೇ ಕಾರ‍್ಯ ನಿರ್ವಹಿಸುತ್ತಿವೆ. ಶುಕ್ರವಾರದಿಂದ ಉಳಿದ 204 ರೈಲುಗಳೂ ಸಂಚಾರ ಆರಂಭಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ