ಭಾರತದ ಬತ್ತಳಿಕೆಗೆ ಎಫ್‌-15ಇಎಕ್ಸ್‌?: ಯುದ್ಧ ವಿಮಾನ ನೀಡಲು ಅಮೆರಿಕ ಅಸ್ತು!

Published : Jan 30, 2021, 07:41 AM ISTUpdated : Jan 30, 2021, 07:45 AM IST
ಭಾರತದ ಬತ್ತಳಿಕೆಗೆ ಎಫ್‌-15ಇಎಕ್ಸ್‌?: ಯುದ್ಧ ವಿಮಾನ ನೀಡಲು ಅಮೆರಿಕ ಅಸ್ತು!

ಸಾರಾಂಶ

ಭಾರತದ ಬತ್ತಳಿಕೆಗೆ ಎಫ್‌-15ಎಕ್ಸ್‌?| ಯುದ್ಧ ವಿಮಾನ ಭಾರತಕ್ಕೆ ನೀಡಲು ಅಮೆರಿಕ ಅಸ್ತು| ಬೋಯಿಂಗ್‌ ಕಂಪನಿಗೆ ಅನುಮತಿ ನೀಡಿದ ಬೈಡೆನ್‌| ಚೀನಾ ಸಂಘರ್ಷದ ಸಂದರ್ಭದಲ್ಲೇ ಭಾರತಕ್ಕೆ ಬಲ| ಬೆಂಗಳೂರು ಏರ್‌ ಶೋದಲ್ಲಿ ಎಫ್‌-15 ಎಕ್ಸ್‌ ಪ್ರದರ್ಶನ

ನ್ಯೂಯಾರ್ಕ್(ಜ.30): ಭಾರತ ಹಾಗೂ ಚೀನಾ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ಮುಂದುವರಿದಿರುವಾಗಲೇ, ಭಾರತೀಯ ವಾಯುಪಡೆಗೆ ಎಫ್‌-15ಎಕ್ಸ್‌ ಮಲ್ಟಿರೋಲ್‌ ಯುದ್ಧ ವಿಮಾನಗಳನ್ನು ನೀಡಲು ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ರಫೇಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಿರುವ ಭಾರತಕ್ಕೆ ಇದೀಗ ಎಫ್‌-15ಎಕ್ಸ್‌ ಯುದ್ಧ ವಿಮಾನಗಳೂ ಲಭಿಸಿದರೆ ಚೀನಾ ವಿರುದ್ಧ ಕೈ ಮತ್ತಷ್ಟುಮೇಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಫ್‌-15ಎಕ್ಸ್‌ ಮಲ್ಟಿರೋಲ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ನೀಡಲು ಅಮೆರಿಕ ಸರ್ಕಾರದಿಂದ ಅನುಮತಿ ಲಭಿಸಿದೆ ಎಂದು ಬೋಯಿಂಗ್‌ ಕಂಪನಿಯ ಯುದ್ಧ ವಿಮಾನ ಮಾರಾಟ ವಿಭಾಗದ ಮುಖ್ಯಸ್ಥ ಅಂಕುರ್‌ ಕಣಗಲೇಕರ್‌ ಅವರು ತಿಳಿಸಿದ್ದಾರೆ.

ಎಫ್‌-15ಎಕ್ಸ್‌ ವಿಮಾನವನ್ನು ಫೆಬ್ರವರಿ ಮೊದಲ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಏರ್‌ ಶೋ ವೇಳೆ ಪ್ರದರ್ಶನಕ್ಕೆ ಇಡುವುದಾಗಿ ಬೋಯಿಂಗ್‌ ಕಂಪನಿ ಪ್ರಕಟಿಸಿದೆ.

ಈ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ತನ್ನ ಅಭ್ಯಂತರವಿಲ್ಲ ಎಂದು ಅಮೆರಿಕ ಸರ್ಕಾರ ಬೋಯಿಂಗ್‌ ಕಂಪನಿಗೆ ತಿಳಿಸಿದೆ. ಹೀಗಾಗಿ ಭಾರತದ ಟೆಂಡರ್‌ಗೆ ಬೋಯಿಂಗ್‌ ಬಿಡ್‌ ಮಾಡಲು ಅಡ್ಡಿಯಿಲ್ಲ. ಆದರೆ ಇದನ್ನು ಖರೀದಿಸುವುದು, ಬಿಡುವುದು ಭಾರತದ ನಿರ್ಧಾರವಾಗಿರಲಿದೆ.

ಯಾವುದು ಈ ವಿಮಾನ?:

ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವ, ಬಹುಪಾತ್ರಗಳನ್ನು ನಿರ್ವಹಿಸುವ ವಿಮಾನಗಳು ಇವು. ಭಾರಿ ಗಾತ್ರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದು, ಅತ್ಯುತ್ತಮ ಫಲಿತಾಂಶ ನೀಡಬಲ್ಲವು. ಅಮೆರಿಕದ ಬಳಿ 4 ದಶಕಗಳಿಂದ ಎಫ್‌-15 ಯುದ್ಧ ವಿಮಾನವಿದೆ. ಅದರ ಅತ್ಯಂತ ಸುಧಾರಿತ, ಸರ್ವಋುತು, ಹಗಲು-ರಾತ್ರಿ ಕಾರ್ಯಾಚರಣೆ ನಡೆಸುವ ವಿಮಾನವೇ ಎಫ್‌-15 ಎಕ್ಸ್‌.

114 ಸಮರ ವಿಮಾನಗಳನ್ನು 1.3 ಲಕ್ಷ ಕೋಟಿ ರು. ವೆಚ್ಚದಲ್ಲಿ ಖರೀದಿಸಲು 2019ರ ಏಪ್ರಿಲ್‌ನಲ್ಲಿ ಭಾರತೀಯ ವಾಯುಪಡೆ ಮಾಹಿತಿ ಕೋರಿಕೆ ಅಥವಾ ಆರಂಭಿಕ ಟೆಂಡರ್‌ ಆಹ್ವಾನಿಸಿತ್ತು. ಇದನ್ನು ವಿಶ್ವದ ಅತಿದೊಡ್ಡ ಮಿಲಿಟರಿ ಖರೀದಿ ಪ್ರಕ್ರಿಯೆ ಎಂದು ಬಣ್ಣಿಸಲಾಗಿತ್ತು. ಈ ಒಪ್ಪಂದ ಹಿಡಿಯಲು ಅಮೆರಿಕದ ಎಫ್‌-16, ಫ್ರಾನ್ಸ್‌ನ ರಫೇಲ್‌, ಯುರೋಫೈಟರ್‌ ಟೈಫäನ್‌, ರಷ್ಯಾದ ಮಿಗ್‌ 35, ಸಾಬ್‌ನ ಗ್ರಿಪೆನ್‌ ಕಂಪನಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ