
ಜಮ್ಮು-ಕಾಶ್ಮೀರ(ಜ.30): ಕೊರೋನಾ ಹೆಮ್ಮಾರಿಯಿಂದಾಗಿ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಪ್ರವಾಸೋದ್ಯಮ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ರೆಸಾರ್ಟ್‌ವೊಂದು ದೇಶದ ಮೊಟ್ಟಮೊದಲ ಮಂಜಿನ ಕೆಫೆ (ಇಗ್ಲೋ ಕೆಫೆ)ಯನ್ನು ತೆರೆದಿದೆ.
ಇದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. 15 ಅಡಿ ಎತ್ತರ, 26 ಅಡಿ ಅಗಲ ಇರುವ ಈ ಇಗ್ಲೋ ಕೆಫೆ ಸಂಪೂರ್ಣವಾಗಿ ಹಿಮಗಡ್ಡೆಯಿಂದಲೇ ನಿರ್ಮಾಣವಾಗಿದ್ದು, ಕೂರುವ ಟೇಬಲ್‌ಗಳನ್ನೂ ಮಂಜಿನಿಂದಲೇ ನಿರ್ಮಿಸಲಾಗಿದೆ. ಪುಟ್ಟ ಗುಡಿಸಲಿನಂತಿರುವ ಕೆಫೆಯಲ್ಲಿ ನಾಲ್ಕು ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಗರಿಷ್ಠ 16 ಜನರು ಒಟ್ಟಿಗೆ ಕೂರಬಹುದಾಗಿದೆ.
ಚುಮುಚಮು ಚಳಿಯಲ್ಲಿ ಕೆಫೆಗೆ ಬರುವ ಗ್ರಾಹಕರಿಕೆ ಬಿಸಿ ಬಿಸಿ ಆಹಾರ ನೀಡಿ ಆಕರ್ಷಿಕಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಧಾವಿಸುತ್ತಿರುವ ಪ್ರವಾಸಿಗರು ವಿಭಿನ್ನ ಕೆಫೆ ಕಂಡು ಖುಷಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ