ಒಡಿಶಾ ರೈಲು ದುರಂತ ಬೆನ್ನಲ್ಲೇ ಆಂಧ್ರದಲ್ಲಿ ಭೀಕರ ಟ್ರೈನ್ ಅಪಘಾತ, 6 ಪ್ರಯಾಣಿಕರ ಸಾವು!

Published : Oct 29, 2023, 09:02 PM ISTUpdated : Oct 29, 2023, 10:19 PM IST
ಒಡಿಶಾ ರೈಲು ದುರಂತ ಬೆನ್ನಲ್ಲೇ ಆಂಧ್ರದಲ್ಲಿ ಭೀಕರ ಟ್ರೈನ್ ಅಪಘಾತ, 6 ಪ್ರಯಾಣಿಕರ ಸಾವು!

ಸಾರಾಂಶ

ಒಡಿಶಾದಲ್ಲಿ ನಡೆದ ರೈಲು ದುರಂದ ನೋವಿನ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್ ರೈಲು ಹಾಗೂ ಸ್ಪೆಷನರಿ ಪ್ಯಾಸೆಂಜರ್ ರೈಲು ನಡುವೆ ಅಪಘಾತ ಸಂಭಿವಿಸಿದೆ. ಮೂರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಗಳು ಚುರುಕುಗೊಂಡಿದೆ.

ವಿಶಾಖಪಟ್ಟಣಂ(ಅ.29) ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಬರೋಬ್ಬರಿ 280 ಮಂದಿ ಮೃತಪಟ್ಟಿದ್ದರು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಆಂಧ್ರ ಪ್ರದೇಶದಲ್ಲಿ ರೈಲು ಅಪಘಾತ ಸಂಭಿಸಿದೆ. ಎಕ್ಸ್‌ಪ್ರೆಸ ರೈಲು ಹಾಗೂ ಸ್ಟೇಷನರಿ ಪ್ಯಾಸೆಂಜರ್ ರೈಲಿನ ನಡುವೆ ಅಪಘಾತ ಸಂಭವಿಸಿದೆ. 6 ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ವೈಝಾಗ್‌ನಿಂದ ರಾಯಗಡಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು, ಎದುರು ದಿಕ್ಕಿನಿಂದ ಬರುತ್ತಿದ್ದ ಪಾಲ್ಸಾ ಎಕ್ಸ್‌ಪ್ರೆಸ್ ರೈಲಿನ ನಡುವೆ ಅಪಘಾತ ಸಂಭವಿಸಿದೆ.

ರೈಲು ಡಿಕ್ಕಿಯಾದ ರಭಸಕ್ಕೆ ಹಲವು ಬೋಗಿಗಳು ಹಳಿ ತಪ್ಪಿದೆ. ಪೊಲೀಸರು, ರಕ್ಷಣಾ ಪಡೆ ಹಾಗೂ ಸ್ಥಳೀಯರು ರೈಲಿನಡಿ ಸಿಲುಕಿದ ಪ್ರಯಾಣಿಕರನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. 

ಬೆಂಗಳೂರು: ಮೆಜೆಸ್ಟಿಕ್‌-ಏರ್‌ಪೋರ್ಟ್‌ ರೈಲು ಮಾರ್ಗ ನೆನೆಗುದಿಗೆ

ಕಂತಕಪಲ್ಲೆ ಬಳಿ ನಡೆದ ಭೀಕರ ರೈಲು ಅಪಘಾತದ ಬೆನ್ನಲ್ಲೇ ಭಾರತೀಯ ರೈಲ್ವೇ ಸಚಿವಾಲಯ ಸಹಾಯವಾಣಿ ತೆರೆದಿದೆ. ಮಾಹಿತಿ ಹಾಗೂ ನೆರವಿಗಾಗಿ ಕರೆ ಮಾಡು ದೂರವಾಣಿ ಸಂಖ್ಯೆ ನೀಡಿದೆ.
ಸಹಾಯವಾಣಿ ಸಂಖ್ಯೆ:
0891- 2885911
0891- 2885912
0891- 2885913
0891- 2885914

ಬಿಎಸ್‌ಎನ್‌ಎಲ್ ದೂರವಾಣಿ ಸಂಖ್ಯೆ-
08942286245
08942286213

ಘಟನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಅಶ್ವಿನ್ ಕುಮಾರ್ ಜೊತೆ ಮಾತನಾಡಿದ್ದಾರೆ.ಅಲಮಂಡ ಹಾಗೂ ಕಂತಕಪಲ್ಲೆ ನಡುವೆ ಸಂಭವಿಸಿದ ರೈಲು ಅಪಘಾತ ದುರದೃಷ್ಟಕರ. ಅಧಿಕಾರಿಗಳು ಸ್ಥಳದಲ್ಲಿದ್ದು ಎಲ್ಲಾ ನೆರವು ನೀಡಲಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮೋದಿ, ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವೇಳೆ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು
ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ