ಮರುನಾಮಕರಣ ಚರ್ಚೆ ನಡುವೆ ಗೂಗಲ್ ಮ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಜೊತೆ ಭಾರತ ಹೆಸರು!

Published : Oct 29, 2023, 07:37 PM ISTUpdated : Oct 31, 2023, 01:57 PM IST
ಮರುನಾಮಕರಣ ಚರ್ಚೆ ನಡುವೆ ಗೂಗಲ್ ಮ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಜೊತೆ ಭಾರತ ಹೆಸರು!

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ ಇಂಡಿಯಾ ಬದಲು ಭಾರತ ಹೆಸರನ್ನು ಎಲ್ಲೆಡೆ ಬಳಸುತ್ತಿದೆ. ಜಿ20 ಶೃಂಗಸಭೆಯಲ್ಲಿ ಈ ಹೆಸರು ಬಳಕೆಗೆ ಪರ ವಿರೋಧ ವ್ಯಕ್ತವಾಗಿತ್ತು. ಈ ಚರ್ಚೆ ನಡುವೆ ಇದೀಗ ಗೂಗಲ್ ಮ್ಯಾಪ್‌ನಲ್ಲಿ ಭಾರತ್ ಹೆಸರು ಉಲ್ಲೇಖಿಸಲಾಗಿದೆ. ಜೊತೆಗೆ ತ್ರಿವರ್ಣ ಧ್ವಜ ಕೂಡ ಸೇರಿಸಲಾಗಿದೆ. 

ನವದೆಹಲಿ(ಅ.29) ಕೇಂದ್ರ ಬಿಜೆಪಿ ಸರ್ಕಾರ ಸಿಕ್ಕ ಅವಕಾಶಗಳಲ್ಲಿ ಭಾರತ ಹೆಸರನ್ನು ಬಳಕೆ ಮಾಡುತ್ತಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಜಿ20 ಶೃಂಗಸಭೆಯಲ್ಲಿ ಪ್ರಸೆಡೆಂಟ್ ಆಫ್ ಭಾರತ್, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಡಿಯಾ ಬದಲು ಭಾರತ ಅನ್ನೋ ಹೆಸರನ್ನು ಬಳಕೆ ಅದಿಕೃತಗೊಳಿಸಿತು. ಇಂಡಿಯಾ ಹಾಗೂ ಭಾರತ ಹೆಸರಿನ ಕುರಿತು ಚರ್ಚೆಗಳು ತೀವ್ರವಾಗಿ ನಡೆದಿದೆ. ಪರವಾಗಿ ಪ್ರಚಾರ, ಅಪಸ್ವರಗಳು ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್ ಮ್ಯಾಪ್ ಇದೀಗ ಭಾರತ ಹೆಸರನ್ನು ಉಲ್ಲೇಖಿಸಿದೆ. ಗೂಗಲ್ ಮ್ಯಾಪ್‌ನಲ್ಲಿ ಭಾರತ ಎಂದು ಸರ್ಚ್ ಮಾಡಿದರೆ ತ್ರಿವರ್ಣ ಧ್ವಜ ಸೇರಿ ಭಾರತ ಮ್ಯಾಪ್ ತೋರಿಸಲಿದೆ.

ಇಷ್ಟು ದಿನ ಇಂಡಿಯಾ ಎಂದು ಸರ್ಚ್ ಮಾಡಿದರೆ ಮಾತ್ರ ಭಾರತದ ಮ್ಯಾಪನ್ನು ತೋರಿಸುತ್ತಿತ್ತು. ಆದರೆ ಇದೀಗ ಕನ್ನಡದಲ್ಲಿ ಭಾರತ ಅಥವಾ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳಲ್ಲಿ ಸರ್ಚ್ ಮಾಡಿದರೆ ಭಾರತದ ಮ್ಯಾಪನ್ನು ಗೂಗಲ್ ತೋರಿಸುತ್ತದೆ. ವಿಶೇಷ ಅಂದರೆ ಭಾರತ ಹೆಸರಿನ ಜೊತೆಗೆ ತ್ರಿವರ್ಣ ಧ್ವಜವೂ ಪ್ರದರ್ಶಿಸುತ್ತದೆ.

ಭಾರತ ಅಥವಾ ಇಂಡಿಯಾ ಚರ್ಚೆ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ಬಾಯ್ಬಿಟ್ಟು ಹೇಳಿದ್ದೇನು?

ಇಂಡಿಯಾ’ ಹೆಸರು ಅಳಿಸಿಹಾಕಿ ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಮಾಡುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಯತ್ನವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಶ್ನಿಸಿದ್ದರು. ಸಂವಿಧಾನವು ವಾಸ್ತವವಾಗಿ ಇಂಡಿಯಾ ಹಾಗೂ ಎರಡೂ ಹೆಸರುಗಳನ್ನು ಬಳಸುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿವೆ’ ಎಂದರು. ‘ಆದರೆ, ನಾವು ನಮ್ಮ ವಿಪಕ್ಷ ಒಕ್ಕೂಟಕ್ಕೆ ಭಾರತ ಎಂದು ಹೆಸರಿಸಿದ್ದರಿಂದ ಸರ್ಕಾರ ಸ್ವಲ್ಪ ಕೆರಳಿಸಿದಂತಿದೆ ಮತ್ತು ಅದು ಅವರೆಲ್ಲರಿಗೂ ಇದರಿಂದ ತಲೆಬಿಸಿ ಆಗಿರಬಹುದು. ಹೀಗಾಗಿ ಕೇಂದ್ರ ಸರ್ಕಾರವು ಹೆಸರನ್ನು ಬದಲಾಯಿಸಲು ನಿರ್ಧರಿಸಿದಂತಿದೆ’ ಎಂದು ಹೇಳಿದರು.

ಇದೀಗ ಕರ್ನಾಟಕದಲ್ಲೂ ಹೆಸರು ಬದಲಾವಣೆ ಚರ್ಚೆ ನಡೆಯುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವುದರಿಂದ ಆರಂಭಗೊಂಡ ಚರ್ಚೆ ಇದೀಗ ಕರ್ನಾಟಕ ಹೆಸರನ್ನು ಬಸವಣ್ಣನ ನಾಡು ಎಂದು ಮರುನಾಮಕರಣ ಮಾಡಬೇಕು ಅನ್ನೋ ಚರ್ಚೆಗಳು ನಡೆಯುತ್ತಿದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ಚರ್ಚೆ ಶುರುವಾಗಿದೆ. 

ಇಂಡಿಯಾ-ಭಾರತ್‌ ಹೆಸರಿನ ಗದ್ದಲದ ನಡುವೆ, ಕಂಪನಿಯ ಹೆಸರನ್ನು ಭಾರತ್‌ಡಾರ್ಟ್‌ ಎಂದು ಬದಲಿಸಿದ ಬ್ಲ್ಯೂಡಾರ್ಟ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ