ಕೇರಳದ ಕ್ರಿಶ್ಚಿಯನ್ ಯಹೋವನ ಸಮುದಾಯದ ಧಾರ್ಮಿಕ ಕಾರ್ಯಕ್ರಮದ ಮೇಲೆ ನಡೆದ ಬಾಂಬ್ ಸ್ಫೋಟದ ತನಿಖೆಗೆ ಆ್ಯಂಟಿ ಟೆರರ್ ತಂಡಗಳು ಆಗಮಿಸಿದೆ. ಇದರ ನಡುವೆ ತಾನೇ ಬಾಂಬ್ ಇಟ್ಟು ಸ್ಫೋಟಿಸಿದ್ದೇನೆ ಎಂದು ಶಂಕಿತ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.
ಎರ್ನಾಕುಲಂ(ಅ.29) ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ವಿರೋಧಿ ಕೇರಳದಲ್ಲಿ ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ ಖುದ್ದು ಹಮಾಸ್ ಉಗ್ರ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದ್ದ. ಹಮಾಸ್ ಉಗ್ರನ ಹಿಂದುತ್ವ, ಯಹೂದಿಗಳ ವಿರುದ್ಧ ದ್ವೇಷ ಭಾಷಣದ ಬೆನ್ನಲ್ಲೇ ಕೇರಳದಲ್ಲಿ ಬಾಂಬ್ ಸ್ಫೋಟ ಸಂಭವಸಿದೆ. ಕ್ರಿಶ್ಚಿಯನ್ ಉಪಪಂಗಡ ಎಂದೇ ಕರೆಸಿಕೊಳ್ಳುವ ಯಹೋವನ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಐಇಡಿ ಬಾಂಬ್ ಬ್ಲಾಸ್ಟ್ ಆಗಿದೆ. ಈ ಸ್ಫೋಟದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಕೇಂದ್ರದ ಭಯೋತ್ಪದಾನ ವಿರೋಧಿ ತಂಡ ತನಿಖೆಗೆ ಕೇರಳಕ್ಕೆ ತೆರಲಿದೆ. ಇದರ ಬೆನ್ನಲ್ಲೇ ಶಂಕಿತ ವ್ಯಕ್ತಿಯೊಬ್ಬ ತಾನೇ ಬಾಂಬ್ ಸ್ಪೋಟಿಸಿರುವುದಾಗಿ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ. ಈ ಶಂಕಿತ ವ್ಯಕ್ತಿಯ ಹೆಸರು ಡೋಮ್ನಿಕ್ ಮಾರ್ಟಿನ್.
ಪೊಲೀಸರಿಗೆ ಶರಣಾಗುವುದಕ್ಕಿಂತ ಮೊದಲು ಫೇಸ್‌ಬುಕ್ ಮೂಲಕ ಲೈವ್ ಮಾಡಿದ್ದ ಈ ಶಂಕಿತ ಮಾರ್ಟಿನ್ ಸ್ಫೋಟಕ್ಕೆ ಬಳಸಿರುವ ವಸ್ತುಗಳನ್ನು ಬಹಿರಂಗಪಡಿಸುವುದಿಲ್ಲ. ಇದು ಅಪಾಯಕಾರಿ ಎಂದು ಬೊಗಳೇ ಬಿಟ್ಟಿದ್ದಾನೆ. ಆದರೆ ಪ್ರಕರಣಕ್ಕೆ ಟ್ವಿಸ್ಟ್ ನೀಡಲು ಶಂಕಿತ ವ್ಯಕ್ತಿಯೊಬ್ಬ ಹೊಣೆ ಹೊತ್ತಿರುವ ಸಾಧ್ಯತೆಯನ್ನು ತನಿಖಾ ತಂಡಗಳು ವ್ಯಕ್ತಪಡಿಸಿದೆ.
ಬಾಂಬ್ ಸ್ಫೋಟದಿಂದ ಅಲ್ಲ, ಬೆಂಕಿಯಿಂದ ಮಹಿಳೆ ಸಾವು: ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿತಾ ಕೇರಳ?
ಶಂಕಿತ ವ್ಯಕ್ತಿ ಯಾವುದೇ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಕುರಿತು ತನಿಖೆ ನಡೆಯುತ್ತಿದೆ. ಡೊಮ್ನಿಕ್ ಮಾರ್ಟಿನ್ ಕೊಚ್ಚಿ ಮೂಲದವನಾಗಿದ್ದು, ತನಿಖೆ ತೀವ್ರಗೊಂಡಿದೆ. ಶಂಕಿತ ವ್ಯಕ್ತಿ ಶರಣವಾಗಿರುವ ಕುರಿತು ಕೇರಳ ಎಡಿಜಿಪಿ ಅಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಸ್ಫೋಟಕ್ಕೆ ಬಳಸಿರುವ ನೀಲಿ ಕಾರು ಮಹಿಳೆಯೊಬ್ಬರ ಹೆಸರಿನಡಿ ರಿಜಿಸ್ಟ್ರೇಶನ್ ಆಗಿರುವ ಮಾಹಿತಿಯನ್ನು ಪೊಲೀಸರುು ಕಲೆ ಹಾಕಿದ್ದಾರೆ.
ಪ್ರಕರಣದ ದಿಕ್ಕು ತಪ್ಪಿಸಲು ಇದೀಗ ಉಗ್ರರು ತಿರುವು ನೀಡಲು ಯತ್ನಿಸುತ್ತಿರುವ ಕುರಿತು ಕೇಂದ್ರ ತನಿಖಾ ತಂಡಗಳು ಅನುಮಾನ ವ್ಯಕ್ತಪಡಿಸಿದೆ. ಇತ್ತ ವ್ಯಕ್ತಿಯೊಬ್ಬನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದು ಅಲೆದಾಡುತ್ತಿರುವ ಅನುಮಾನದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಸರಣಿ ಸ್ಫೋಟಕ್ಕೆ ಪ್ಲಾನ್ ಮಾಡಿರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಹೇಳಿವೆ.