TRAI ಹೊಸ ನಿಯಮ ಜಾರಿ: 30 ಕೋಟಿ ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್! ಇನ್ಮುಂದೆ ಇಂಟರ್‌ನೆಟ್ ಡೇಟಾ ಇಲ್ಲದಿದ್ರೂ ಸಿಗುತ್ತೆ ಈ ಸೌಲಭ್ಯ!

Published : Sep 23, 2026, 11:01 AM IST
TRAI new telecom recharge rules

ಸಾರಾಂಶ

TRAI New Rules: ಟ್ರಾಯ್ (TRAI) ಹೊಸ ನಿಯಮದ ಪ್ರಕಾರ, ಟೆಲಿಕಾಂ ಕಂಪನಿಗಳು ಇಂಟರ್‌ನೆಟ್ ಡೇಟಾ ಇಲ್ಲದ ಕೇವಲ ಕರೆ ಮತ್ತು SMS ಸೌಲಭ್ಯದ ಕಡಿಮೆ ದರದ ರೀಚಾರ್ಜ್ ಪ್ಯಾಕ್‌ಗಳನ್ನು ನೀಡುವುದು ಕಡ್ಡಾಯವಾಗಿದೆ. ಇದರಿಂದ ಭಾರತದ 30 ಕೋಟಿ ಮೂಲ ಮೊಬೈಲ್ ಬಳಕೆದಾರರಿಗೆ ಪ್ರಯೋಜನ ಸಿಗಲಿದೆ.

ಭಾರತದಲ್ಲಿ ಪ್ರತಿಯೊಬ್ಬರ ಬಳಿಯು ಮೊಬೈಲ್‌ಗಳಿವೆ. ಮೊಬೈಲ್ ಇಲ್ಲದ ಮನೆಯೇ ಇಲ್ಲ ಎನ್ನಬಹುದು. ಇದೀಗ ಮೊಬೈಲ್ ಬಳಕೆದಾರರಿಗೆ ಒಂದು ಶುಭಸುದ್ದಿ ಬಂದಿದೆ. ಇಷ್ಟು ದಿನ ಕೇವಲ ಮೆಸೇಜ್ ಮಾತ್ರ ಇತ್ತು. ಆದರೆ ಇನ್ಮುಂದೆ ಇಂಟರ್‌ನೆಟ್ ಡೇಟಾ ಇಲ್ಲದೆಯೂ SMS ಪ್ಯಾಕ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಭಾರತದಲ್ಲಿ ಮೂವತ್ತು ಕೋಟಿ ಮೂಲ ಮೊಬೈಲ್ ಬಳಕೆದಾರರಿಗೆ ಸಿಗಲಿದೆ ಹೇಗೆ ಪಡೆಯುವುದು, ಸೌಲಭ್ಯಗಳೇನು ಎಂಬುದನ್ನ ಇಲ್ಲಿ ತಿಳಿಯೋಣ.

ಭಾರತದ 30 ಕೋಟಿ ಮೂಲ ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್

ಭಾರತದಲ್ಲಿರುವ ಸುಮಾರು 30 ಕೋಟಿ ಮೊಬೈಲ್ ಬಳಕೆದಾರರಿಗೆ ವಿಶೇಷವಾಗಿ ಫೀಚರ್‌ಫೋನ್ ಬಳಸುವವರು ಹಾಗೂ ಮೊಬೈಲ್ ಡೇಟಾ ಬಳಸಲಾಗದ, ಆದಾಯ ಕಡಿಮೆ ಇರುವ ವರ್ಗದವರಿಗೆ ಶೀಘ್ರದಲ್ಲೇ ದೊಡ್ಡ ಪರಿಹಾರ ಸಿಗಲಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) 2026ರ ಟೆಲಿಕಾಂ ಗ್ರಾಹಕ ಸಂರಕ್ಷಣಾ (13ನೇ ತಿದ್ದುಪಡಿ) ನಿಯಮಾವಳಿಗಳನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಈ ಹೊಸ ನಿಯಮದ ಪ್ರಕಾರ, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಸೇರಿದಂತೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕೇವಲ ಕರೆ ಮತ್ತು SMS ಸೌಲಭ್ಯ ಹೊಂದಿರುವ ಪ್ರತ್ಯೇಕ ಹಾಗೂ ಕಡಿಮೆ ದರದ ರೀಚಾರ್ಜ್ ಪ್ಯಾಕ್‌ಗಳನ್ನು ನೀಡುವುದು ಕಡ್ಡಾಯವಾಗಲಿದೆ. ಇದರಿಂದ ಅಗತ್ಯವಿಲ್ಲದ ಇಂಟರ್‌ನೆಟ್ ಡೇಟಾಗೆ ಗ್ರಾಹಕರು ಹಣ ಪಾವತಿಸುವ ಪರಿಸ್ಥಿತಿ ತಪ್ಪಲಿದೆ.

TRAI ಹೊಸ ನಿಯಮಗಳೇನು?

ಕರೆ, SMS ಜೊತೆಗೆ ಡೇಟಾ ಸೇರಿ ಪ್ರತಿ ಕಾಂಬೋ ಪ್ಲ್ಯಾನ್‌ಗೆ ಅನುಗುಣವಾಗಿ ಡೇಟಾ ಇಲ್ಲದ ವಾಯ್ಸ್ ಮತ್ತು SMS ಪ್ಯಾಕ್ ಅನ್ನು ಕಡಿಮೆ ದರದಲ್ಲಿ ನೀಡಬೇಕು.

30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಎಲ್ಲ ವ್ಯಾಲಿಡಿಟಿಗಳಿಗೂ ಡೇಟಾ ಇಲ್ಲದ ವಾಯ್ಸ್-ಎಸ್‌ಎಂಎಸ್ ಪ್ಯಾಕ್‌ಗಳನ್ನು ಟೆಲಿಕಾಂ ಕಂಪನಿಗಳು ನೀಡಬೇಕು. ಈ ಹಿಂದೆ ಬಹುತೇಕ ಡೇಟಾ-ಮುಕ್ತ ಪ್ಯಾಕ್‌ಗಳು 84 ಅಥವಾ 365 ದಿನಗಳಂತಹ ದೀರ್ಘಾವಧಿಯ ವ್ಯಾಲಿಡಿಟಿಗೆ ಮಾತ್ರ ಸೀಮಿತವಾಗಿದ್ದವು.

ಪ್ರತಿ ತಿಂಗಳು ಒಂದೇ ದಿನಾಂಕದಂದು ಅಪ್ಡೇಟ್ ಮಾಡುವಂತಹ ಕನಿಷ್ಠ ಒಂದು ವಾಯ್ಸ್ ಮತ್ತು SMS ವೋಚರ್ ಅನ್ನು ಕಂಪನಿಗಳು ನೀಡಬೇಕು. ಇದರಿಂದ ಡೇಟಾ ಬಳಸದ ಗ್ರಾಹಕರಿಗೆ 28 ದಿನಗಳ ದೊಡ್ಡ ದೊಡ್ಡ ಮೊತ್ತದ ಹಣ ಖರ್ಚು ಮಾಡುವುದು ತಪ್ಪಲಿದೆ., ಉದಾಹರಣೆಗೆ, ನಿರ್ದಿಷ್ಟ ದಿನಾಂಕವೊಂದು ಆ ತಿಂಗಳಲ್ಲಿ ಇಲ್ಲದಿದ್ದರೆ ಫೆಬ್ರವರಿ 30ರಂತಹ ದಿನಾಂಕವಾಗಿದ್ದರೆ ಆ ತಿಂಗಳ ಕೊನೆಯ ದಿನ ಪ್ಯಾಕ್ ನವೀಕರಣವಾಗಲಿದೆ.

ಟ್ಯಾರಿಫ್ ಲಾಕ್-ಇನ್‌ಗೆ ಕಡಿವಾಣ: ಇತ್ತೀಚಿನ ಮೊಬೈಲ್ ದರ ಏರಿಕೆ ಹಾಗೂ 2G ಫೀಚರ್‌ಫೋನ್ ಬಳಕೆದಾರರನ್ನು ದುಬಾರಿ 4G/5G ಡೇಟಾ ಪ್ಯಾಕ್‌ಗಳತ್ತ ಕರೆದೊಯ್ಯುವ ಟೆಲಿಕಾಂ ಕಂಪನಿಗಳ ತಂತ್ರಗಳಿಗೆ ಈ ನಿರ್ಧಾರ ಕಡಿವಾಣ ಹಾಕಲಿದೆ.

ಈ ನಿಯಮದಿಂದ ಹಿರಿಯ ನಾಗರಿಕರು, ಗ್ರಾಮೀಣ ಭಾಗದ ಗ್ರಾಹಕರು ಹಾಗೂ ಕಡಿಮೆ ವೆಚ್ಚದಲ್ಲಿ ಎರಡನೇ ಸಿಮ್ ಬಳಸುವವರಿಗೆ ಮೊಬೈಲ್ ಸಂಪರ್ಕವನ್ನು ಸಕ್ರಿಯವಾಗಿಟ್ಟುಕೊಳ್ಳುವುದು ಸುಲಭವಾಗಲಿದೆ.

ಶೀಘ್ರದಲ್ಲೇ ಮೊಬೈಲ್ ಬಳಕೆದಾರರು ತಮ್ಮ ಟೆಲಿಕಾಂ ಕಂಪನಿಗಳ ಮೊಬೈಲ್ ಆ್ಯಪ್‌ಗಳು ಅಥವಾ ಅಧಿಕೃತ ವೆಬ್‌ಸೈಟ್‌ಗಳಲ್ಲಿ ‘ವಾಯ್ಸ್-ಓನ್ಲಿ’ ಅಥವಾ ‘ವಿತೌಟ್ ಡೇಟಾ’ ಪ್ಯಾಕ್‌ಗಳನ್ನು ಹುಡುಕಿ ಆಯ್ಕೆ ಮಾಡಬಹುದು.

ಈ ನಿಯಮ ಜಾರಿಗೆ ತರಲು ಕಾರಣವೇನು?

2024ರ ಹಿಂದಿನ ನಿಯಮದ ಪ್ರಕಾರ ಟೆಲಿಕಾಂ ಕಂಪನಿಗಳು ಕನಿಷ್ಠ ಒಂದು ವಾಯ್ಸ್-ಓನ್ಲಿ ಪ್ಲ್ಯಾನ್ ನೀಡಬೇಕಿತ್ತು. ಆದರೆ ಕಂಪನಿಗಳು ಡೇಟಾ ಇಲ್ಲದ ಪ್ಯಾಕ್‌ಗಳನ್ನು 84 ದಿನ ಅಥವಾ 365 ದಿನಗಳಂತಹ ದುಬಾರಿ ದೀರ್ಘಾವಧಿಯ ಪ್ಯಾಕ್‌ಗಳಿಗೆ ಮಾತ್ರ ಸೀಮಿತಗೊಳಿಸಿದ್ದವು. ಇದರಿಂದ ಕಡಿಮೆ ಆದಾಯದ ಜನರಿಗೆ ಅಷ್ಟೊಂದು ಹಣ ಒಂದೇ ಸಲಕ್ಕೆ ಕೊಡುವುದು ಕಷ್ಟವಾಗಿತ್ತು. ಇದರ ಪರಿಣಾಮವಾಗಿ, ಕೇವಲ 28 ದಿನಗಳ ವ್ಯಾಲಿಡಿಟಿ ಪಡೆಯಲು ಕೂಡ ಡೇಟಾ ಒಳಗೊಂಡಿರುವ ಪ್ಯಾಕ್‌ಗಳನ್ನು ಖರೀದಿಸುವ ಅನಿವಾರ್ಯತೆ ಎದುರಾಗಿತ್ತು.

ಭಾರತದಲ್ಲಿ ಲಕ್ಷಾಂತರ ಜನರು ಬ್ಯಾಂಕ್‌ಗಳ ಅಲರ್ಟ್‌ಗಳು, SMS ಸಂದೇಶಗಳು ಅಥವಾ ಅಗತ್ಯ ಸರ್ಕಾರಿ OTPಗಳನ್ನು ಸ್ವೀಕರಿಸಲು ಎರಡನೇ ಸಿಮ್ ಕಾರ್ಡ್ ಬಳಸುತ್ತಾರೆ. ಇಂತಹ ಎರಡನೇ ನಂಬರ್‌ಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು, ಬಳಸದ ಇಂಟರ್‌ನೆಟ್ ಡೇಟಾಗೂ ಹಣ ಪಾವತಿಸಬೇಕಾಗುತ್ತಿತ್ತು.

ವಿಶೇಷವಾಗಿ ಗ್ರಾಮೀಣ ಭಾಗದ ಜನರು ಹಿರಿಯ ನಾಗರಿಕರು ಹಾಗೂ ಹಳೆಯ ಫೀಚರ್‌ಫೋನ್ ಬಳಸುವವರಿಗೆ ಡೇಟಾ ಇಲ್ಲದ ಪ್ರತ್ಯೇಕ ಪ್ಯಾಕ್‌ಗಳ ಕೊರತೆ ಹೆಚ್ಚಿನ ಹೊರೆ ತಂದಿತ್ತು. ಇದರಿಂದ ಡಿಜಿಟಲ್ ಸೇವೆಗಳು ಮತ್ತು ಹಣಕಾಸು ಸಂವಹನವನ್ನು ಬಳಸುವಲ್ಲಿ ಅನಗತ್ಯ ವೆಚ್ಚದ ಸಮಸ್ಯೆ ಎದುರಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಪಾಕಿಸ್ತಾನ ಸೇರಿ ವಿಶ್ವದ 8 ಯುದ್ಧ ನಿಲ್ಲಿಸಿದ್ದೇ ನಾನು: ಮತ್ತೊಮ್ಮೆ ಕೊಚ್ಚಿಕೊಂಡ ಟ್ರಂಪ್! ಇರಾನ್‌ಗೆ ಎಚ್ಚರಿಕೆ
ಸಾರ್..ತಿಂಗಳಿಗೆ 75 ಸಾವಿರ ದುಡಿಯುತ್ತೇನೆ, ಅದ್ರೂ ಕೊನೆಗೆ ಸಾಲ ಎಂದ ಆಟೋ ಚಾಲಕನ ಮಾತು ವೈರಲ್