
ಜಾರ್ಖಂಡ್(ಜು.17): ಮಳೆಗಾಲದಲ್ಲಿನ ಪ್ರವಾಸ ಅತೀ ಹೆಚ್ಚು ಅಹ್ಲಾದದ ಜೊತೆ ಅಷ್ಟೇ ಅಪಾಯವನ್ನು ತಂದೊಡ್ಡಲಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಹೀಗೆ ಕುಟುಂಬ ಸಮೇತ ಪ್ರವಾಸ ಹೋದ ಕುಟುಂಬ ನೀರುಪಾಲಾದ ಘಟನೆ ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯಲ್ಲಿ ನಡೆದಿದೆ. ಪಂಚಖೆರೋ ಡ್ಯಾಮ್ ಹಿನ್ನೀರಿನಲ್ಲಿ ಬೋಟಿಂಗ್ ತೆರಳಿದ ಕುಟುಂಬ 8 ಸದಸ್ಯರ ದೋಣಿ ಮಧ್ಯಭಾಗದಲ್ಲಿ ಮಗುಚಿದೆ. ಇದರ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, ಈ ದುರಂತದಲ್ಲಿ 5 ವರ್ಷದ ಮಗು ಕೂಡ ಮೃತಪಟ್ಟಿದೆ. ದೋಣಿ ಹುಟ್ಟುಹಾಕಿದ ಖಾಸಗಿ ಬೋಟಿಂಗ್ ಸಂಸ್ಥೆಯ ವ್ಯಕ್ತಿ ಈಜಿ ದಡ ಸೇರಿದ್ದಾನೆ. ದಡಕ್ಕೆ ಬಂದ ವ್ಯಕ್ತಿ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಮುಂದುವರಿಸಿದೆ. ಇದೀಗ ಡ್ಯಾಮ್ ಸುತ್ತು ಭಾರಿ ಜನರ ಸೇರಿದ್ದು, ಶೋಧ ಕಾರ್ಯ ಮುಂದುವರಿದಿದೆ. ಸಂತಸದಿಂದ ಪ್ರವಾಸಕ್ಕೆಂದು ಬಂದ ಕುಟುಂಬ ದಾರುಣ ಅಂತ್ಯಕಂಡಿದೆ. ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
8 ಸದಸ್ಯರ ಕುಟುಂಬ ಪಂಚಖೆರೋ ಡ್ಯಾಮ್‌ಗೆ ಪ್ರವಾಸ ತೆರಳಿದೆ. ಮಾರ್ಕಾಚೋ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಡ್ಯಾಮ್ ಹಿನ್ನೀರಿನಲ್ಲಿ ಬೋಟಿಂಗ್ ಮಾಡುವ ಅವಕಾಶವಿದೆ. ಇಲ್ಲಿ ಖಾಸಗಿ ಸಂಸ್ಥೆಯಿಂದ ಕಂಟ್ರಿ ಬೋಟ್ ಪಡೆದ ಕುಟುಂಬ ಸದಸ್ಯರು ಬೋಟಿಂಗ್ ತೆರಳಿದ್ದಾರೆ. ನಾಡ ದೋಣಿ ಹಾಯುತ್ತಾ ನೀರಿನಲ್ಲಿ ತೆರಳಿದ ಕುಟುಂಬ ಪ್ರವಾಸಿ ತಾಣದ ಸವಿ ಅನುಭವಿಸಿದೆ. ಮಧ್ಯಭಾಗದಲ್ಲಿ ಆಕಸ್ಮಿಕವಾಗಿ ದೋಣಿ ಮಗುಚಿ ಬಿದ್ದಿದೆ. ಜಲಾಶಯದಲ್ಲಿ ಭಾರಿ ನೀರಿರುವ ಕಾರಣ ಹಾಗೂ ಹಿನ್ನೀರಿಲ್ಲಿ ಅತೀ ದೂರ ಸಾಗಿದ ಕಾರಣ ನೆರವಿಗೆ ಯಾರೂ ಇರಲಿಲ್ಲ. ಆದರೆ ದೋಣಿ ಹಾಯುತ್ತಿದ್ದ ನಾವಿಕ ಪ್ರದೀಪ್ ಕುಮಾರ್ ಈಜಿ ದಡ ಸೇರಿದ್ದಾನೆ. ಆದರೆ ಕುಟುಂಬ ಶಿವಂ ಸಿಂಗ್(17) ಪಲಕ್ ಕುಮಾರಿ(14) ಸಿತಾರಾಮ್ ಯಾದವ್(40) ಸೆಜಾಲ್ ಕುಮಾರಿ(16) ಭಾವುವಾ(5) ರಾಹುಲ್ ಕುಮಾರ್(16) ಹಾಗೂ ಅಮಿತ್ ಕುಮಾರ್(14) ಮೃತಪಟ್ಟಿದ್ದಾರೆ.
ಉಡುಪಿಯ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ: ಮೂವರು ಕಣ್ಮರೆ
ರಕ್ಷಣಾ ತಂಡ ನೀರಿನಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಶೋಧಕಾರ್ಯಕ್ಕೆ ಅಡ್ಡಿಯಾಗಿದೆ. ಇತ್ತ ಮಾರ್ಕಾಚೋ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರವಾಸಿಗರಿಗೆ ಬೋಟಿಂಗ್ ನೀಡುವ ವೇಳೆ ಲೈಫ್ ಜಾಕೆಟ್ ನೀಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಲೈಫ್ ಜಾಕೆಟ್ ನೀಡದೆ, ಪ್ರವಾಸಿಗರನ್ನು ಬೋಟಿಂಗ್ ಕಳುಹಿಸಲಾಗಿದೆ. ನೆರವಿಗೆ ಯಾವುದೇ ತಂಡವನ್ನು ನಿಯೋಜಿಸಿಲ್ಲ. ಮೇಲ್ನೋಟಕ್ಕೆ ಖಾಸಗಿ ಬೋಟಿಂಗ್ ಸಂಸ್ಥೆ ಹಲವು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.
ಬ್ಯಾಕ್ ವಾಟರ್ ಬೋಟಿಂಗ್ ಟೂರಿಸಂನಲ್ಲಿ ಅನುಸರಿಸಬೇಕಾದ ಹಲವು ನಿಯಮಗಳನ್ನು ಗಾಳಿಗೆ ತೂರಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಸ್ಥೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ದುರಂತ ಸಂಭವಿಸಿದೆ. ಡ್ಯಾಮ್ ಹಿನ್ನೀರಿನಲ್ಲಿ ಬೋಟಿಂಗ್ ಅವಕಾಶ ನೀಡಿ ಸರ್ಕಾರ ಹಣ ವಸೂಲಿ ಮಾಡುತ್ತಿದೆ. ಆದರೆ ಪ್ರವಾಸಿಗರ ಸುರಕ್ಷತೆಯತ್ತ ಯಾವುದೇ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಗೋವಾದಲ್ಲಿ ಮಲ್ಪೆ ಮೀನುಗಾರಿಕಾ ಬೋಟು ಮುಳುಗಡೆ, 7ಮಂದಿ ರಕ್ಷಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ