
ಟ್ರಾಫಿಕ್ ನಿಯಮ ಪಾಲಿಸದಿದ್ದರೆ ದಂಡ ಖಚಿತ. ಸಿಗ್ನಲ್ ಜಂಪ್, ರಾಂಗ್ ಸೈಡ್, ಓವರ್ ಸ್ಪೀಡ್, ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಯಾವುದೇ ನಿಯಮ ಉಲ್ಲಂಘಿಸಿದರೂ ದಂಡ ಕಟ್ಟಲೇ ಬೇಕು. ಆದರೆ ಸೈಕಲ್ ಸವಾರರು ಮೋಟಾರು ವಾಹನ ನಿಮಯದಡಿ ಬರುವುದಿಲ್ಲ. ಕಾರಣ ಇದು ಮೋಟಾರ್ ಅಲ್ಲ. ಆದರೆ ರಾಂಗ್ ಸೈಡಿನಲ್ಲಿ ಬಂದ ಸೈಕಲ್ ಸವಾರನ ಅಡ್ಡಗಟ್ಟಿದ ಪೊಲೀಸ್ ಚಲನ್ ನೀಡುವ ಎಚ್ಚರಿಕೆ ನೀಡುವ ದೃಶ್ಯ ಒಂದು ಭಾರಿ ವೈರಲ್ ಆಗಿದೆ. ಈ ವಿಡಿಯೋ ಬೆನ್ನಲ್ಲೇ ಚರ್ಚೆಯೂ ಶುರುವಾಗಿದೆ. ಸೈಕಲ್ ಸವಾರನಿಗೆ ಯಾವ ನಿಯಮದಡಿ ದಂಡ ವಿಧಿಸಿದ್ದೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಸೈಕಲ್ ಸವಾರ ರಾಂಗ್ ಸೈಡಿನಲ್ಲಿ ಬಂದಿರುವುದು ತಪ್ಪು ಎಂದಿದ್ದಾರೆ.
ಮೋಟಾರು ವಾಹನ ನಿಯಮದಲ್ಲಿ ರಾಂಗ್ ಸೈಡ್ ಡ್ರೈವ್ ಕೂಡ ಅತೀ ದೊಡ್ಡ ನಿಯಮ ಉಲ್ಲಂಘನೆಯಾಗಿದೆ. ರಾಂಗ್ ಸೈಡ್ ಡ್ರೈವ್‌ನಿಂದ ಅಪಘಾತ, ಸಾವು ನೋವಿನ ಪ್ರಮಾಣ ಹೆಚ್ಚು. ನಗರದ ಪ್ರಮುಖ ರಸ್ತೆಯಲ್ಲಿ ಸೈಕಲ್ ಸವಾರ ರಾಂಗ್ ಸೈಡಿನಿಂದ ಆಗಮಿಸಿದ್ದಾನೆ. ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸ್ ಸೈಕಲ್ ಸವಾರನ ತಡೆದು ನಿಲ್ಲಿಸಿ, ರಾಂಗ್ ಸೈಡಿನಿಂದ ಬಂದಿರುವುದೇಕೆ ಎಂದು ಪ್ರಶ್ನಿಸಿದ್ದಾನೆ.
ಹೆಲ್ಮೆಟ್ ಧರಿಸಿಲ್ಲ ಅಂತ ಕಾರಿಗೂ ಒಂದು ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು
ಇಷ್ಟೇ ಅಲ್ಲ ದಂಡದ ಚಲನ್ ನೀಡುವ ಪ್ರಯತ್ನ ಮಾಡಿದ್ದಾನೆ. ಇತ್ತ ಸೈಕಲ್ ಸವಾರ ಎಲ್ಲರೂ ಇದೇ ದಾರಿ ಮೂಲಕವೇ ಸಾಗುತ್ತಾರೆ. ನನಗಿಂತ ಮೊದಲು ಎಲ್ಲಾ ಸೈಕಲ್ ಸವಾರರು ಇದೇ ದಾರಿಯಲ್ಲಿ ಸಾಗಿದ್ದಾರೆ ಎಂದಿದ್ದಾನೆ. ಆದರೆ ಇದಕ್ಕೆ ಒಪ್ಪಂದ ಪೊಲೀಸ್, ರಾಂಗ್ ಸೈಡ್ ನಿಯಮಕ್ಕೆ ವಿರುದ್ಧವಾಗಿದೆ ಎಂದಿದ್ದಾನೆ. ಈ ದೃಶ್ಯದಲ್ಲಿ ಪೊಲೀಸ್ ದಂಡ ವಿಧಿಸಿರುವ ಯಾವುದೇ ದೃಶ್ಯವಿಲ್ಲ. ಸೈಕಲ್ ಸವಾರನಿಗೆ ದಂಡದ ಎಚ್ಚರಿಕೆ ನೀಡಿದ ದೃಶ್ಯವಿದೆ.
ಆದರೆ ಈ ವಿಡಿಯೋ ವೈರಲ್ ಬಳಿಕ ಪರ ವಿರೋಧ ಚರ್ಚೆ ಶುರುವಾಗಿದೆ. ಸೈಕಲ್ ಸವಾರನಿಗೆ ಯಾವ ನಿಯಮದಡಿ ದಂಡ ವಿಧಿಸಲು ಸಾಧ್ಯ? ಮೋಟಾರು ವಾಹನ ಕಾಯ್ದೆಯಡಿ ಸೈಕಲ್ ಬರುವುದಿಲ್ಲ. ಹೀಗಾಗಿ ಸೈಕಲ್ ಸವಾರರ ಮೇಲೆ ಪೊಲೀಸರ ದರ್ಪ ಸರಿಯಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಬಿಸಿಲ ಬೇಗೆಗೆ ಪೊಲೀಸರಿಗೆ ಎಸಿ ಹೆಲ್ಮೆಟ್, ಮೈಯೆಲ್ಲಾ ಬೆವೆತರೂ ತಲೆ ಕೂಲ್ ಕೂಲ್!
ಇತ್ತ ಸೈಕಲ್ ಸವಾರ ರಾಂಗ್ ಸೈಡಿನಲ್ಲಿ ಬಂದಿದ್ದಾನೆ. ಇದು ತಪ್ಪು, ಅಪಘಾತವಾದರೆ ಸೈಕಲ್ ಸವಾರ ತೀವ್ರವಾಗಿ ಗಾಯಗೊಳ್ಳುವ, ಸಾವು ನೋವಿನ ಸಂಭವ ಹೆಚ್ಚು. ಹೀಗಾಗಿ ಪೊಲೀಸ್ ಹೇಳಿದ್ದು ಸರಿಯಾಗಿದೆ ಎಂದು ವಾದಿಸಿದ್ದಾರೆ. ರಾಂಗ್ ಸೈಡ್ ಯಾರೇ ಮಾಡಿದರೂ ತಪ್ಪು, ಇಲ್ಲಿ ಪೊಲೀಸ್ ಇದೇ ರಾಂಗ್ ಸೈಡ್ ವಿಚಾರವನ್ನೇ ಹೇಳಿದ್ದಾನೆ ಎಂದು ಪೊಲೀಸ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಿಡಿಯೋ ನಡೆದ ಸ್ಥಳ,ದಿನಾಂಕದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ