ಕಾರಿನಲ್ಲಿ ಸಿಗರೇಟ್ ಸೇದಿದರೆ ದಂಡ ಬೀಳುತ್ತಾ? 2025ರ ಹೊಸ ಸಂಚಾರಿ ನಿಯಮಗಳ ಪ್ರಕಾರ ದಂಡ, ಶಿಕ್ಷೆಯ ವಿವರ..!

Published : Mar 19, 2025, 07:54 PM ISTUpdated : Mar 19, 2025, 08:06 PM IST
ಕಾರಿನಲ್ಲಿ ಸಿಗರೇಟ್ ಸೇದಿದರೆ ದಂಡ ಬೀಳುತ್ತಾ? 2025ರ ಹೊಸ ಸಂಚಾರಿ ನಿಯಮಗಳ ಪ್ರಕಾರ ದಂಡ, ಶಿಕ್ಷೆಯ ವಿವರ..!

ಸಾರಾಂಶ

ಕಾರಿನಲ್ಲಿ ಸಿಗರೇಟ್ ಸೇದುವುದು ಸಂಚಾರಿ ನಿಯಮ ಉಲ್ಲಂಘನೆಯಾಗಿದ್ದು, ಮೊದಲ ಬಾರಿಗೆ 500 ರೂ. ಮತ್ತು ಮತ್ತೆ ಸಿಕ್ಕಿಬಿದ್ದರೆ 1,500 ರೂ. ದಂಡ ವಿಧಿಸಲಾಗುತ್ತದೆ. ಸಿಎನ್‌ಜಿ ಕಾರುಗಳಲ್ಲಿ ಇದು ಅಪಾಯಕಾರಿಯಾಗಿದ್ದು, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಕುಡಿದು ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ಚಲಾಯಿಸುವುದು ಸೇರಿದಂತೆ ಇತರ ಸಂಚಾರಿ ನಿಯಮ ಉಲ್ಲಂಘನೆಗೂ ದಂಡವಿದೆ.

ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿರುವುದು, ಸಿಗ್ನಲ್ ಜಂಪ್, ಮದ್ಯಪಾನ ಮಾಡಿ ವಾಹನ ಸೇವನೆಗೆ ಭಾರೀ ದೊಡ್ಡ ಪ್ರಮಾಣದ ದಂಡ ಹಾಕಲಾಗುತ್ತದೆ. ಆದರೆ, ಕಾರಿನಲ್ಲಿ ಹೋಗುವಾಗ ಸಿಗರೇಟ್ ಸೇದುವುದಕ್ಕೆ ಅವಕಾಶವಿದೆಯೇ? ಸಿಗರೇಟ್ ಸೇದುವುದು ಸಂಚಾರ ನಿಯಮ ಉಲ್ಲಂಘನೆ ಆಗಲಿದೆಯೇ? ಇದಕ್ಕೆ ಪೊಲೀಸರು ದಂಡ ಹಾಕಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

ನಮ್ಮ ದೇಶದಲ್ಲಿ ಈಗಾಗಲೇ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದಾರೆ. ಜೊತೆಗೆ, ಮಾ.2025ರಿಂದ ದಂಡದ ಪ್ರಮಾಣ 10 ಪಟ್ಟು ಹೆಚ್ಚಾಗಿದೆ. ಹೀಗಾಗಿ, ರಸ್ತೆಯಲ್ಲಿ ಕಾರು ಅಥವಾ ಬೈಕ್‌ ಸೇರಿದಂತೆ ಯಾವುದೇ ವಾಹನದಲ್ಲಿ ಹೀಗುವಾಗಲೂ ನೀವು ತುಂಬಾ ಜಾಗರೂಕರಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಹೋಗಬೇಕು. ಹೀಗಾಗಿ, ಎಲ್ಲರೂ ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಸಿಗ್ನಲ್ ಜಂಪ್ ಮಾಡಬಾರದು, ಎಲ್ಲೆಂದರಲಗಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಬಾರದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಕಾರಿನಲ್ಲಿ ಹೋಗುವಾಗ ಸಿಗರೇಟ್ ಸೇದಿದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆಯೇ ಅಥವಾ ಇದಕ್ಕೆ ಪೊಲೀಸರು ದಂಡವನ್ನು ಹಾಕುತ್ತಾರೆಯೇ ಎಂಬ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ.

2025ರ ಹೊಸ ರೂಲ್ಸ್ (2025 New Motor Vehicle Fines) ಪ್ರಕಾರ, ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಉಲ್ಲಂಘನೆಗೆ ಕೇವಲ ದಂಡ ಮಾತ್ರವಲ್ಲ, ಗಂಭೀರ ಪ್ರಕರಣವಾಗಿದ್ದರೆ ಜೈಲಿಗೆ ಕೂಡ ಕಳಿಸುವ ಶಿಕ್ಷೆಯನ್ನು ಅಳವಡಿಕೆ ಮಾಡಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಮಾತ್ರ ದಂಡವನ್ನು ಹಾಕುವುದಲ್ಲದೇ, ವಾಹನ ಚಲಾಯಿಸುವಾಗ ಸಿಗರೇಟ್ ಸೇದಿದರೂ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆದ್ದರಿಮದ ನಿಮಗೂ ವಾಹನ ಡ್ರೈವ್ ಮಾಡುವಾಗ ಸಿಗರೇಟ್ ಸೇದುವ ಅಭ್ಯಾಸವಿದ್ದರೆ ದಂಡ ಹಾಕುತ್ತಾರೆ. ಸಿಗರೇಟ್-ಬೀಡಿ ಸೇದುತ್ತಾ ಡ್ರೈವಿಂಗ್ ಮಾಡುವುದು ಕೂಡ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ದಂಡನಾರ್ಐ ಅಥವಾ ಶಿಕ್ಷಾರ್ಹ ಅಪರಾಧವಾಗಿದೆ.

ಇದನ್ನೂ ಓದಿ: ಕೆಲಸ ಸಿಕ್ಕಿಲ್ವಾ? ಸಂಬಳವೆಷ್ಟು? ಎಂದು ಕೇಳುವ ಸಂಬಂಧಿಕರಿಗೆ ಉತ್ತರಿಸಲು ಸಲಹೆ ಕೊಟ್ಟ ಬೆಂಗಳೂರು ಡಾಕ್ಟರ್!

ಕಾರಿನಲ್ಲಿ ಸಿಗರೇಟ್ ಸೇದಿದರೆ ದಂಡವೆಷ್ಟು?
ಕಾರಲ್ಲಿ ಕುಳಿತುಕೊಂಡು ಅಥವಾ ಕಾರನ್ನು ಚಲಾಯಿಸುವಾಗ ಸಿಗರೇಟ್ ಅಥವಾ ಬೀಡಿ ಸೇದಿದರೆ ಮೊದಲನೇ ಬಾರಿ ಸಿಕ್ಕಿಬಿದ್ದರೆ DMVR 86.1(5)/177 MVA ಅಡಿಯಲ್ಲಿ 500 ರೂ. ದಂಡ ಕಟ್ಟಬೇಕಾಗುತ್ತದೆ. ಪುನಃ ಇದೇ ತಪ್ಪು ಮಾಡಿದರೆ ನೀವು 1,500 ರೂಪಾಯಿ ಫೈನ್ ಕಟ್ಟಬೇಕಾಗಬಹುದು. ಅದಕ್ಕೆ ಈ ತರಹದ ತಪ್ಪು ಮಾಡಬೇಡಿ.

ಕಾರಿನಲ್ಲಿ ಸಿಗರೇಟ್ ಸೇದೋದು ಡೇಂಜರ್: ಒಂದು ವೇಳೆ ನಿಮ್ಮ ಬಳಿ ಸಿಎನ್‌ಜಿ ಕಾರ್ (CNG Car) ಇದ್ದರೆ ನೀವು ಹೆಚ್ಚು ಹುಷಾರಾಗಿರಬೇಕು. ಏಕೆಂದರೆ ಈ ಸಿಎನ್‌ಜಿ ಕಾರ್‌ನಲ್ಲಿರುವ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿ ಸಿಗರೇಟ್ ಸಂಪರ್ಕಕ್ಕೆ ಬಂದರೆ ಗಾಡಿಯೇ ಬೆಂಕಿಗೆ ಆಹುತಿಯಾಗಬಹುದು. ಅಂದರೆ, ಸಿಗರೇಟ್‌ನಿಂದ ಬರೀ ಜೇಬಿಗೆ ಕತ್ತರಿ ಬೀಳುವುದು ಮಾತ್ವಲ್ಲ ಪ್ರಾಣಕ್ಕೂ ಕಂಟಕವಾಗಬಹುದು.

ಇದನ್ನೂ ಓದಿ: ಡೋಂಟ್ ವರಿ, ಇನ್ಮುಂದೆ ಎಲ್ಲರಿಗೂ ಸಿಗುತ್ತೆ ಕನ್ಫರ್ಮ್ ಟಿಕೆಟ್; ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ

New Traffic Rules: ಯಾವ ತಪ್ಪುಗಳಿಗೆ ಎಷ್ಟು ಫೈನ್-ಶಿಕ್ಷೆ

  • ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ರೆ 10,000 ರೂಪಾಯಿ.
  • 6 ತಿಂಗಳವರೆಗೆ ಜೈಲು ಹೆಲ್ಮೆಟ್ ಇಲ್ಲದೆ ಬೈಕ್ ಅಥವಾ ಸ್ಕೂಟರ್ ಓಡಿಸಿದ್ರೆ 1,000 ರೂಪಾಯಿ ದಂಡ ಮತ್ತು 3 ತಿಂಗಳಿಗೆ ಲೈಸೆನ್ಸ್ ಕ್ಯಾನ್ಸಲ್ ಆಗುತ್ತದೆ.
  • ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಹೋದರೆ 1,000 ರೂಪಾಯಿ ದಂಡ.
  • ಸೀಟ್ ಬೆಲ್ಟ್ ಹಾಕದೆ ಡ್ರೈವಿಂಗ್ ಮಾಡಿದ್ರೆ 1,000 ರೂಪಾಯಿ ದಂಡ.
  • ಫೋನ್‌ನಲ್ಲಿ ಮಾತಾಡ್ತಾ ಕಾರ್ ಅಥವಾ ಗಾಡಿ ಓಡಿಸಿದರೆ 5,000 ರೂಪಾಯಿ ಫೈನ್.
  • ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದರೆ 5000 ರೂಪಾಯಿ ಫೈನ್.
  • ವ್ಯಾಲಿಡ್ ಇನ್ಶೂರೆನ್ಸ್ ಪೇಪರ್ ಇಲ್ಲವೆಂದರೆ 2000 ರೂಪಾಯಿ ಮತ್ತು 3 ತಿಂಗಳ ಜೈಲು. ಪುನಃ ಉಲ್ಲಂಘಿಸಿದರೆ 4000 ರೂಪಾಯಿ ದಂಡ.
  • ಪೊಲ್ಯೂಷನ್ ಸರ್ಟಿಫಿಕೇಟ್ ಇಲ್ಲದೆ ರೈಡ್ ಅಥವಾ ಡ್ರೈವ್ ಮಾಡಿದ್ರೆ 10,000 ರೂಪಾಯಿ ಫೈನ್, 6 ತಿಂಗಳವರೆಗೆ ಜೈಲು
  • ಸ್ಟಂಟ್, ಡೇಂಜರಸ್ ಡ್ರೈವಿಂಗ್, ರೇಸಿಂಗ್ ಮಾಡಿದ್ರೆ 5,000 ರೂಪಾಯಿ ಫೈನ್.
  • ಎಮರ್ಜೆನ್ಸಿ ಗಾಡಿ ಎಂದರೆ ಆಂಬುಲೆನ್ಸ್‌ಗೆ ದಾರಿ ಬಿಡದಿದ್ದರೆ 10,000 ರೂಪಾಯಿವರೆಗೆ ಫೈನ್.
  • ಓವರ್‌ಲೋಡಿಂಗ್ ಮಾಡಿದರೆ 20,000 ರೂಪಾಯಿ ಫೈನ್.
  • ಸಿಗ್ನಲ್ ಜಂಪ್ ಮಾಡಿದರೆ 5,000 ರೂಪಾಯಿ ಫೈನ್.
  • ಕಡಿಮೆ ವಯಸ್ಸಿನಲ್ಲಿ ಡ್ರೈವಿಂಗ್ ಮಾಡಿದ್ರೆ 25,000 ರೂಪಾಯಿ ಫೈನ್, 3 ವರ್ಷ ಜೈಲು, ಒಂದು ವರ್ಷದವರೆಗೆ ಗಾಡಿ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮತ್ತು 25 ವರ್ಷದವರೆಗೆ DL ಅನರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ