ಬೆಂಗಳೂರು-ಚೆನ್ನೈ ಹೈವೇ ಪ್ರಯಾಣ ಕೇವಲ 3 ಗಂಟೆ, ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ

Published : Mar 19, 2025, 05:52 PM ISTUpdated : Mar 19, 2025, 06:02 PM IST
ಬೆಂಗಳೂರು-ಚೆನ್ನೈ ಹೈವೇ ಪ್ರಯಾಣ ಕೇವಲ 3 ಗಂಟೆ, ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತ

ಸಾರಾಂಶ

ಬೆಂಗಳೂರು ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಅವಧಿ ಕೇವಲ ಮೂರೇ ಗಂಟೆ. ವಿಶೇಷ ಅಂದರೆ ಸಂಪೂರ್ಣ ಎಕ್ಸ್‌ಪ್ರೆಸ್‌ವೇ  ಜೂನ್ 2026ಕ್ಕೆ ಸಂಚಾರ ಮುಕ್ತಗೊಳ್ಳಲಿದೆ.

ಬೆಂಗಳೂರು(ಮಾ.19) ಭಾರತದ ರಸ್ತೆ ಸಾರಿಗೆಯಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ. ಸಂಪರ್ಕ ಸುಲಭವಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ರಸ್ತೆಗಳು ಭಾರತದ ಚಿತ್ರಣ ಬದಲಿಸುತ್ತಿದೆ. ಈಗಾಗಲೇ ಬೆಂಗಳೂರಿನಿಂದ ಮೈಸೂರು ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರಿಗೆ ಉತ್ತಮ ಪ್ರಯಾಣ ಹಾಗೂ ಅತೀ ಕಡಿಮೆ ಸಮಯದಲ್ಲಿ ಪ್ರಯಾಣ ನೀಡುತ್ತಿದೆ. ಇದೀಗ ಬೆಂಗಳೂರು-ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ರಸ್ತೆ ಅಭಿವೃದ್ಧಿ ಸೂಚಿಸುತ್ತಿದೆ. ಕಾರಣ ಬೆಂಗಳೂರು-ಚೆನ್ನೈ ಕೇವಲ ಮೂರು ಗಂಟೆ ಪ್ರಯಾಣ. ಬೆಂಗಳೂರು-ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ವೇ ಸಂಪೂರ್ಣವಾಗಿ ಜೂನ್ 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು-ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಒಟ್ಟು 262 ಕಿಲೋಮೀಟರ್ ದೂರವಿದೆ. ಈ ಪೈಕಿ 71 ಕಿಲೋಮೀಟರ್ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕರ್ನಾಟಕದ ಭಾಗದ ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ. ಇನ್ನು ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯದಲ್ಲಿ ಹಾದು ಗೋಗುವ ರಸ್ತೆ ಕಾಮಾಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡಿರುವ ಈ ರಸ್ತೆ ಕಾಮಾಗಾರಿ ಸಂಚಾರಕ್ಕೆ ಮುಕ್ಕವಾಗಿದೆ. 71 ಕಿಲೋಮೀಟರ್ ದೂರದ ರಸ್ತೆಯಲ್ಲಿ ಈಗ ಪ್ರಯಾಣ ಮಾಡಬುಹುದು. ಬಳಿಕ ಡಿವಿಯೇಶನ್ ನೀಡಲಾಗಿದ್ದು. ಹಳೇ ರಸ್ತೆ ಸಂಪರ್ಕ ಪಡೆಯಲಿದೆ.

ಬೆಂಗಳೂರು-ಮೈಸೂರು ಬೆನ್ನಲ್ಲಿಯೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್‌ ನಿಷೇಧ!

ಕರ್ನಾಟಕ ಭಾಗದ 71 ಕಿಲೋಮೀಟರ್ ರಸ್ತೆ ಡಿಸೆಂಬರ್ 2024ರಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ತಮಿಳುನಾಡಿನಲ್ಲಿ ಭೂಮಿ ವಶಪಡಿಸಿಕೊಳ್ಳುವಿಕೆಯಲ್ಲಿ ಆದ ವಿಳಂಬದಿಂದ ಕಾಮಾಗಾರಿ ವಿಳಂಬವಾಗಿದೆ ಎನ್ನಲಾಗುತ್ತಿದೆ. ಕರ್ನಾಟಕ ಭಾಗದ ರಸ್ತೆಯಲ್ಲಿ ಈಗಾಗಲೇ ವಾಹನಗಳು ಸಂಚಾರ ಮಾಡುತ್ತಿದೆ. ಇನ್ನುಳಿದ ಭಾಗ ಜೂನ್ 2026ರ ವೇಳೆ ಸಂಪೂರ್ಣವಾಗಲಿದೆ. ಈ ಮೂಲಕ ಬೆಂಗಳೂರು ಚೆನ್ನೈ ಕೇವಲ 3 ಗಂಟೆಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇನಲ್ಲಿ ಗರಿಷ್ಠ ವೇಗ ಮಿತಿ 120 ಕಿಲೋಮೀಟರ್ ಪ್ರತಿ ಗಂಟೆಗೆ.ಈ ಹೆದ್ದಾರಿ ನಿರ್ಮಾಣದ ಒಟ್ಟು ವೆಚ್ಚು ಬರೋಬ್ಬರಿ 17,900 ಕೋಟಿ ರೂಪಾಯಿ.  ಸದ್ಯ ಬೆಂಗಳೂರು ಚೆನ್ನೈ ಪ್ರಯಾಣಕ್ಕೆ 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಗ್ರೀನ್‌ಫೀಲ್ಡ್ ಎಕ್ಸ್‌ಪಪ್ರೆಸ್‌ವೇನಲ್ಲಿ ಕೇವಲ ಮೂರೇ ಗಂಟೆಯಲ್ಲಿ ಪ್ರಯಾಣ ಮಾಡಲು ಸಾಧ್ಯವಿದೆ.

ಸದ್ಯ ಸಂಚಾರ ಮುಕ್ತವಾಗಿರುವ ಹೆದ್ದಾರಿಯಲ್ಲಿ ಪ್ರತಿ ದಿನ 1,600 ರಿಂದ 2,000 ವಾಹನಗಳು ಪ್ರಯಾಣ ಮಾಡುತ್ತಿದೆ. ಇತ್ತೀಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ್ವಿಚಕ್ರವಾಹನಗಳನ್ನು ನಿರ್ಬಂಧಿಸಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ನಡೆದ ಅಪಘಾತದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇದು ಭಾರತದ ಅತಿ ಶ್ರೀಮಂತ ಎಕ್ಸ್‌ಪ್ರೆಸ್‌ ವೇ, ಇದರ ವಾರ್ಷಿಕ ಆದಾಯ ಎಷ್ಟು ಕೋಟಿ ಗೊತ್ತಾ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್