ಆನ್‌ಲೈನ್ ಗೇಮಿಂಗ್ ಕಂಪೆನಿಗಳ ಕರಾಳ ಮುಖ ತೆರೆದಿಟ್ಟ ರೇಡಿಯೋ ಜಾಕಿ, ಗಂಡನಿಗೆ ನೀಡಿತ್ತು ಚಿತ್ರಹಿಂಸೆ

Published : Aug 21, 2025, 06:33 PM IST
online game ban

ಸಾರಾಂಶ

ಆನ್‌ಲೈನ್ ಗೇಮಿಂಗ್ ಕಂಪನಿಗಳಲ್ಲಿನ ವಿಷಕಾರಿ ವಾತಾವರಣ, ಮೋಸದ ವ್ಯವಹಾರ ಮಾದರಿಗಳು ಮತ್ತು ಅವುಗಳು ಆಟಗಾರರ ಮೇಲೆ ಬೀರುವ ವಿನಾಶಕಾರಿ ಪರಿಣಾಮಗಳನ್ನು ಈ ಲೇಖನವು ಬೆಳಕಿಗೆ ತರುತ್ತದೆ. ಸರ್ಕಾರದ ಹೊಸ ಮಸೂದೆಯು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಚರ್ಚಿಸುತ್ತದೆ.

ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಅನುಮೋದಿಸಿದೆ. ಈ ನಿರ್ಧಾರವು ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಆನ್‌ಲೈನ್ ಗೇಮಿಂಗ್ ವಲಯದ ಮೇಲೆ ಇದುವರೆಗಿನ ಅತ್ಯಂತ ವ್ಯಾಪಕ ಮತ್ತು ಕಠಿಣ ನಿಯಂತ್ರಣದ ವೇದಿಕೆಯನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೇ ಆನ್‌ಲೈನ್ ಗೇಮಿಂಗ್ ಸಂಸ್ಥೆಯಲ್ಲಿ ತನ್ನ ಗಂಡ ಕೆಲಸ ಮಾಡುವಾಗ ಕೊಟ್ಟ ಚಿತ್ರಹಿಂಸೆ, ಕಂಪೆನಿಯುವ ಅವರ ಬದುಕಿನ ಸಂತಸವನ್ನು ಕಿತ್ತುಕೊಂಡ ಬಗ್ಗೆ, ಗೇಮ್ ಆಡುವ ಯೂತ್ ಗಳನ್ನು ಕಂಪೆನಿ ಹೇಗೆ ಪ್ರೇರೇಪಿಸುತ್ತದೆ. ಮತ್ತು ಅವರನ್ನು ಹೇಗೆ ಮೋಸಗೊಳಿಸುತ್ತದೆ ಎಂಬ ಬಗ್ಗೆ ಮಾಜಿ ಆರ್‌ಜೆ ಅನಾಮಿಕಾ ಗಾಯಕ್ವಾಡ್ ಎಂಬ ಮಹಿಳೆಯೊಬ್ಬರು ಲಿಂಕ್ಡ್ ಇನ್ ನಲ್ಲಿ ಬರೆದುಕೊಂಡಿದ್ದು, ಭಾರೀ ವೈರಲ್ ಆಗಿದೆ. ಜೊತೆಗೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಜೀವನ ಕಸಿದುಕೊಂಡ ಕಂಪೆನಿ

ನನ್ನ ಗಂಡ ಆನ್‌ಲೈನ್ ಗೇಮಿಂಗ್ ಕಂಪನಿಯಲ್ಲಿ ಕೆಲಸ ಮಾಡಿದರು. ಆದರೆ ಆ ಕೆಲಸವೇ ಅವರ ಜೀವವನ್ನು ಕಸಿದುಕೊಳ್ಳುವ ಮಟ್ಟಕ್ಕೆ ಕೊಂಡೊಯ್ದಿತ್ತು. ಈ ಕಾರಣಕ್ಕೆ ಆನ್‌ಲೈನ್ ಹಣದ ಗೇಮಿಂಗ್ ನಿಷೇಧದ ನಿರ್ಧಾರ ಈ ದೇಶ ತೆಗೆದುಕೊಂಡ ಅತ್ಯುತ್ತಮ ತೀರ್ಮಾನ ಎಂದು ನಾನು ಹೃದಯಪೂರ್ವಕವಾಗಿ ಹೇಳುತ್ತೇನೆ. ಏಕೆಂದರೆ ಇಂತಹ ಕಂಪನಿಗಳು ಏನು ಎಂಬುದನ್ನು ನಾನು ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದ ಬಹಳ ಹತ್ತಿರದಿಂದ ಕಂಡಿದ್ದೇನೆ ಎಂದು ಬೇಸರದಿಂದ ಬರೆದುಕೊಂಡಿದ್ದಾರೆ

ಕೆಲವು ತಿಂಗಳುಗಳು ನರಕ ಅನುಭವಿಸಿದೆ. ನನ್ನ ಗಂಡ ಕೆಲವು ತಿಂಗಳು ಅಂತಹ ಒಂದು ಆನ್‌ಲೈನ್ ಗೇಮಿಂಗ್ ಕಂಪನಿಯಲ್ಲಿ ಕೆಲಸ ಮಾಡಿದರು. ಆದರೆ ಆ ಕೆಲವು ತಿಂಗಳುಗಳು ಅವರ ವ್ಯಕ್ತಿತ್ವ, ಆರೋಗ್ಯ ಮತ್ತು ಬದುಕನ್ನೇ ಛಿದ್ರ ಮಾಡಿತು. ಮೊದಲ ದಿನದಿಂದಲೇ ಅಲ್ಲಿ ಕಂಡದ್ದು ವಿಷಕಾರಿ ವಾತಾವರಣ. ಅಧಿಕಾರಿಗಳ ಕೂಗು, ನಿಂದನೆ, ನಿರಂತರ ಮಾನಸಿಕ ಒತ್ತಡ, ಮಾನವೀಯತೆ ಮೀರಿದ ವರ್ತನೆ, ಗಂಟೆಗಳ ಲೆಕ್ಕವಿಲ್ಲದ ನಿರಂತರ ಹಿಂಸೆಯ ದುಡಿಮೆ. ನೈತಿಕತೆಯ ಅರಿವೇ ಇಲ್ಲದ ನಾಯಕರ ಆಡಳಿತ. ಆದರೆ ಈ ಕಂಪನಿಯ ವ್ಯವಹಾರ ಮಾದರಿ ಇನ್ನೂ ಭಯಾನಕವಾಗಿತ್ತು.

ಮಾನವೀಯತೆಯನ್ನು ನುಂಗಿದ ಕಂಪನಿಯ ವ್ಯವಹಾರ

ಆಟದಲ್ಲಿ ಸೋತು ಜೀವ ತ್ಯಜಿಸಿದವರ ಆತ್ಮಹತ್ಯೆ ಚೀಟಿಗಳನ್ನು ನನ್ನ ಗಂಡ ತಮ್ಮ ಕಣ್ಣುಗಳಿಂದಲೇ ಕಂಡಿದ್ದಾರೆ. ನೀವು ನಿಜವಾದ ಆಟಗಾರರೊಂದಿಗೆ ಆಡುತ್ತಿದ್ದೀರಿ ಎಂದು ಸುಳ್ಳು ಹೇಳಿ, ಜನರನ್ನು ಸೋಲಿಸಲು ಬಾಟ್‌ಗಳನ್ನು ಬಳಸಿದ ಕುತಂತ್ರಗಳನ್ನು ಕಂಡಿದ್ದಾರೆ. ಒಂದು ಸರ್ಕಾರಿ ಶಾಲಾ ಶಿಕ್ಷಕ ತನ್ನ ಭೂಮಿಯನ್ನು ಮಾರಿಕೊಂಡು ಗೇಮಿಂಗ್‌ಗೆ ಹಣ ಹೂಡಿದರೂ, ಕೊನೆಗೆ ಎಲ್ಲವನ್ನೂ ಕಳೆದುಕೊಂಡು ಕಣ್ಣೀರು ಹಾಕಿದ ದೃಶ್ಯವನ್ನು ಸಹ ನೋಡಿ ಸಾಕ್ಷಿಯಾಗಿದ್ದಾರೆ. ಜನರನ್ನು ಸಾವಿನ ಬಾವಿಗೆ ತಳ್ಳುವಂತಹ ವಂಚನೆಯ ಯಂತ್ರದ ಭಾಗವಾಗಿರುವ ಪಾಪದ ಭಾರವನ್ನು ಪ್ರತಿದಿನ ಹೊತ್ತು ಬದುಕಬೇಕಾದ ಪರಿಸ್ಥಿತಿ ನನ್ನ ಗಂಡನದಾಗಿತ್ತು.

ಒತ್ತಡದಿಂದ ಆರೋಗ್ಯ ಕೆಡಿಸಿಕೊಂಡ ಗಂಡ

ಈ ಒತ್ತಡ ಮತ್ತು ಆತಂಕ ಕೊನೆಗೆ ಅವರ ಆರೋಗ್ಯವನ್ನೇ ಕುಗ್ಗಿಸಿತು. ಅವರು ಅಚಾನಕ್ ಕುಸಿದು ಬಿದ್ದರು. ವೈದ್ಯರು, ಜೀವಕ್ಕೆ ಅಪಾಯವಾಗಬಹುದಿತ್ತು ಎಂದು ಎಚ್ಚರಿಸಿದರು. ಆದರೆ ಕಂಪನಿಗೆ ಅದರ ಬಗ್ಗೆ ಕನಿಷ್ಠ ಕಾಳಜಿಯೂ ಇರಲಿಲ್ಲ. ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾಗಲೇ PIP (Performance Improvement Plan) ಹಾಕಿ, ಕೆಲವೇ ದಿನಗಳಲ್ಲಿ ಯಾವುದೇ ಕಾರಣವಿಲ್ಲದೆ ಕೆಲಸದಿಂದ ಕಿತ್ತು ಹಾಕಿದರು.

ದುರಾಸೆ, ವಂಚನೆ, ಮಾನವೀಯತೆಯ ಕೊರತೆ

ಈ ಉದ್ಯಮ ದುರಾಸೆಯ ಮೇಲೆ ಬದುಕುತ್ತಿತ್ತು. ಇದು ಆಟಗಾರರನ್ನು ಹಾಳುಮಾಡಿತು, ಅವರ ಜೀವನ ಕಸಿದುಕೊಂಡಿತು. ನೌಕರರನ್ನು ಹಾಳುಮಾಡಿತು, ಕುಟುಂಬಗಳನ್ನು ಹಾಳುಮಾಡಿತು. ನಮ್ಮಂತಹ ಅದೆಷ್ಟೋ ಕುಟುಂಬಗಳು ಅದಕ್ಕೆ ಬಲಿಯಾಗಿದವು. ಆದರೆ ಇಂದು ಸರ್ಕಾರ ಈ ಮಸೂದೆ ಅಂಗೀಕರಿಸಿದ ಬಳಿಕ ನನಗೆ ಕೊನೆಗೂ ಸ್ವಲ್ಪ ನ್ಯಾಯ ಸಿಕ್ಕಂತಾಗಿದೆ. ಲಕ್ಷಾಂತರ ಜನರು ಈ ಅವರ ಬಲೆಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಮತ್ತು ನನ್ನ ಗಂಡನಂತಹ ನೌಕರರು ಇಂತಹ ನರಕಯಾತನೆಯ ಕಂಪನಿಗಳಲ್ಲಿ ಕೆಲಸ ಮಾಡಲು, ಇಂತಹ ಕೆಟ್ಟ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವರು.

ಮಸೂದೆ ಏನು ಹೇಳುತ್ತದೆ?

ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದರೆ, ದೇಶದಲ್ಲಿ ಹಣ ಆಧಾರಿತ ಆನ್‌ಲೈನ್ ಆಟಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ ಜಾರಿಯಾಗಲಿದೆ.

ಯಾವುದೇ ಆನ್‌ಲೈನ್ ಆಟದಲ್ಲಿ ಹಣದ ಹೂಡಿಕೆ ಅಥವಾ ಪಣ ತೊಡಗಿಸಿಕೊಂಡಿದ್ದರೆ ಅದು ಕೌಶಲ್ಯ ಆಧಾರಿತವಾಗಿರಲಿ ಅಥವಾ ಅವಕಾಶ ಆಧಾರಿತವಾಗಿರಲಿ ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.

ಅಂತಹ ವೇದಿಕೆಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಿಗೆ ಪೂರ್ಣ ನಿಷೇಧ ಜಾರಿಯಾಗಲಿದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಂತಹ ಆಟಗಳಿಗೆ ಸಂಬಂಧಿಸಿದ ಯಾವುದೇ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವುದನ್ನು ತಡೆಯಬೇಕಾಗುತ್ತದೆ.

ಉಲ್ಲಂಘನೆ ಮಾಡಿದರೆ ಶಿಕ್ಷೆ

ಮಸೂದೆ ಕರಡು ಪ್ರಕಾರ, ಹಣ ಆಧಾರಿತ ಆಟಗಳನ್ನು ನೀಡುವವರು ಅಥವಾ ಅವುಗಳನ್ನು ಪ್ರಚಾರ ಮಾಡುವವರು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ, ಕೇವಲ ಆಟಗಾರರಷ್ಟೇ ಅಲ್ಲ, ಇಂತಹ ಸೇವೆಗಳನ್ನು ನೀಡುವ ಕಂಪನಿಗಳೂ ಕಾನೂನು ಕ್ರಮಕ್ಕೆ ಒಳಗಾಗಲಿದ್ದಾರೆ.

ಏಕೆ ಇಷ್ಟು ಕಠಿಣ ಕ್ರಮ?

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಆನ್‌ಲೈನ್ ಗೇಮಿಂಗ್ ಅಪಾರವಾಗಿ ಬೆಳೆದಿದೆ. ಆದರೆ ಅದೇ ಸಮಯದಲ್ಲಿ, ಹಣ ಆಧಾರಿತ ಆಟಗಳಿಂದ ಅನೇಕ ಸಾಮಾಜಿಕ ಸಮಸ್ಯೆಗಳು ಎದುರಾಗಿ ಬಂದಿವೆ:

  • ಸಾವಿರಾರು ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ.
  • ಸಾಲದ ಬಾಧೆ ಹೆಚ್ಚಾಗಿ, ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ.
  • ಸೋಲಿನ ನಿರಾಶೆಯಿಂದ ಕೆಲವರು ಸಾವಿನ ಹಾದಿ ಹಿಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ, ಸರ್ಕಾರವು ಸಾಮಾಜಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ