ಕುನೋ ರಾಷ್ಟ್ರೀಯ ಉದ್ಯಾನವನದ (ಕೆಎನ್‌ಪಿ) ಪ್ರವಾಸಿ ವಲಯದಲ್ಲಿ ಎರಡು ಗಂಡು ಚೀತಾಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಜನರಿಗೆ ಚೀತಾ ವೀಕ್ಷಣೆ ಭಾಗ್ಯ ಸಿಗಲಿದೆ.
ಭೋಪಾಲ್ (ಡಿ.18): ಕುನೋ ರಾಷ್ಟ್ರೀಯ ಉದ್ಯಾನವನದ (ಕೆಎನ್‌ಪಿ) ಪ್ರವಾಸಿ ವಲಯದಲ್ಲಿ ಎರಡು ಗಂಡು ಚೀತಾಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಜನರಿಗೆ ಚೀತಾ ವೀಕ್ಷಣೆ ಭಾಗ್ಯ ಸಿಗಲಿದೆ.
ಅಗ್ನಿ ಹಾಗೂ ವಾಯು ಎಂಬ ಹೆಸರಿನ ಎರಡು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಅಹೆರಾ ಪ್ರವಾಸೋದ್ಯಮ ವಿಭಾಗದ ಪರೋಂಡ್ ಅರಣ್ಯ ವಲಯದಲ್ಲಿ ಬಿಡಲಾಗಿದೆ ಎಂದು ಸರ್ಕಾರ ಹೇಳಿದ್ದು, ಇದೀಗ ಪ್ರವಾಸಿಗರು ಚೀತಾಗಳನ್ನು ನೋಡಬಹುದಾಗಿದೆ.
9 ಚೀತಾ ಸಾವನ್ನಪ್ಪಿದ್ದರೂ ಕುನೋದಿಂದ ಅವುಗಳನ್ನು ವರ್ಗಾಯಿಸುವುದಿಲ್ಲ: ಕೇಂದ್ರ ಸಚಿವ
ಚೀತಾ ಮರುಪರಿಚಯ ಯೋಜನೆಯಡಿ 2022ರ ಸೆ.17ರಂದು ಕೆಎನ್‌ಪಿಯಲ್ಲಿ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ಬಿಡಲಾಗಿತ್ತು. ಆರೋಗ್ಯದ ದೃಷ್ಟಿಯಿಂದ ಈ ವರ್ಷದ ಆಗಸ್ಟ್‌ನಿಂದ 15 ಚೀತಾಗಳನ್ನು (7 ಗಂಡು, 7 ಹೆಣ್ಣು ಹಾಗೂ ಒಂದು ಮರಿ) ಪಶುವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು.
ವಿವಿಧ ಕಾರಣಗಳಿಂದಾಗಿ ಮಾರ್ಚ್‌ನಿಂದ ಆರು ವಯಸ್ಕ ಚೀತಾಗಳು ಸಾವನ್ನಪ್ಪಿದ್ದು, ಮೂರು ಮರಿಗಳು ಸೇರಿದಂತೆ ಒಟ್ಟು 9 ಚೀತಾಗಳು ಮೃತಪಟ್ಟಿತ್ತು.
ಕುನೋ ಪಶುವೈದ್ಯರಿಗೆ ಚೀತಾಗಳ ಆರೈಕೆ ಗೊತ್ತಿಲ್ಲ ಎಂದ ಅಫ್ರಿಕಾದ ಪಶುವೈದ್ಯರು
ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳು ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದವು. ಮಾರ್ಚ್‌ನಲ್ಲಿ, ಜ್ವಾಲಾ ಎಂಬ ಹೆಸರಿನ ನಮೀಬಿಯಾದ ಚಿರತೆಗೆ ನಾಲ್ಕು ಮರಿಗಳು ಜನಿಸಿದವು, ಅವುಗಳಲ್ಲಿ ಮೂರು ಮೇ ತಿಂಗಳಲ್ಲಿ ಸತ್ತವು.