ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್‌ ಆಸ್ಪತ್ರೆಗೆ ದಾಖಲು!

By BK Ashwin  |  First Published Dec 18, 2023, 7:34 AM IST

1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮೂಲಗಳು ತಿಳಿಸಿವೆ. 


ಕರಾಚಿ (ಪಾಕಿಸ್ತಾನ) (ಡಿಸೆಂಬರ್ 18, 2023): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ಸೋಮವಾರ ಮಾಹಿತಿ ನೀಡಿವೆ. ದಾವೂದ್‌ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಹೇಳಲಾಗಿದೆ.

1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪಾಕಿಸ್ತಾನ ಯಾವುದೇ ಅಧಿಕೃತ ಧೃಡೀಕರಣ ನೀಡಿಲ್ಲ. ಆದರೂ, ಈ ಬಗ್ಗೆ ಮೂಲಗಳು ತಿಳಿಸಿವೆ. ಕಳೆದ 2 ದಿನಗಳಿಂದ ದಾವೂದ್‌ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ಕರಾಚಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 

Tap to resize

Latest Videos

26/11 ಮುಂಬೈ ದಾಳಿ ಸಂಚುಕೋರ ಉಗ್ರ ಸಾಜಿದ್ ಮೀರ್‌ಗೆ ಜೈಲಲ್ಲೇ ವಿಷ: ಸ್ಥಿತಿ ಗಂಭೀರ?
 
ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯೊಳಗೆ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ ಮತ್ತು ಆ ಇಡೀ ಕಟ್ಟಡದ ಫ್ಲೋರ್‌ನಲ್ಲಿ ಅವರೊಬ್ಬರೇ ಏಕೈಕ ರೋಗಿ ಎಂದು ತಿಳಿದುಬಂದಿದೆ. ಹಾಗೂ, 
ಉನ್ನತ ಆಸ್ಪತ್ರೆ ಅಧಿಕಾರಿಗಳು ಮತ್ತು ಅವರ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಮಹಡಿಗೆ ಪ್ರವೇಶವಿದೆ ಎಂದೂ ಹೇಳಲಾಗಿದೆ.

ಮುಂಬೈ ಪೊಲೀಸರು ಭೂಗತ ಪಾತಕಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಭೂಗತ ಪಾತಕಿ ಎರಡನೇ ಮದುವೆಯಾಗಿ ಕರಾಚಿಯಲ್ಲೇ ಇದ್ದಾರೆ ಎಂದು ಜನವರಿಯಲ್ಲಿ ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಪುತ್ರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಹೇಳಿಕೆ ನೀಡಿದ್ದರು. ದಾವೂದ್ ಇಬ್ರಾಹಿಂ ಮತ್ತು ಆತನ ಉನ್ನತ ಸಹಾಯಕರು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣವನ್ನು ನಿಯಂತ್ರಿಸುತ್ತಿದ್ದಾರೆ ಎಂದೂ ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. 

ಲಖ್‌ಬೀರ್ ಸಿಂಗ್ ರೋಡೆ: ಪಾಕಿಸ್ತಾನದಲ್ಲಿ ಸಾವಿಗೀಡಾದ ಖಲಿಸ್ತಾನಿ ಉಗ್ರ ನಾಯಕ, ಭಿಂದ್ರನ್‌ವಾಲೆ ಸೋದರಳಿಯ!

1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ದಶಕಗಳಿಂದ ಪಾಕಿಸ್ತಾನದಲ್ಲೇ ಇದ್ದಾರೆ ಎಂದು ವರದಿಯಾಗಿದೆ. ವಿನಾಶಕಾರಿ ಬಾಂಬ್ ಸ್ಫೋಟಗಳು 250ಕ್ಕೂ ಹೆಚ್ಚು ಜನರನ್ನು ಕೊಂದವು ಮತ್ತು ಸಾವಿರಾರು ಜನರು ಗಾಯಗೊಂಡರು.

ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್‌ ಇಬ್ರಾಹಿಂ ವಾಸಿಸುತ್ತಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಆಗಾಗ್ಗೆ ಹೇಳಿದ್ದಾರೆ. ಆದರೆ ಆ ದೇಶದಲ್ಲಿ ಆತನ ಇರುವಿಕೆಯನ್ನು ಪಾಕಿಸ್ತಾನ ಆಗಾಗ್ಗೆ ನಿರಾಕರಿಸುತ್ತಲೇ ಬಂದಿದೆ.

ಅಪರಿಚಿತ ಮತ್ತೆ ಟ್ರೆಂಡ್, ಉಧಮಪುರ ಉಗ್ರ ದಾಳಿ ಮಾಸ್ಟರ್ ಮೈಂಡ್ ಪಾಕಿಸ್ತಾನದಲ್ಲಿ ಹತ್ಯೆ!

click me!