
ಭುವನೇಶ್ವರ್: ತನ್ನನ್ನು ದತ್ತು ಪಡೆದ ಅಮೆರಿಕನ್ ಪೋಷಕರು ತನಗೆ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ನನ್ನನ್ನು ಹೇಗಾದರು ಮಾಡಿ ರಕ್ಷಿಸುವಂತೆ ಒಡಿಶಾದ 21ರ ಹರೆಯದ ಯುವತಿಯೊಬ್ಬಳು ಒಡಿಶಾದ ಸಿಎಂ ಮೋಹನ್ ಚರಣ್ ಮಾಜಿ ಅವರಿಗೆ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈಕೆಯನ್ನು ಅಮೆರಿಕಾದ ದಂಪತಿ 7 ವರ್ಷಗಳ ಹಿಂದೆ ದತ್ತು ಪಡೆದು ಅಮೆರಿಕಾಗೆ ಕರೆದೊಯ್ದಿದ್ದರು. ಆದರೆ ದತ್ತು ಪಡೆದ ಪೋಷಕರು ನನಗೆ ಕಿರುಕುಳ ನೀಡುತ್ತಿದ್ದಾರೆ ನನಗೆ ನನ್ನ ನಂಬಿಕೆಯನ್ನು ಬದಲಾಯಿಸುವಂತೆ ಹೇಳುತ್ತಿದ್ದಾರೆ. ಒಡಿಶಾದಲ್ಲಿ ತಾನು ಅನಾಥೆಯಾದರು ಖುಷಿ ಖುಷಿಯಾಗಿದ್ದೆ. ಆದರೆ ಇಲ್ಲಿ ನಾನು ಸದಾ ಕಣೀರು ಹಾಕುವಂತಾಗಿದೆ. ಇಲ್ಲಿ ಖುಷಿ ಅನ್ನೋದೇ ಮಾಯವಾಗಿದೆ. ನನಗೆ ಇಲ್ಲಿಂದ ಮರಳಿ ಒಡಿಶಾಗೆ ಬರುವುದಕ್ಕೆ ಹೇಗಾದರು ಮಾಡಿ ಸಹಾಯ ಮಾಡಿ ಎಂದು ಆ 21ರ ಹರೆಯದ ಹುಡುಗಿ ವೀಡಿಯೋ ಮೂಲಕ ಕಣ್ಣೀರಿಡುತ್ತಾ ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಜಿ ಅವರಿಗೆ ಮನವಿ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
7 ವರ್ಷದ ಹಿಂದೆ ದತ್ತು ಪಡೆದಿದ್ದ ಅಮೆರಿಕನ್ ಪೋಷಕರು
ತನ್ನ ಹೆಸರು ಪೂಜಾ(ಸೇಜಲ್) ಎಂದು ಹೇಳಿಕೊಂಡಿರುವ ಆ 21ರ ಹರೆಯದ ಯುವತಿ ತಾನು ಇಲ್ಲಿ ತನ್ನ ದತ್ತು ತಾಯಿಯಿಂದ ನರಕ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಪೂಜಾಳನ್ನು 2018ರಲ್ಲಿ ಅಂದರೆ 7 ವರ್ಷಗಳ ಹಿಂದೆ ಅಮೆರಿಕನ್ ದಂಪತಿ ದತ್ತು ಪಡೆದಿದ್ದರು. ಆದರೆ ಇಲ್ಲಿ ತನ್ನ ದತ್ತು ತಾಯಿ ತನಗೆ ದೈಹಿಕ ಮಾನಸಿಕ ಹಿಂಸೆ ಕೊಡುತ್ತಿದ್ದಾಳೆ. ಮನೆಯ ಎಲ್ಲಾ ಕೆಲಸವನ್ನು ಆಕೆ ನನ್ನ ಕೈಯಲ್ಲಿ ಮಾಡಿಸುತ್ತಿದ್ದಾಳೆ ಎಂದು ಆ ಯುವತಿ ಆರೋಪಿಸಿದ್ದಾಳೆ.
ಒಡಿಶಾದ ಮುಖ್ಯಮಂತ್ರಿಯವರು ನಾನು ಮರಳಿ ಮನೆ ಸೇರುವುದಕ್ಕೆ ಸಹಾಯ ಮಾಡಬೇಕು ಎಂದು ನಾನು ವಿನಮ್ರ ವಿನಂತಿ ಮಾಡ್ತಾ ಇದ್ದೇನೆ. ನನಗೆ ಇಲ್ಲಿ ಸಾಕಷ್ಟು ಕಿರುಕುಳ ನೀಡಲಾಗ್ತಿದೆ. ನಾನು ಮತ್ತೆ ಒಡಿಶಾಗೆ ಮರಳಬೇಕು ಹಾಗೂ ಅಲ್ಲಿ ನಾನು ನನ್ನ ನಿಜವಾದ ಪೋಷಕರನ್ನು ಹುಡುಕಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ನಿರಂತರ ಕಿರುಕುಳದಿಂದ ಭಯದಿಂದಲೇ ಬದುಕುವಂತಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ತನ್ನ ವೀಸಾ ಅವಧಿ 2023ರಲ್ಲೇ ಮುಗಿದಿದೆ ಎಂದು ಆಕೆ ಹೇಳಿದ್ದಾಳೆ.
ತನ್ನ ದತ್ತು ತಾಯಿ ತನ್ನನ್ನು ತನ್ನ ಆಸೆಗೆ ವಿರುದ್ಧವಾಗಿ ಕ್ರಿಶ್ಚಿಯಾನಿಟಿಗೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಅವರು ಈಗಾಗಲೇ ಆಕೆಯನ್ನು ಕೊಲೆ ಮಾಡುವುದಕ್ಕೆ ಯತ್ನಿಸಿದ್ದಾರೆ ಎಂದು ಪೂಜಾಳ ಸ್ನೇಹಿತ ಪೂಜಾಳಿಗೆ ಆನ್‌ಲೈನ್‌ನಲ್ಲಿ ವೀಡಿಯೋ ಮಾಡುವಂತೆ ಸಲಹೆ ನೀಡಿದಅಮರ್ ದಾಸ್ ಎಂಬುವವರು ಹೇಳಿದ್ದಾರೆ.
ರೈಲಲ್ಲಿ ಪ್ರಯಾಣಿಸುವ ವೇಳೆ ಪೋಷಕರಿಂದ ಬೇರಾಗಿದ್ದ ಪೂಜಾ
2006ರಲ್ಲಿ ಜನಿಸಿದ ಪೂಜಾ ರೈಲೊಂದರಲ್ಲಿ ರಾಜ್ಯದಿಂದ ಹೊರಗೆ ಪ್ರಯಾಣಿಸುತ್ತಿದ್ದ ವೇಳೆ ಪೋಷಕರಿಂದ ಪ್ರತ್ಯೇಕಗೊಂಡಿದ್ದಳು. ನಂತರ ಮಕ್ಕಳ ರಕ್ಷಣಾ ತಂಡಕ್ಕೆ ಸಿಕ್ಕಿ ಆಕೆಯನ್ನು ಒಡಿಶಾಗೆ ಕರೆತರಲಾಗಿತ್ತು. ಆರಂಭದಲ್ಲಿ ಈಕೆಯನ್ನು ಒಡಿಶಾದ ಬಾಲಸೋರ್‌ನಲ್ಲಿರುವ ನೀಲಗಿರಿಯ ಆಶ್ರಯದಲ್ಲಿ ಇಡಲಾಗಿತ್ತು. ನಂತರ ಭುವನೇಶ್ವರದ ನಹರ್‌ಕಾಂತದಲ್ಲಿರುವ ಕನ್ಯಾ ಆಶ್ರಮಕ್ಕೆ ಕರೆತರಲಾಗಿತ್ತು. ನಂತರ ಅಮೆರಿಕನ್ ದಂಪತಿ ಆಕೆಯನ್ನು 7 ವರ್ಷಗಳ ಹಿಂದೆ ದತ್ತು ಪಡೆದಿದ್ದರು.
ಈ ನಡುವೆ 2023ರಲ್ಲಿ ಈಕೆಗೆ ಓಡಿಶಾದಲ್ಲಿ ತನ್ನ ಜೊತೆಗೆ ಓದುತ್ತಿದ್ದ ಅಮರ್ ದಾಸ್ ಎಂಬ ಹುಡುಗ ಆನ್‌ಲೈನ್‌ನಲ್ಲಿ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದಾನೆ. ಈ ವೇಳೆ ಅಮರ್ ಜೊತೆ ಆಕೆ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಈ ವೀಡಿಯೋವನ್ನು ಅಮರ್ ಹಲವು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೂಜಾಳ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ.
ಇದನ್ನು ಓದಿ: ತಾನು ಕೆಲಸ ಮಾಡ್ತಿದ್ದ ಅಲ್ ಫಲಾಹ್ ಕಾಲೇಜು ಲ್ಯಾಬನ್ನೇ ಆರ್‌ಡಿಎಕ್ಸ್ ಮಾಡಲು ಬಳಿಸಿದ್ನಾ ಟೆರರಿಸ್ಟ್ ಡಾಕ್ಟರ್
ಇದನ್ನು ಓದಿ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ನಿಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ