ಚೀನಾದ ಮೇಲೆ ಹದ್ದಿನಕಣ್ಣು, ಎಲ್‌ಎಸಿ ಉದ್ದಕ್ಕೂ ಗುಪ್ತಚರ ಪೋಸ್ಟ್‌ ಸ್ಥಾಪಿಸಲು ಕೇಂದ್ರದ ಅನುಮೋದನೆ!

Published : Oct 02, 2023, 08:01 PM IST
ಚೀನಾದ ಮೇಲೆ ಹದ್ದಿನಕಣ್ಣು, ಎಲ್‌ಎಸಿ ಉದ್ದಕ್ಕೂ ಗುಪ್ತಚರ ಪೋಸ್ಟ್‌ ಸ್ಥಾಪಿಸಲು ಕೇಂದ್ರದ ಅನುಮೋದನೆ!

ಸಾರಾಂಶ

ಚೀನಾದ ಮೇಲೆ ಹದ್ದಿನ ಕಣ್ಣಿಡುವ ಸಲುವಾಗಿ, ಕೇಂದ್ರ ಸರ್ಕಾರ ಎಲ್‌ಎಸಿಯುದ್ಧಕ್ಕೂ ಗಡಿ ಗುಪ್ತಚರ ಪೋಸ್ಟ್‌ಅನ್ನು ಸ್ಥಾಪನೆ ಮಾಡಲು ನಿರ್ಧಾರ ಮಾಡಿದೆ.

ಮಾಗೋ (ಅ.2):  ಬೀಜಿಂಗ್‌ನ ಮಿಲಿಟರಿ ಚಟುವಟಿಕೆಗಳು ಮತ್ತು ನೈಜ ನಿಯಂತ್ರಣ ರೇಖೆಯಾದ್ಯಂತ (ಎಲ್‌ಎಸಿ) ಶಸ್ತ್ರಾಸ್ತ್ರಗಳ ರಚನೆ ಸೇರಿದಂತೆ ಚೀನಾದ ಮೇಲೆ ಹದ್ದಿನ ಕಣ್ಣಿಡುವ ಸಲುವಾಗಿ ಭಾರತ-ಚೀನಾ ಗಡಿಯಲ್ಲಿ ಗಡಿ ಗುಪ್ತಚರ ಪೋಸ್ಟ್‌ಗಳು ಅಥವಾ ಬಿಐಪಿಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.ಇದು ಚೀನಾದಿಂದ ನಿಯಮಿತವಾಗಿ ಎಲ್‌ಎಸಿಯ ಉಲ್ಲಂಘನೆ ಹಾಗೂ ಯಥಾಸ್ಥಿತಿಯನ್ನು ಕದಡಲು ಮಾಡುವ ಪ್ರಯತ್ನದ ಬಗ್ಗೆ ಸರ್ಕಾರಕ್ಕೆ ಹಾಗೂ ಸೇನೆಗೆ ಎಚ್ಚರಿಸಲು ನೆರವಾಗುತ್ತದೆ ಎಂದು ಈ ಬೆಳವಣಿಗೆಯ ಪರಿಚಯವಿರುವ ವ್ಯಕ್ತಿಗಳು ತಿಳಿಸಿದ್ದಾರೆ.  ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP), ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO), ಇಂಟೆಲಿಜೆನ್ಸ್ ಬ್ಯೂರೋ, ಸಂಶೋಧನೆ ಮತ್ತು ವಿಶ್ಲೇಷಣೆಯಂತಹ ಏಜೆನ್ಸಿಗಳ ಸಹಯೋಗದೊಂದಿಗೆ ಎಲ್‌ಎಸಿಯ ಬಳಿ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ಚಟುವಟಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಅಭಿವೃದ್ಧಿಪಡಿಸಲು ಬಿಐಪಿಗಳು ಪ್ರತ್ಯೇಕವಾಗಿ ಗುಪ್ತಚರ ಅಧಿಕಾರಿಗಳನ್ನು ನಿಯೋಜಿಸುತ್ತವೆ. 

“ಐಟಿಬಿಪಿಯ ಬಾರ್ಡರ್ ಔಟ್‌ಪೋಸ್ಟ್‌ಗಳ (ಬಿಒಪಿ) ಜೊತೆಗೆ ರಚಿಸಲಾಗುವ ಪ್ರತಿ ಬಿಐಪಿಯು ನಿರ್ದಿಷ್ಟ ಕರ್ತವ್ಯಗಳೊಂದಿಗೆ 4-5 ಗುಪ್ತಚರ ಅಧಿಕಾರಿಗಳನ್ನು ಹೊಂದಿರುತ್ತದೆ. ಅವರು ಯಾವುದೇ ಅಸಾಮಾನ್ಯ ಚಟುವಟಿಕೆಯ ಬಗ್ಗೆ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾರೆ, ”ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಭಾರತ-ಚೀನಾ ಗಡಿಯಲ್ಲಿ ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೆ ಐಟಿಬಿಪಿಯ 180 ಕ್ಕೂ ಹೆಚ್ಚು ಬಿಓಪಿಗಳಿವೆ. ಈ ವರ್ಷದ ಆರಂಭದಲ್ಲಿ ಸರ್ಕಾರವು 47 ಹೆಚ್ಚುವರಿ ಗಡಿ ಹೊರಠಾಣೆಗಳನ್ನು ಮತ್ತು ಗಡಿ ಕಾವಲು ಪಡೆಯ 12 ಸ್ಟೇಜಿಂಗ್ ಕ್ಯಾಂಪ್‌ಗಳನ್ನು ಮಂಜೂರು ಮಾಡಿದೆ - ಇದನ್ನು ಹಿಮವೀರ್ಸ್‌ ಎಂದೂ ಸಹ ಕರೆಯಲಾಗುತ್ತದೆ. ಎಲ್‌ಎಸಿ ಉದ್ದಕ್ಕೂ 9,400 ಸಿಬ್ಬಂದಿ (ಅಥವಾ ಏಳು ಬೆಟಾಲಿಯನ್‌ಗಳು) ಈಗಾಗಲೇ ಅನುಮೋದಿಸಲಾಗಿದೆ.

ಮೇಲೆ ಉಲ್ಲೇಖಿಸಲಾದ ಉನ್ನತ ಅಧಿಕಾರಿಯು ಬಿಐಪಿಗಳ ನಿಖರವಾದ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲ ಮತ್ತು ಕೇಂದ್ರವು ಅದಕ್ಕೆ ಅನುಮೋದಿಸಿದ ಬಜೆಟ್ ಅನ್ನು ಬಹಿರಂಗಪಡಿಸಲಿಲ್ಲ ಆದರೆ ನಿಧಾನವಾಗಿ ಎಲ್ಲಾ ಸೂಕ್ಷ್ಮ ಬಿಓಪಿಗಳು ಈ ವಿಶೇಷ ತರಬೇತಿ ಪಡೆದ ಗುಪ್ತಚರ ಅಧಿಕಾರಿಗಳನ್ನು ಹೊಂದಿರುತ್ತವೆ. ಹೊಸ ರೀತಿಯ ಎಲ್ಲಾ ಕಣ್ಗಾವಲು ಸಾಧನಗಳನ್ನು ಇವರು ಹೊಂದಿರಲಿದ್ದಾರೆ. ಚೀನಾ ಎಲ್‌ಎಸಿಯಲ್ಲಿ  ತನ್ನ ಬಲವನ್ನು ಹಿಗ್ಗಿಸುವ ನಿಯಮಿತ ಪ್ರಯತ್ನಗಳ ಮೂಲಕ ಭಾರತವನ್ನು ಪ್ರಚೋದನೆ ಮಾಡುತ್ತಿದೆ ಮತ್ತು ಗಡಿಯ ಇನ್ನೊಂದು ಬದಿಯಲ್ಲಿ ವಾಯುನೆಲೆಗಳು ಮತ್ತು ಕ್ಷಿಪಣಿ ತಾಣಗಳಂತಹ ಮಿಲಿಟರಿ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಅಮೃತಕಾಲದ ಭಾರತಕ್ಕೆ ಪ್ರೇರಣೆ ಅವರೇ!

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಜೂನ್ 2020 ರ ಘರ್ಷಣೆಯಿಂದ ಎರಡು ಕಡೆಯವರು ಎಲ್‌ಎಸಿಯಲ್ಲಿ ಹಲವಾರು ಹಂತಗಳಲ್ಲಿ ಮುಖಾಮುಖಿಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 9 ರಂದು, ಅರುಣಾಚಲ ಪ್ರದೇಶದ ಯಾಂಗ್‌ಸ್ಟೆಯಲ್ಲಿ ಪಿಎಲ್‌ಎ ಪಡೆಗಳು ಒಳನುಗ್ಗಿದವು, ಇದು ಘರ್ಷಣೆಗೆ ಕಾರಣವಾಗಿತ್ತು.  ಇದರಿಂದಾಗಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದರು.  ಗಾಲ್ವಾನ್ ಮತ್ತು ಯಾಂಗ್‌ಸ್ಟೆ ಘಟನೆಯ ಬಳಿಕ ಭಾರತ ಸರ್ಕಾರವು ಎಲ್‌ಎಸಿಯಲ್ಲಿ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿದೆ ಮಾತ್ರವಲ್ಲದೆ ಗಡಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ಪರಿಚಯಿಸಿದೆ.

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ