ಭಾರತದಲ್ಲಿ ಮಾರಾಟವಾಗುವ ಟಾಪ್‌-5 ವಿಸ್ಕಿ ಬ್ರ್ಯಾಂಡ್‌ಗಳು

By Sathish Kumar KHFirst Published Oct 3, 2024, 7:11 PM IST
Highlights

ಭಾರತದಲ್ಲಿ 2023 ಮತ್ತು 2024ರಲ್ಲಿ ಅತಿಹೆಚ್ಚು ಮಾರಾಟವಾಗುವ ವಿಸ್ಕಿ ಬ್ರ್ಯಾಂಡ್‌ಗಳು ಯಾವುವು ಗೊತ್ತಾ? ವಾರ್ಷಿಕ ಎಷ್ಟು ಪ್ರಮಾಣದ ವಿಸ್ಕಿ ಮಾರಾಟ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ/ಬೆಂಗಳೂರು (ಅ.03): ಭಾರತದಲ್ಲಿ 2023-24ರಲ್ಲಿ ಅತಿಹೆಚ್ಚು ಮಾರಾಟವಾಗುವ ವಿಸ್ಕಿ ಬ್ರ್ಯಾಂಡ್‌ಗಳು ಯಾವುವು ಗೊತ್ತಾ? ವಾರ್ಷಿಕ ಎಷ್ಟು ಪ್ರಮಾಣದ ವಿಸ್ಕಿ ಮಾರಾಟ ಆಗುತ್ತದೆ ಎಂಬುದರ ವಿವರ ಇಲ್ಲಿದೆ ನೋಡಿ.. 

ಸಾಮಾಜಿಕ ಜಾಲತಾಣದಲ್ಲಿ ಇದೀಗ ಎಲ್ಲ ವಿಚಾರಗಳನ್ನೂ ಮುಕ್ತವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿಯೂ ಮದ್ಯಪ್ರಿಯರಿಗೆ ಇಷ್ಟವಾಗುವ ಹಾಗೂ ಅದರ ಸಂಬಂಧಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಇಷ್ಟವಾಗುತ್ತವೆ. ಆದ್ದರಿಂದ ಸೋಶಿಯಲ್ ಮಿಡಿಯಾ ಇನ್ಲ್ಪೂಯೆನ್ಸರ್‌ಗಳಿಗೆ ಈ ಸಂಬಂಧಿತ ವಿಡಿಯೋಗಳನ್ನು ಹೆಚ್ಚಾಗಿ ವಿಡಿಯೋ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಚಯನ್ ರಸ್ತೋಗಿ ಎನ್ನುವ ಸೋಶಿಯಲ್ ಮಿಡಿಯಾ ಇನ್ಲ್ಪೂಯೆನ್ಸರ್ ತನ್ನ ಸ್ನೇಹಿತನಿಗೆ ಯಾವ ಬ್ರ್ಯಾಂಡ್‌ನ ವಿಸ್ಕಿ ಹೆಚ್ಚು ಮಾರಾಟ ಆಗುತ್ತಿದೆ ಎಂಬ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾನೆ. ಅದರಲ್ಲಿ ಆತನ ಸ್ನೇಹಿತ ಹಲವು ಹೆಸರುಗಳನ್ನು ಹೇಳುತ್ತಾನೆ. ಆಗ ಸ್ನೇಹಿತ ಹೇಳುವ ವಿಸ್ಕಿಗಳಲ್ಲಿ ಟಾಪ್-5 ವಿಸ್ಕಿ ಬ್ರ್ಯಾಂಡ್ ಯಾವುವು ಎಂಬ ಮಾಹಿತಿ ನೀಡಿದ್ದಾನೆ. 

Latest Videos

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 5 ಬಿಯರ್ ಬ್ರ್ಯಾಂಡ್‌ಗಳು

ಅತಿಹೆಚ್ಚು ಮಾರಾಟವಾದ ಬ್ರ್ಯಾಂಡ್ ಮೆಕ್‌ಡೊವೆಲ್ಸ್: 
ಮೆಕ್‌ಡೊವೆಲ್ಸ್ ನಂ.1 ವಿಸ್ಕಿ ಬ್ರ್ಯಾಂಡ್ ಮದ್ಯವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನಿಂದ ತಯಾರಿಸಲ್ಪಟ್ಟ ಭಾರತೀಯ ಬ್ರಾಂಡ್‌ಗಳ ಸ್ಪಿರಿಟ್ ಆಗಿದೆ. ಇದಕ್ಕೆ ಭಾರತದಲ್ಲಿ ನಂ. ಯಾರಿ ಕಾ ನಂಬರ್ 1 ಸ್ಪಿರಿಟ್ (No1 Yaari Ka No1 Spirit) ಎಂಬ ಟ್ಯಾಗ್ ಲೈನ್ ಕೊಡಲಾಗಿದೆ. ಈ ಸಂಸ್ಥೆಯಿಂದ ಮದ್ಯ, ನೀರು ಹಾಗೂ ಸೋಡಾವನ್ನು ಉತ್ಪಾದಿಸಲಾಗುತ್ತದೆ. ಇನ್ನು ಮೆಕ್‌ಡೊವೆಲ್‌ನ ನಂ.1 ಬ್ರ್ಯಾಂಡ್ 2023ರಲ್ಲಿ 31.4 ಮಿಲಿಯನ್ ಕೇಸ್‌ಗಳು ಮಾರಾಟವಾಗುವುದರೊಂದಿಗೆ ವಿಶ್ವದ ಅತಿ ಹೆಚ್ಚು ಮಾರಾಟವಾದ ಭಾರತೀಯ ವಿಸ್ಕಿ ಮತ್ತು ಅತ್ಯಂತ ಜನಪ್ರಿಯ ವಿಸ್ಕಿ ಬ್ರ್ಯಾಂಡ್ ಆಗಿದೆ.

2023ರಲ್ಲಿ ಮಾರಾಟವಾದ ಟಾಪ್-5 ಭಾರತೀಯ ವಿಸ್ಕಿ ಬ್ರಾಂಡ್‌ಗಳು:
ಮೆಕ್‌ಡೊವೆಲ್‌ನ ನಂ.1: 2023ರಲ್ಲಿ 31.4 ಮಿಲಿಯನ್ ಕೇಸ್‌ಗಳು ಮಾರಾಡವಾಗಿವೆ.
ರಾಯಲ್ ಸ್ಟಾಗ್: 2023ರಲ್ಲಿ 27.9 ಮಿಲಿಯನ್ ಕೇಸ್‌ಗಳನ್ನು ಮಾರಾಟ ಮಾಡಲಾಗಿದೆ. 
ಆಫೀಸರ್ಸ್ ಚಾಯ್ಸ್: 2023ರಲ್ಲಿ 23.4 ಮಿಲಿಯನ್ ಕೇಸ್‌ಗಳನ್ನು ಮಾರಾಟ ಮಾಡಲಾಗಿದೆ
ಇಂಪೀರಿಯಲ್ ಬ್ಲೂ: 2023 ರಲ್ಲಿ 22.8 ಮಿಲಿಯನ್ ಕೇಸ್‌ಗಳನ್ನು ಮಾರಾಟ ಮಾಡಿದೆ
ಸಿಗ್ನೇಚರ್ ವಿಸ್ಕಿ: 2023 ರಲ್ಲಿ 2.9 ಮಿಲಿಯನ್ ಕೇಸ್‌ಗಳನ್ನು ಮಾರಾಟ ಮಾಡಲಾಗಿದೆ.

ಒಂದು ವರ್ಷದಲ್ಲಿ ಶೇ.16 ಪರ್ಸೆಂಟ್ ವಿಸ್ಕಿ ಮಾರಾಟ ಹೆಚ್ಚಳ: ಒಟ್ಟಾರೆ ಕಳೆದ 2022ಕ್ಕೆ ಹೋಲಿಕೆ ಮಾಡಿದರೆ 2023ರಲ್ಲಿ ಶೇ.15.9 ಪರ್ಸೆಂಟ್ ವಿಸ್ಕಿ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಇನ್ನು 2024ರ 9 ತಿಂಗಳಲ್ಲಿ ಕೂಡ ಇದೇ ಬ್ರ್ಯಾಂಡ್‌ಗಳು ತಮ್ಮ ಮಾರಾಟದ ಸ್ಥಾನವನ್ನು ಉಳಿಸಿಕೊಂಡಿವೆ. ಆದರೆ, 2023ಕ್ಕಿಂತ ಹೆಚ್ಚು ವಿಸ್ಕಿ ಬ್ರ್ಯಾಂಡ್‌ಗಳು ಮಾರಾಟ ಆಗುತ್ತಿವೆ ಎಂದು ಕಳೆದೆರಡು ತ್ರೈಮಾಸಿಕ ವರದಿಯಿಂದ ಬಹಿರಂಗ  ಆಗಿದೆ.

ಇದನ್ನೂ ಓದಿ: ಅಲ್ಲಿ ಬಿಗ್ ಬಾಸ್‌ಗೇ ಬೆದರಿಸಿದ ಲಾಯರ್ ಜಗದೀಶ: ಇಲ್ಲಿ ವಕೀಲಿಕೆ ಲೈಸೆನ್ಸ್ ರದ್ದುಗೊಳಿಸಿದ ಬಾರ್ ಕೌನ್ಸಿಲ್!

2024ರ 9 ತಿಂಗಳಲ್ಲಿ ಮಾರಾಟವಾದ ಟಾಪ್ 5 ಬ್ರ್ಯಾಂಡ್‌ಗಳು

  1. ಮೆಕ್‌ಡೊವೆಲ್‌ನ ನಂ.1
  2. ರಾಯಲ್ ಸ್ಟ್ಯಾಗ್ 
  3. ಆಫಿಸರ್ಸ್ ಚಾಯ್ಸ್
  4. ಇಂಪೀರಿಯಲ್ ಬ್ಲೂ
  5. 8ಪಿಎಂ ವಿಸ್ಕಿ

ಈ ಬ್ರ್ಯಾಂಡ್‌ಗಳಲ್ಲದೇ ಇತರೆ ಕೆಲವು ಜನಪ್ರಿಯ ಭಾರತೀಯ ವಿಸ್ಕಿ ಬ್ರಾಂಡ್‌ಗಳು ಇಲ್ಲಿವೆ ನೋಡಿ. ಡೈರೆಕ್ಟರ್ಸ್ ಸ್ಪೆಷಲ್ ವಿಸ್ಕಿ, ಸ್ಟರ್ಲಿಂಗ್ ರಿಸರ್ವ್ ಪ್ರೀಮಿಯಂ ವಿಸ್ಕಿಗಳು, ರಾಯಲ್ ಚಾಲೆಂಜ್, ಬ್ಲೆಂಡರ್ಸ್ ಪ್ರೈಡ್ ಹಾಗೂ 8ಪಿಎಂ ವಿಸ್ಕಿ. ಇವುಗಳೆಲ್ಲವೂ ಬ್ರ್ಯಾಂಡ್‌ಗಳಾಗಿದ್ದು, ಉಳಿದವುಗಳನ್ನು ಲೋಕಲ್ ಎಣ್ಣೆ ಎಂದು ಹೇಳಲಾಗುತ್ತದೆ.

click me!