ಟೂಲ್ ಕಿಟ್ ಪ್ರಕರಣ; ಸಂಬೀತ್ ವಿರುದ್ಧ ಕಾಂಗ್ರೆಸ್ ದೂರು, FIR

By Suvarna News  |  First Published May 22, 2021, 2:44 PM IST

*  ಬಿಜೆಪಿ  ಮತ್ತು ಕಾಂಗ್ರೆಸ್ ನಡುವೆ ಟೂಲ್ ಕಿಟ್ ಟ್ವಿಟರ್ ವಾರ್
* ಬಿಜೆಪಿ ವಕ್ತಾರ ಸಂಬೀತ್ ಪಾತ್ರ ವಿರುದ್ಧ ಎಫ್ಐಆರ್
* ಪ್ರಕರಣದ ವಿಚಾರಣೆ ಅಂತ್ಯವಾಗುವವರೆಗೂ ಟ್ವೀಟ್ ತೆಗೆದು ಹಾಕಿ


ನವದೆಹಲಿ(ಮೇ 22)  ಕೊರೋನಾ ಸಂದರ್ಭದ  ಕಾಂಗ್ರೆಸ್ ಟೂಲ್ ಕಿಟ್ ಮತ್ತು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಮ್ಯಾನುಪಿಲೇಟೇಡ್ ಮೀಡಿಯಾ ಈ  ಕೆಲಸ ಮಾಡಿದೆ ಎಂದು ಟ್ವಿಟರ್ ಹೇಳಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರಕ್ಕೆ ಇದೊಂದು ವೇದಿಕೆ ಕಲ್ಪಿಸಿಕೊಟ್ಟಿದೆ.

ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ  ವಿರುದ್ಧ ಕಾಂಗ್ರೆಸ್ ಎಫ್ಐಆರ್ ದಾಖಲಿಸಿದೆ. ಪ್ರಧಾನಿ ಮತ್ತು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪಾತ್ರಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಈ ಪ್ರಕರಣದ ತನಿಖೆ ಅಂತ್ಯವಾಗುವವರೆಗೂ ಟ್ವೀಟ್ ತೆಗೆದು ಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿದೆ. 

Tap to resize

Latest Videos

undefined

ಏನಿದು ಮಿಶ್ರ ಕೊರೋನಾ ಲಸಿಕೆ? 

ಟ್ವೀಟ್  ಜತೆ ಸಂಬೀತ್ ಅಳವಡಿಕೆ ಮಾಡಿದ್ದ ಪೋಟೋ, ವಿಡಿಯೋ ಮತ್ತು ಇಮೇಜ್ ಗಳನ್ನು ಕೆಲವರು ಗೊತ್ತಾಗದಂತೆ ಬದಲಾಯಿಸಿದ್ದಾರೆ ಎಂದು ಟ್ವಿಟರ್ ಹೇಳಿತ್ತು.  ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ,  ವಕ್ತಾರ ಸಂಬೀತ್ ಪಾತ್ರಾ ವಾರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲು ಕಾಂಗ್ರೆಸ್ ಒತ್ತಾಯ ಮಾಡಿತ್ತು. 

ಕಾಂಗ್ರೆಸ್ ಟೂಲ್ ಕಿಟ್ ಗೆ ಸಂಬಂಧಿಸಿ ಸಂಬೀತ್ ಸರಣಿ ಟ್ವೀಟ್ ಮಾಡಿದ್ದರು.  ಕಾಂಗ್ರೆಸ್ ಇದನ್ನೇ ದೊಡ್ಡ ಪ್ರಚಾರದ ವಸ್ತು  ಮಾಡಿಕೊಂಡಿದೆ ಎಂದಿದ್ದರು. ಆದರೆ ಸಂಬೀತ್ ಟ್ವೀಟ್ ನ್ನು ಕೆಲ ಶಕ್ತಿಗಳು ತಮಗೆ ಬೇಕಾದಂತೆ ಬದಲಾಸಿಕೊಂಡಿದ್ದು  ಗೊಂದಲಕ್ಕೆ ಕಾರಣವಾಗಿದೆ ಎಂದು ಟ್ವಿಟರ್ ಹೇಳಿತ್ತು.

ಪ್ರಧಾನಿ ಮೋದಿ ಹಾಗೂ ದೇಶದ ಮಾನ ಹರಾಜು ಹಾಕಲು ಕಾಂಗ್ರೆಸ್ ಟೂಲ್ ಕಿಟ್ ಬಿಡುಗಡೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವಿಟರ್ ಮೂಲಕ ದಾಖಲೆ ಬಿಡುಗಡೆ ಮಾಡಿದ್ದರು. ಆದರೆ ಪಾತ್ರಾ ತಿರುಚಿರುವ ಹಾಗೂ ಖಚಿತ ದಾಖಲೆಗಳಿಲ್ಲದ ಟೂಲ್ ಕಿಟ್ ಹಂಚಿಕೊಂಡಿದ್ದಾರೆ ಎಂದು ಟ್ವಿಟರ್ ಹೇಳಿತ್ತು.

 



 

Friends look at the in extending help to the needy during the Pandemic!
More of a PR exercise with the help of “Friendly Journalists” & “Influencers” than a soulful endeavour.
Read for yourselves the agenda of the Congress: pic.twitter.com/3b7c2GN0re

— Sambit Patra (@sambitswaraj)
click me!