ವರ್ಷದ ಕೊನೆಗೆ ಎಲ್ಲ ಯುವಜನಕ್ಕೂ ಲಸಿಕೆ ಎಂದ ಆರೋಗ್ಯ ಸಚಿವ

By Suvarna NewsFirst Published May 22, 2021, 2:05 PM IST
Highlights
  • ವರ್ಷದ ಕೊನೆಗಾಗುವಾಗ ಎಲ್ಲ ಯುವಜನರಿಗೂ ಲಸಿಕೆ
  • ವರ್ಷಾಂತ್ಯಕ್ಕಾಗುವಾಗ ಎಲ್ಲ ಯುವಜನರಿಗೆ ವ್ಯಾಕ್ಸೀನ್ ನೀಡಲು ಭಾರತಕ್ಕೆ ಸಾಧ್ಯ ಎಂದ ಆರೋಗ್ಯ ಸಚಿವ

ದೆಹಲಿ(ಮೇ.22): ಈ ವರ್ಷಾಂತ್ಯದ ವೇಳೆಗೆ ಕೋವಿಡ್ -19 ವಿರುದ್ಧ ಯುವಜನರಿಗೂ ಲಸಿಕೆ ಹಾಕುವ ಸ್ಥಿತಿಗೆ ಭಾರತ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಅವರು ಹೇಳಿದ್ದಾರೆ.

ಲಸಿಕೆ ತಯಾರಕರನ್ನು ಹೆಚ್ಚಿಸಲು ಮತ್ತು ಲಸಿಕೆ ಡೋಸ್‌ಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಭಾರತವು 216 ಕೋಟಿ ಲಸಿಕೆ ಡೋಸ್ ಸಂಗ್ರಹಿಸಲಿದೆ. ಜುಲೈ ವೇಳೆಗೆ 51 ಕೋಟಿ ಡೋಸ್‌ಗಳನ್ನು ಸಂಗ್ರಹಿಸಲಾಗುವುದು ಎಂದು ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಕೋವಿಡ್ -19 ಪರಿಶೀಲನಾ ಸಭೆಯಲ್ಲಿ ಹರ್ಷ ವರ್ಧನ್ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಪರಿಸ್ಥಿತಿ:

ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹರ್ಷ್ ವರ್ಧನ್ ಅವರು ಮಾತನಾಡಿ ಕಳೆದ 8 ದಿನಗಳಲ್ಲಿ ಕೊರೋನಾ ರಿಕವರಿ ರೇಟ್ ಹೆಚ್ಚಾಗಿದೆ. ಕಳೆದ ಐದು ದಿನಗಳಿಂದ ಭಾರತದಲ್ಲಿ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಹೆಚ್ಚುವರಿಯಾಗಿ, ದೇಶವು ಒಂದೇ ದಿನದಲ್ಲಿ 20,61,683 ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ ಎಂದಿದ್ದಾರೆ.



Union Health Minister reviewed Public Health Response to and Progress of with 9 States/UTs today.https://t.co/cs5hYxzf6A pic.twitter.com/Wovk4y2cic

— Ministry of Health (@MoHFW_INDIA)

ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವು ಮುಗಿದಿಲ್ಲ. ಸಣ್ಣ ರಾಜ್ಯಗಳಲ್ಲಿ ಈಗ ಕೊರೋನಾ ಪ್ರಕರಣಗಳಲ್ಲಿ ಏರುಗತಿಯಲ್ಲಿದೆ. ಕರ್ನಾಟಕ, ಕೇರಳದಲ್ಲಿ ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ.

click me!